ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಮೆಗಾಸ್ಟಾರ್ ಚಿರಂಜೀವಿ 158ನೇ ಸಿನಿಮಾ ಮಾಡ್ತಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಟಾಕ್ಸಿಕ್ ರಿಲೀಸ್‌ಗೂ ಮೊದಲೇ ಕೆವಿಎನ್ ಆ ಚಿತ್ರದ ಟೈಟಲ್ ಜೊತೆ ಟೀಸರ್‌ನ ಕೂಡ ರಿವೀಲ್ ಮಾಡಿದೆ. ಹಾಗಾದ್ರೆ ಏನು ಆ ಟೈಟಲ್..? ಕಥೆ ಏನು..? ಚಿರು ಖದರ್ ಹೇಗಿದೆ..? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ…
- ಚಿರಂಜೀವಿ-ಕೆವಿಎನ್ ಮೆಗಾ-158 ಚಿತ್ರದ ಟೈಟಲ್ ‘ಕಾಕ’
- ಸೂಪರ್‌ವೈಸರ್ ಸತ್ಯಂ ಪಾತ್ರದಲ್ಲಿ ಮೆಗಾಸ್ಟಾರ್ ಕಮಾಲ್
- ಟೈಟಲ್ ಜೊತೆ ಟೀಸರ್ ಔಟ್.. ಆರ್ಮ್ಸ್ ಡೀಲಿಂಗ್ ಕಥೆ?
- ವಾಲ್ಟೈರ್ ವೀರಯ್ಯ ನಂತ್ರ ಬಾಬಿ-ಚಿರು ಸೆಕೆಂಡ್ ಕಾಂಬೋ
ಬರ್ತ್ ಡೇ ಸಂಭ್ರಮದಲ್ಲಿರೋ ಮೆಗಾಸ್ಟಾರ್ ಚಿರಂಜೀವಿಗೆ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಭರ್ಜರಿ ಗಿಫ್ಟ್ ನೀಡಿದೆ. ಯೆಸ್.. ಇತ್ತೀಚೆಗೆ ಮೆಗಾ 158 ಮೂವಿ ಮುಹೂರ್ತ ಕಂಡಿತ್ತು. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವ್ರೇ ಖುದ್ದು ಕ್ಲಾಪ್ ಮಾಡಿ ಟೀಂಗೆ ಶುಭ ಹಾರೈಸಿದ್ರು. ಅದರ ಶೂಟಿಂಗ್ ಭರದಿಂದ ಸಾಗಿದ್ದು, ಚಿರು ಜನುಮ ದಿನದ ಹಿನ್ನೆಲೆ ಟೈಟಲ್ ಜೊತೆ ಟೀಸರ್ ಕೂಡ ಲಾಂಚ್ ಆಗಿದೆ.
ಮೆಗಾ 158 ಅನ್ನೋ ಟೈಟಲ್‌ನಲ್ಲಿ ಮುಹೂರ್ತ ಕಂಡು ಚಿತ್ರೀಕರಣ ಆಗ್ತಿದ್ದ ಈ ಸಿನಿಮಾಗೆ ಕಾಕ ಅಂತ ನಾಮಕರಣ ಮಾಡಿದ್ದಾರೆ ಡೈರೆಕ್ಟರ್ & ಪ್ರೊಡ್ಯೂಸರ್. ಹೌದು.. ಚಿರು ಈಗ ಟಾಲಿವುಡ್ ಅಂಗಳದ ಕಾಕ ಅಂದ್ರೆ ತಪ್ಪಾಗಲ್ಲ. ಅಂದಹಾಗೆ ಇಲ್ಲಿ ಮೆಗಾಸ್ಟಾರ್ ಸೂಪರ್‌ವೈಸರ್ ಸತ್ಯಂ ಅನ್ನೋ ಪಾತ್ರದಲ್ಲಿ ಕಾಣಸಿಗಲಿದ್ದಾರೆ. ಇವ್ರು ನೋಡೋಕೆ ಮಾತ್ರ ಸೂಪರ್‌ವೈಸರ್. ಆದ್ರೆ ಎಂಪ್ಲಾಯ್ಸ್ ಕಂಪನಿಯಿಂದ ಹೊರಗೆ ಹೋದ ಬಳಿಕ ಒಳಗಡೆ ಸೂಪರ್ ಹೀರೋ ಆಗ್ತಾರೆ. ಒಂದು ಶಾರ್ಪ್ ಶ್ವಾನ ಹಾಗೂ ಆತನ ಮಾತ್ರ ಒಳಗಡೆ ಉಳಿದು ಏನೆಲ್ಲಾ ಮಾಡ್ತಾರೆ ಅನ್ನೋದು ಇದರ ಕಥೆಯಾಗಿದೆ.
