ಕನ್ನಡ ಱಪರ್ ಚಂದನ್ ಶೆಟ್ಟಿ ಫಸ್ಟ್ ಇನ್ನಿಂಗ್ಸ್‌ಗಿಂತ ಸೆಕೆಂಡ್ ಇನ್ನಿಂಗ್ಸ್ ಸಖತ್ ಜೋರಿದೆ. ಇದೇ ಮೊದಲ ಬಾರಿಗೆ ಡಯನಾಮೈಟ್ ಅನ್ನೋ ಇಂಗ್ಲಿಷ್ ಆಲ್ಬಮ್ ಸಾಂಗ್ ಮಾಡಿರೋ ಚಂದನ್, ಪಾಪ್ ಸ್ಟಾರ್‌ನ ಹುಟ್ಟಿ ಹಾಕಿದ್ದಾರೆ. ಒನ್ಸ್ ಅಗೈನ್ ಅರಮನೆ ನಗರಿ ಮೈಸೂರಿನಲ್ಲೇ ಚಂದನ್‌ಗೆ ಸಿಕ್ಕ ಆ ಬ್ಯೂಟಿ ಯಾರು..? ಹಾಡು ಹೇಗಿರಲಿದೆ..? ಟೆಕ್ನಿಕಲಿ ಎಷ್ಟು ಸ್ಟ್ರಾಂಗ್ ಅನ್ನೋದಕ್ಕೆ ಈ ಕಲರ್‌ಫುಲ್ ಸ್ಟೋರಿ ನೋಡಿ.
- ಚಂದನ್ ಶೆಟ್ಟಿ ಗರಡಿ.. ಯಾರೀ ಪಾಪ್ ಸ್ಟಾರ್ ಡೈನಮೈಟ್ ?
- ಸಖತ್ ಕಲರ್‌ಫುಲ್ ಡಯಾನಮೈಟ್ ಇಂಗ್ಲಿಷ್ ಸಾಂಗ್..!
- ಮೈಸೂರಲ್ಲಿ ಸಿಕ್ಕ ಪಾಪ್ ಸ್ಟಾರ್ ಡಯಾನಾ ಯಾರು ಗೊತ್ತಾ?
- ಇದು ನೆಕ್ಸ್ಟ್ ಲೆವೆಲ್ ಆಲ್ಬಂ ಸಾಂಗ್.. ಱಪರ್ ಚಂದು ರಾಕ್ಸ್
ಚಂದನ್ ಶೆಟ್ಟಿ.. ಕನ್ನಡದ ಪ್ರತಿಭಾನ್ವಿತ ನಟ, ಸಂಗೀತ ಸಂಯೋಜಕ, ಗಾಯಕ, ಚಿತ್ರ ಸಾಹಿತಿ, ಱಪರ್ ಹೀಗೆ ಸಾಕಷ್ಟು ವಿಷಯಗಳಿಂದ ಗುರ್ತಿಸಿಕೊಂಡಿರೋ ಅಪ್ಪಟ ಕನ್ನಡ ಟ್ಯಾಲೆಂಟ್. ಸದ್ಯ ಚಂದನ್ ಕಮರ್ಷಿಯಲ್ ಹೀರೋ ಕೂಡ ಹೌದು. ಆದ್ರೆ ಅವ್ರ ಯುಎಸ್‌ಪಿ ಏನಪ್ಪಾ ಅಂದ್ರೆ ಆಲ್ಬಮ್ ಸಾಂಗ್ಸ್. ಲವ್, ಮದ್ವೆ, ಡಿವೋರ್ಸ್ ಬಳಿಕ ಚಂದನ್ ಲೈಫ್ ಸಖತ್ ಬದಲಾಗಿದೆ. ಮೊದಲ ಇನ್ನಿಂಗ್ಸ್‌ಗಿಂತ ಈ ಸೆಕೆಂಡ್ ಇನ್ನಿಂಗ್ಸ್ ಸಖತ್ ಇಂಪ್ರೆಸ್ಸೀವ್ ಆಗಿದೆ.
