ಲಕ್ಷ್ಮೀಪುತ್ರನಾಗಿ ಮಿಂಚ್ತಿರೋ ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ, ರಿಯಲ್ ಲೈಫ್‌ಗೆ ಹೀರೋಯಿನ್‌ನ ಹುಡುಕಿಕೊಂಡು ಆಗಿದೆ. ಸದ್ಯದಲ್ಲೇ ಸಪ್ತಪದಿ ಕೂಡ ತುಳಿಯಲಿದ್ದಾರೆ. ಆದ್ರೆ ರೀಲ್ ಲೈಫ್‌ಗೆ ಈತನಿಗೆ ನಾಯಕನಟಿಯೇ ಸಿಗ್ತಿಲ್ಲವಂತೆ. ಅದಕ್ಕಾಗಿ ಚಿಕ್ಕು ಪರದಾಡ್ತಿರೋ ಪರಿಯನ್ನ ನಾವು ಹೇಳ್ತೀವಿ ನೋಡಿ..
- ‘ಲಕ್ಷ್ಮೀಪುತ್ರ’ನಿಗೆ ಸಿಗದ ನಾಯಕಿ.. ಚಿಕ್ಕು ಫುಲ್ ಪರದಾಟ
- ರಿಯಲ್ ಲೈಫ್‌ಗೆ ಸಿಕ್ರು.. ರೀಲ್ ಲೈಫ್‌ಗೆ ಸಿಗ್ತಿಲ್ವಂತೆ ಗುರು
- ಕಮೆಡಿಯನ್ ಅಂತ ಉಪಾಧ್ಯಕ್ಷರನ್ನ ಆಡಿಕೊಂಡಿದ್ಯಾರು?
- AP ಅರ್ಜುನ್ ಕಣ್ಣಿಗೆ ಬಿದ್ದೇಬಿಟ್ರು ಅಪ್ಪಟ ಕನ್ನಡತಿ ವಂದಿತಾ
ಉಪಾಧ್ಯಕ್ಷ ಸಿನಿಮಾದ ಬಳಿಕ ನ್ಯಾಚುರಲ್ ಸ್ಟಾರ್ ಚಿಕ್ಕಣ್ಣನ ಲಕ್ ಬದಲಾಗಿದೆ. ಇಷ್ಟು ದಿನ ಕಮೆಡಿಯನ್ ಆಗಿದ್ದ ಚಿಕ್ಕಣ್ಣ, ಇದೀಗ ಹೀರೋ ಆಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಯೆಸ್.. ಒಂದ್ಕಡೆ ಲಕ್ಷ್ಮೀಪುತ್ರ ಸಿನಿಮಾ ಮುಗಿಯೋಕೆ ಮೊದಲೇ ಜೋಡೆತ್ತು ಕಿಕ್‌ಸ್ಟಾರ್ಟ್ ಆಗಿದೆ. ಚಿಕ್ಕು ಕೂಡ ಶರಣ್, ಕೋಮಲ್ ರೀತಿ ತಾನು ಕೂಡ ಯಾವ ಹೀರೋಗೂ ಕಮ್ಮಿ ಇಲ್ಲ ಅನ್ನೋದನ್ನ ಬಿಗ್ ಸ್ಕ್ರೀನ್ ಮೇಲೆ ಪ್ರೂವ್ ಮಾಡ್ತಿದ್ದಾರೆ.
ಸದ್ಯ ಚಿಕ್ಕಣ್ಣ ಲಕ್ಷ್ಮೀಪುತ್ರ ಅನ್ನೋ ಸಿನಿಮಾ ಮಾಡ್ತಿರೋದು ಎಲ್ರಿಗೂ ಗೊತ್ತೇಯಿದೆ. ಅದರಲ್ಲಿ ಹಿರಿಯನಟಿ ತಾರಾ ಅವರ ಮಗನಾಗಿ ಚಿಕ್ಕು ಬಣ್ಣ ಹಚ್ಚಿದ್ದಾರೆ. ಎಪಿ ಅರ್ಜುನ್ ನಿರ್ಮಾಣದ ಈ ಸಿನಿಮಾಗೆ ವಿಜಯ್ ಎಸ್ ಸ್ವಾಮಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸಿನಿಮಾದ ಶೂಟಿಂಗ್ ಬಹುತೇಕ ಮುಗೀತಾ ಬಂದಿದೆ. ಆದ್ರೆ ಇಲ್ಲಿಯವರೆಗೆ ನಾಯಕನಟಿ ಮಾತ್ರ ಯಾರು ಅಂತಾನೇ ಗೊತ್ತಾಗಿಲ್ಲ. ಯಾಕಂದ್ರೆ ಚಿತ್ರತಂಡ ರಿವೀಲ್ ಮಾಡಿಲ್ಲ.
