ಫೆಬ್ರವರಿ‌ 13ಕ್ಕೆ ಆರ್.‌ಶ್ರೀನಿವಾಸ್ ನಿರ್ಮಾಣದ “ಕಾಟನ್ ಪೇಟೆ ಗೇಟ್” ಚಿತ್ರ ರಿಲೀಸ್

Untitled design 2026 01 10T210507.474

ಆರ್ . ಎಸ್. ಪ್ರೊಡಕ್ಷನ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ “ಯುವರಾಜ”, “ಕಂಠಿ”, “ಭರ್ಜರಿ”, “ಬಹದ್ದೂರ್ ” ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಆರ್. ಶ್ರೀನಿವಾಸ್ ಅವರು ನಿರ್ಮಿಸಿರುವ ಮತ್ತೊಂದು ಬಹುನಿರೀಕ್ಷಿತ ಚಿತ್ರ “ಕಾಟನ್ ಪೇಟೆ ಗೇಟ್” ಫೆಬ್ರವರಿ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಹೀಗೆ ಎಲ್ಲಾ ರೀತಿಯ ಮನರಂಜನಾತ್ಮಕ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವನ್ನು ವೈ. ರಾಜಕುಮಾರ್ ‌ಅವರು ನಿರ್ದೇಶಿಸಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರವು ಅದ್ದೂರಿಯಾಗಿ ನಿರ್ಮಾಣವಾಗಿದೆ.

ಯೋಗಿ ರೆಡ್ಡಿ ಅವರ ಛಾಯಾಗ್ರಹಣ, ಎನ್‌. ಎಸ್‌ ಪ್ರಸು ಅವರ ಸಂಗೀತ ಸಂಯೋಜನೆ, ಚೇತನ್ ಕುಮಾರ್ ಅವರ ಸಾಹಿತ್ಯ, ಶಿವ ಸರ್ವಣಿ ಅವರ ಸಂಕಲನವಿರುವ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ವೇಣುಗೋಪಾಲ್, ಯಶ್ವನ್‌, ಸುರಭಿ ತಿವಾರಿ, ಅನುಶಾ ಜೈನ್‌, ಸುಧೀಕ್ಷಾ, ಕಿಸ್ಲೆ ಚೌಧರಿ , ಪಾರ್ಥು, 8pm ಸಾಯಿಕುಮಾರ್, ರಘು, ಕಟ್ಟಪ್ಪ. ಮುಂತಾದವರು ನಟಿಸಿದ್ದಾರೆ.

Exit mobile version