ಹೌದು.. ನಿವೇದಿತಾ ಗೌಡ ಜೊತೆ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟ ಚಂದನ್ ಶೆಟ್ಟಿ, ಇದೀಗ ಕಂಪ್ಲೀಟ್ ಆಗಿ ತಮ್ಮ ಮ್ಯೂಸಿಕ್ ಹಾಗೂ ನಟನಾ ಕರಿಯರ್ ಮೇಲೆ ಫೋಕಸ್ ಮಾಡ್ತಿದ್ದಾರೆ. ನ್ಯೂ ಇಯರ್‌ಗೆ ಇತ್ತೀಚೆಗೆ ಮಿಡ್‌ನೈಟ್ ಪಾರ್ಟಿ ಅನ್ನೋ ಸಾಂಗ್ ಬಿಟ್ಟಿದ್ರು. ಅದಕ್ಕೂ ಮುನ್ನ ಕ್ರಿಕೆಟರ್ ಕ್ರಿಸ್ ಗೇಲ್ ಜೊತೆ ಲೈಫ್ ಈಸ್ ಕ್ಯಾಸಿನೋ ಸಾಂಗ್ ಮಾಡಿದ್ರು.
ಗಾಂಜಿ ಮ್ಯೂಸಿಕಲ್ ಆಲ್ಬಮ್ ಹಾಗೂ ಕಾಟನ್ ಕ್ಯಾಂಡಿ ಸಾಂಗ್ಸ್ ಕೂಡ ಇಂಪ್ರೆಸ್ಸೀವ್ ಹಾಗೂ ಕಲರ್‌ಫುಲ್ ಆಗಿದ್ದವು. ಅದಕ್ಕಿಂತ ಹೆಚ್ಚಾಗಿ ಸಖತ್ ಇನ್ನೋವೇಟಿವ್ ಆಗಿದ್ದವು. ಸದಾ ಹೊಸತನಕ್ಕೆ ಹಾತೊರೆಯೋ ಚಂದನ್, ಪ್ರಯತ್ನದ ಜೊತೆ ಒಂದಿಲ್ಲೊಂದು ಹೊಸ ಪ್ರಯೋಗ ಮಾಡ್ತಾನೇ ಬರ್ತಿದ್ದಾರೆ. ಸದ್ಯ ಅಂತಹ ಹೊಚ್ಚ ಹೊಸ ಎಕ್ಸ್‌ಪೆರಿಮೆಂಟ್ ಡಯಾನಮೈಟ್ ಅನ್ನೋ ಇಂಗ್ಲಿಷ್ ಆಲ್ಬಂ ಸಾಂಗ್ ಆಗಿದೆ.
ಡಯಾನಮೈಟ್ ಸಾಂಗ್ ಇನ್ನೂ ರಿಲೀಸ್ ಆಗಿಲ್ಲ. ಆದ್ರೆ ಅದ್ರ ಒಂದು ಇಂಟ್ರಡಕ್ಷನ್ ಮಾತ್ರ ಹುಬ್ಬೇರಿಸೋ ಹಾಗಿದೆ. ಯೆಸ್.. ಈಕೆಯ ಹೆಸರು ಡಯಾನಾ. ಅಪ್ಪಟ ಕನ್ನಡತಿ. ಹೆರಿಟೇಜ್ ಸಿಟಿ ಮೈಸೂರಿನ ಮೂಲದವಳು. ಚಂದನ್ ಇತ್ತೀಚೆಗೆ ಬೆಂಗಳೂರಿನಿಂದ ಮೈಸೂರಿಗೆ ಶಿಫ್ಟ್ ಆದ ಬಳಿಕ ಡಯಾನಾ ಪರಿಚಯ ಆಗುತ್ತಂತೆ. ನಂತ್ರ ಆಕೆಯ ವಾಯ್ಸ್ ಕೂಡ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಆಕೆಯನ್ನ ಪಾಪ್ ಸ್ಟಾರ್ ಮಾಡುವ ಕನಸು ಕಾಣ್ತಾರೆ. ಅದನ್ನ ನನಸು ಮಾಡುವ ಪ್ರಯತ್ನವೇ ಈ ಡಯಾನಮೈಟ್. ಇದು ಡೈನಮೈಟ್‌ನಂತಹ ಸಾಂಗ್ ಕೂಡ ಹೌದು.