ಹಾಗಂತ ನಾಯಕಿಯನ್ನ ಹುಡುಕದೆ ಏನಿಲ್ಲ. ಸಿಕ್ಕಾಪಟ್ಟೆ ಎಫರ್ಟ್ ಹಾಕಿ ನಾಯಕಿಯ ತಲಾಶ್ ಮಾಡಿದೆ ಟೀಂ. ಅದ್ರಲ್ಲೂ ಚಿಕ್ಕಣ್ಣ ಎಲ್ಲೇ ಹೋದ್ರೂ ಸಹ ಫಸ್ಟ್ ಕೇಳೋದೇ ನಿಮ್ ಸಿನಿಮಾಗೆ ಇನ್ನೂ ಹೀರೋಯಿನ್ ಸಿಕ್ಕಲ್ವಂತೆ ಅಂತ. ಟೀ ಅಂಗಡಿಯಿಂದ ಹಿಡಿದು, ಟ್ರಾಫಿಕ್ ಪೊಲೀಸರ ತನಕ ಎಲ್ಲರೂ ಅದನ್ನೇ ಕೇಳ್ತಿದ್ದಾರೆ.
ನೀವಂತೂ ಹುಡುಕಲ್ಲ ಬಿಡಿ ಸರ್ ಅಂತ ನಿರ್ದೇಶಕ ಹಾಗೂ ನಿರ್ಮಾಪಕರ ಮೇಲೆ ಬೇಸರಗೊಂಡ ಚಿಕ್ಕುನೇ ಒಂದಷ್ಟು ಮಂದಿ ನಾಯಕಿಯರಿಗೆ ಅಪ್ರೋಚ್ ಮಾಡ್ತಾರೆ. ಆದ್ರೆ ಬಿಗ್‌ಬಾಸ್ ಅಂತ ಒಬ್ರು, ಮದ್ವೆ ಫಿಕ್ಸ್ ಆಗಿದೆ ಅಂತ ಮತ್ತೊಬ್ರು, ನಮ್ ಫ್ರೆಂಡ್ ಬೇಡ ಅಂದ್ರು ಅಂತ ಮಗದೊಬ್ರು ಕೈ ಕೊಡ್ತಾರೆ. ಅಷ್ಟೇ ಅಲ್ಲ, ಕಮೆಡಿಯನ್ ಜೊತೆ ಬೇಡ, ಯಾವುದಾದ್ರೂ ದೊಡ್ಡ ಸ್ಟಾರ್ ಜೊತೆ ಲಾಂಚ್ ಆಗ್ಬೇಕು ಅಂತಲೂ ಒಬ್ರು ಆಫರ್‌ನ ರಿಜೆಕ್ಟ್ ಮಾಡ್ತಾರೆ. ಹಾಗೆ ರಿಜೆಕ್ಟ್ ಮಾಡಿದ ರಿಯಲ್ ನಾಯಕನಟಿ ಯಾರು ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ.
ಫೈನಲಿ ಅಪ್ಪಟ ಕನ್ನಡತಿಯೋರ್ವಳನ್ನ ಹುಡುಕುವಲ್ಲಿ ನಿರ್ಮಾಪಕ ಎಪಿ ಅರ್ಜುನ್ ಸಕ್ಸಸ್ ಆಗಿದ್ದಾರೆ. ಯೆಸ್.. ಹೊಸ ವರ್ಷದ ಪ್ರಯುಕ್ತ ಆ ಕ್ಲಾಸಿಕಲ್ ಬ್ಯೂಟಿಯನ್ನ ದೇವಸ್ಥಾನವೊಂದರಲ್ಲಿ ದೀಪ ಬೆಳಗುವಾಗ ಸೆಲೆಕ್ಟ್ ಮಾಡಿಕೊಂಡಿದೆ ಟೀಂ. ಆಕೆ ಬೇರಾರೂ ಅಲ್ಲ, ವಂದಿತಾ ಅನ್ನೋ ಅಚ್ಚ ಕನ್ನಡದ ಹುಡುಗಿ. ಅಂದಹಾಗೆ ಚಿಕ್ಕು ದೇವರ ಬಳಿ ನಾಯಕನಟಿಗಾಗಿ ಅಪ್ಲಿಕೇಷನ್ ಹಾಕುವ ಸಮಯದಲ್ಲೇ ಆಕೆ ಇವ್ರ ಕಣ್ಣಿಗೆ ಬಿದ್ದಿರೋದು ವಿಶೇಷ. ಅದನ್ನ ಕಾನ್ಸೆಪ್ಟ್ ವಿಡಿಯೋ ಮೂಲಕ ಅದ್ಭುತವಾಗಿ ಸೆರೆ ಹಿಡಿದು ಪ್ರಸ್ತುತ ಪಡಿಸಿದೆ ಟೀಂ ಲಕ್ಷ್ಮೀಪುತ್ರ.
ಮದ್ವೆ ಆಗೋಕೆ ರಿಯಲ್ ಲೈಫ್‌ಗೆ ಹೀರೋಯಿನ್‌ನ ಹುಡುಕಿಕೊಂಡಿರೋ ಚಿಕ್ಕುಗೆ, ಈ ತರಹ ರೀಲ್ ಲೈಫ್‌ಗೆ ನಾಯಕಿಯನ್ನ ಹುಡುಕೋ ಕಾಯಕ ಅಷ್ಟು ಸುಲಭವಾಗಿರಲಿಲ್ಲ ಅನ್ನೋದು ಇದರ ತಾತ್ಪರ್ಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