ನೋಡೋಕೆ ಇದು ಆರ್ಮ್ಸ್ ಡೀಲಿಂಗ್ ಕುರಿತ ಕಥಾನಕ ಹೊಂದಿದ್ದು, ಇಲ್ಲಿ ಚಿರು ಇಮೇಜ್‌ಗೆ ತಕ್ಕನಾದ ಪಾತ್ರ ಹಾಗೂ ಕಥೆಯನ್ನ ಬರೆದಂತಿದೆ ಡೈರೆಕ್ಟರ್ ಬಾಬಿ. ಅಂದಹಾಗೆ ಡೈರೆಕ್ಟರ್ ಬಾಬಿ ಮೆಗಾಸ್ಟಾರ್ ಜೊತೆ ಸಿನಿಮಾ ಮಾಡ್ತಿರೋದು ಇದೇ ಮೊದಲಲ್ಲ. ಈ ಹಿಂದೆ ವಾಲ್ಟೈರ್ ವೀರಯ್ಯ ಅನ್ನೋ ಮೆಗಾ ಬ್ಲಾಕ್‌ಬಸ್ಟರ್ ಮೂವಿ ನೀಡಿದ್ರು. ಮೂರು ವರ್ಷಗಳ ನಂತ್ರ ಚಿರು-ಬಾಬಿ ಕಾಂಬೋ ರಿಪೀಟ್ ಆಗ್ತಿದ್ದು, ಈ ಬಾರಿಯೂ ಸಹ ದೊಡ್ಡ ಮಟ್ಟದಲ್ಲಿ ಕಮಾಲ್ ಮಾಡೋ ಮುನ್ಸೂಚನೆ ನೀಡಿದೆ.
ಇಂಟರೆಸ್ಟಿಂಗ್ ಅಂದ್ರೆ ಚಿರಂಜೀವಿ ಈ ಕಾಕ ಚಿತ್ರಕ್ಕಾಗಿ ಜಿಮ್‌ನಲ್ಲಿ ಸಿಕ್ಕಾಪಟ್ಟೆ ಬೆವರಿಳಿಸಿ, ಬಾಡಿಯನ್ನ ಕಟ್ಟುಮಸ್ತು ಮಾಡಿಕೊಂಡಿದ್ದಾರೆ. ಅವ್ರ ಜಿಮ್ ವರ್ಕೌಟ್ ವಿಡಿಯೋ ಯಂಗ್‌ಸ್ಟರ್‌ಗಳನ್ನ ಕೂಡ ನಾಚಿಸುವಂತಿತ್ತು. ಇನ್ನೂ ಹೈದ್ರಾಬಾದ್ ಹಾಗೂ ತಮಿಳುನಾಡಿನ ಸುಂದರ ತಾಣಗಳಲ್ಲಿ ಕಾಕ ಶೂಟಿಂಗ್ ಭರದಿಂದ ಸಾಗಿದ್ದು, ಈ ಹಿಂದೆ ಸಣ್ಣ ಮೇಕಿಂಗ್ ಝಲಕ್‌ಗಳನ್ನ ರಿಲೀಸ್ ಮಾಡಿತ್ತು ಟೀಂ. ವಿಶೇಷ ಅಂದ್ರೆ ನಮ್ಮ ಕನ್ನಡದ ಲೇಡಿ ಸೂಪರ್ ಸ್ಟಾರ್ ರಚಿತಾರಾಮ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ಮೆಗಾಸ್ಟಾರ್ ಜೊತೆ ಧೂಳೆಬ್ಬಿಸಲಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
