ಸ್ಟಾರ್, ಬಿಗ್ ಬಜೆಟ್ ಏಕೆ? ರಮ್ಯಾ ಬಾಯಲ್ಲಿ ‘ಸು ಫ್ರಮ್ ಸೋ’

ದರ್ಶನ್ ಇಲ್ಲ ಅಂದ್ರೆ ಬಾಕ್ಸ್ ಆಫೀಸ್‌‌ಗೆ ಏನೂ ಲಾಸ್ ಇಲ್ಲ..!!

Untitled design (26)

ದರ್ಶನ್ ಜೈಲು ಸೇರಿದ್ರಿಂದ ಬಾಕ್ಸ್ ಆಫೀಸ್ ಗತಿ ಏನು ಅನ್ನೋ ಚಿಂತೆ ಶುರುವಾಗಿದೆ. ಇದು ಅವ್ರ ಕೆಲ ಅಭಿಮಾನಿಗಳಿಗಷ್ಟೇ ಅನ್ನೋದು ಕೂಡ ಅಷ್ಟೇ ಸತ್ಯ. ಈ ಬಗ್ಗೆ ಮೋಹಕತಾರೆ ರಮ್ಯಾ ಪ್ರತಿಕ್ರಿಯಿಸಿದ್ದು, ಬಿಗ್ ಸ್ಟಾರ್ ಬಿಗ್ ಬಜೆಟ್ ಚಿತ್ರಗಳೇ ಯಾಕೆ ಬೇಕು..? ಸು ಫ್ರಮ್ ಸೋ ನಂತಹ ಕಂಟೆಂಟ್ ಬೇಸ್ಟ್ ಚಿತ್ರಗಳು ಕೂಡ ಓಡ್ತಿವೆ ಅಲ್ವಾ ಎಂದಿದ್ದಾರೆ.

ಸ್ಟಾರ್‌ಗಳಿಂದಲೇ ಚಿತ್ರರಂಗ ನಡೆಯುತ್ತೆ ಅನ್ನೋದು ಒಂದು ಕಟ್ಟುಕಥೆ. ಬಿಗ್ ಸ್ಟಾರ್‌ಗಳ ಬಿಗ್ ಬಜೆಟ್ ಮೂವಿಗಳ ಜೊತೆ ಹೊಸಬರ ಹೊಸ ಕನಸುಗಳಿಂದಲೂ ಚಿತ್ರರಂಗ ಸಮೃದ್ಧವಾಗಲಿದೆ. ಹೌದು.. ಕಂಟೆಂಟ್ ಈಸ್ ಕಿಂಗ್. ಕಥೆ, ಪಾತ್ರಗಳು, ಸಿನಿಮಾ ಚೆನ್ನಾಗಿದ್ರೆ ಜನ ನೋಡ್ತಾರೆ, ಗೆಲ್ಲಿಸ್ತಾರೆ. ಇಲ್ಲ ಅಂದ್ರೆ ಯಾವುದೇ ಸ್ಟಾರ್ ಇರಲಿ, ಫ್ಲಾಪ್ ಗ್ಯಾರಂಟಿ. ಈ ಕುರಿತು ರಮ್ಯಾ ಮಾತನಾಡಿದ್ದಾರೆ. ಹೌದು.. ದರ್ಶನ್ ಜೈಲು ಸೇರಿದ್ದಾರೆ. ಅವರಿಲ್ಲ ಅಂದ್ರೆ ಬಾಕ್ಸ್ ಆಫೀಸ್‌ಗೆ ಲಾಸ್ ಅಲ್ವಾ ಅಂದಿರೋ ಪ್ರಶ್ನೆಗೆ ನೇರವಾಗಿಯೇ ಉತ್ತರ ನೀಡಿದ್ದಾರೆ ರಮ್ಯಾ.

ಯೆಸ್.. ಸ್ಯಾಂಡಲ್‌ವುಡ್ ಕ್ವೀನ್ ಯಾವಾಗ್ಲೂ ತಲೆಮೇಲೆ ಹೊಡೆದಂತೆ ಮಾತಾಡ್ತಾರೆ. ದೊಡ್ಡ ಸ್ಟಾರ್‌ಗಳ ಬಿಗಹ್ ಬಜೆಟ್ ಚಿತ್ರಗಳೇ ಓಡುತ್ತೆ ಅನ್ನೋದು ಸುಳ್ಳು. ಸು ಫ್ರಮ್ ಸೋ ಉದಾಹರಣೆ ತಗೊಳಿ. ಕಂಟೆಂಟ್ ಚೆನ್ನಾಗಿದೆ ಸಿನಿಮಾ ಚೆನ್ನಾಗಿ ಓಡ್ತಿದೆ ಅಂತ ರಾಜ್ ಬಿ ಶೆಟ್ಟಿಯ ಪ್ರಯೋಗವನ್ನು ಹಾಡಿ ಹೊಗಳಿದ್ದಾರೆ. ಈ ಮೂಲಕ ಒಂದಷ್ಟು ಮಂದಿಗೆ ಸಿನಿಮಾಗಳ ಅಸಲಿಯತ್ತೇನು ಅನ್ನೋದನ್ನ ಅರ್ಥೈಸೋ ಪ್ರಯತ್ನ ಮಾಡಿದ್ದಾರೆ ಮೋಹಕತಾರೆ.

ಜೆಪಿ ತುಮಿನಾಡ್ ನಿರ್ದೇಶಿಸಿ, ನಟಿಸಿರೋ ಹಾಗೂ ರಾಜ್ ಬಿ ಶೆಟ್ಟಿ ನಟಿಸಿ, ನಿರ್ಮಿಸಿರೋ ಸು ಫ್ರಮ್ ಸೋ ಎಲ್ಲೆಡೆ ಮೋಡಿ ಮಾಡ್ತಿದೆ. ರಜನೀಕಾಂತ್‌ರ ಕೂಲಿ, ಹೃತಿಕ್- ಜೂನಿಯರ್ ಎನ್‌ಟಿಆರ್‌ರ ವಾರ್-2ಗೂ ಜಗ್ಗದ ಈ ಸೋಮೇಶ್ವರ ಸುಲೋಚನಾ, ಯಶಸ್ವಿ 100 ಕೋಟಿ ಕ್ಲಬ್ ಅಂಚಿನಲ್ಲಿದೆ. ಸಣ್ಣ ಬಜೆಟ್ ಸಿನಿಮಾವೊಂದು ತನ್ನ ಕಂಟೆಂಟ್‌ನಿಂದ ನೂರು ಕೋಟಿ ಪೈಸಾ ವಸೂಲ್ ಮಾಡಬಹುದು ಅನ್ನೋದನ್ನ ಸಾಬೀತು ಮಾಡ್ತಿದೆ. ಇದು ನಿಜಕ್ಕೂ ಬಿಗ್ ಸ್ಟಾರ್ಸ್‌ ಬಿಗ್ ಬಜೆಟ್ ಚಿತ್ರಗಳಿಗೊಂದು ಗುಣಪಾಠ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

Exit mobile version