ತನ್ನದೇ ಗರಡಿಯಲ್ಲಿ ಚಂದನ್ ಶೆಟ್ಟಿ ಡಯಾನಾನ ಚೆನ್ನಾಗಿ ಪಳಗಿಸಿದ್ದಾರೆ. ಮುಂದೆ ಏನೆಲ್ಲಾ ಕಾನ್ಸಿಕ್ವೆನ್ಸಸ್ ಬರುತ್ತೆ ಅನ್ನೋದ್ರ ಅರಿವೂ ಕೂಡ ಮೂಡಿಸಿದ್ದಾರೆ. ಎಲ್ಲವೂ ಯೋಚಿಸಿ ಐ ಆ್ಯಮ್ ರೆಡಿ ಅಂದಿದ್ದಾರಂತೆ ಡಯಾನಾ. ಪಕ್ಕಾ ಅಮೆರಿಕ ಬಿಳಿ ಜಿರಳೆಯಂತಿರೋ ಈ ಡಯಾನಾ ನಮ್ಮ ಕನ್ನಡತಿಯೇ ಅನ್ನೋದು ಅಚ್ಚರಿ. ಅಂದಹಾಗೆ ಔಟ್ ಅಂಡ್ ಔಟ್ ಇಂಗ್ಲಿಷ್ ಸಾಂಗ್ ಇದಾಗಿದ್ದು, ಕನ್ನಡಿಗರು ನೀವು ಕನ್ನಡಿಗನಾಗಿದ್ದುಕೊಂಡು ಕನ್ನಡ ಸಾಂಗ್ ಮಾಡಿಲ್ಲ ಅನ್ನೋದಕ್ಕೂ ಚಂದನ್ ಉತ್ತರ ಕೊಟ್ಟಿದ್ದಾರೆ. ಕನ್ನಡಿಗನೊಬ್ಬ ಜಗ ಮೆಚ್ಚುವ ಇಂಗ್ಲಿಷ್ ಸಾಂಗ್ ಮಾಡೋದು ಕೂಡ ಒಂಥರಾ ಹೆಮ್ಮೆ ಅಲ್ಲವೇ..?
ಇನ್ನೂ ಈ ಹಾಡಿಗಾಗಿ ಚಂದನ್ ಒಂದಷ್ಟು ಮಂದಿ ಜೊತೆ ಕೊಲ್ಯಾಬೊರೇಟ್ ಆಗಿದ್ದಾರೆ. ಯೋ ಯೋ ಹನಿ ಸಿಂಗ್ ಸಾಂಗ್ಸ್‌ಗೆ ಸಿನಿಮಾಟೋಗ್ರಾಫರ್ ಆಗಿದ್ದಂತಹ ಟೆಕ್ನಿಷಿಯನ್‌ನ ತಂದು ಇದನ್ನ ಉತ್ತರ ಭಾರತದಲ್ಲಿ ಸೆರೆ ಹಿಡಿದಿದ್ದಾರೆ. ಸಾಂಗ್ ಸದ್ಯದಲ್ಲೇ ಹೊರಬರಲಿದ್ದು, ಇದು ಚಂದನ್ ಕರಿಯರ್‌ನ ದುಬಾರಿ ಹಾಗೂ ವೆರಿ ವೆರಿ ಕಲರ್‌ಫುಲ್ ಸಾಂಗ್ ಆಗೋ ಭರವಸೆ ಇದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
