ಕುಚಿಕು ಸ್ನೇಹಿತೆಯರ ಹಾಡು-ಹರಟೆ..! ಐಶ್ವರ್ಯ ಸಾಧನೆ ಕೊಂಡಾಡಿದ ಸ್ಯಾಂಡಲ್‌ವುಡ್‌ ಕ್ವೀನ್‌..!

11 (57)

ಡಿಸಿಎಂ ಡಿಕೆಶಿ ಪುತ್ರಿ ಐಶ್ವರ್ಯ ಡಿಕೆಎಸ್‌ ಹೆಗಡೆ ತಮ್ಮ ಹೊಸ ಯೂಟ್ಯೂಬ್‌ ಚಾನೆಲ್‌ ಶುರುಮಾಡಿದ್ದಾರೆ. ಬುಡ್ಡೀಸ್‌ ಬೆಂಚ್‌ ಅನ್ನೋ ಕಾರ್ಯಕ್ರಮದ ಮೂಲಕ ಹೊಸ ಟಾಕ್‌ ಶೋ ಶುರು ಮಾಡಿದ್ದು ಮೊಟ್ಟ ಮೊದಲನೇ ಅತಿಥಿಯಾಗಿ ಸ್ವಾಂಡಲ್‌ವುಡ್‌ ಕ್ವೀನ್‌ ರಮ್ಯಾ ಬಂದಿದ್ದಾರೆ. ನಟಿ ರಮ್ಯಾ ಹಾಗೂ ಐಶ್ವರ್ಯ ಡಿಕೆಎಸ್‌ ಈ ಹಿಂದಿನಿಂದಿಲೂ ಕುಚಿಕು ದೋಸ್ತ್‌ ಅನ್ನೋ ವಿಚಾರ ಈ ಕಾರ್ಯಕ್ರಮದ ಮೂಲಕ ರಿವೀಲ್‌ ಆಗಿದೆ.

ಡಿಸಿಎಂ ಡಿಕೆ ಶಿವಕುಮಾರ್‌ ಅವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲೂ ಮಿಂಚುತ್ತಿದ್ರೆ, ಡಿಕೆ ಶಿವಕುಮಾರ್ ಅವರ ಮೊದಲನೇ ಮಗಳು ಐಶ್ವರ್ಯ ಹೆಗಡೆ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಹೆಸರು ಮಾಡಿದ್ದಾರೆ. ಎಸ್ಎಂ ಕೃಷ್ಣ ಅವರ ಮೊಮ್ಮಗ, ಕೆಫೆ ಕಾಫಿ ಡೇ ಸಂಸ್ಥಾಪಕ, ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮರ್ತ್ಯ ಹೆಗ್ಡೆ ಕೈ ಹಿಡಿದ ಐಶ್ವರ್ಯ ತನ್ನದೇ ಒಡೆತನದ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ವೇದಿಕೆ ಮೇಲೆ ನಿಂತರೆ ಪ್ರೇಕ್ಷಕರು ಮಂತ್ರ ಮುಗ್ಧರಾಗುವಂತೆ ಮಾತಾಡೋ ಐಶ್ವರ್ಯ ಅವರ ಟಾಕಿಂಗ್ ಸ್ಟೈಲ್​ಗೆ ಅಭಿಮಾನಿಗಳಿದ್ದಾರೆ.

Exit mobile version