ಸೋಶಿಯಲ್ ಮೀಡಿಯಾದಲ್ಲಿ ಪುಡಿ ರೌಡಿಗಳು ಲಾಂಗ್, ಮಚ್ಚು ಹಿಡಿದು ಪೋಸ್ ನೀಡೋದು, ನಕಲಿ ಪಿಸ್ತೂಲ್ ಹಿಡಿದು ರೀಲ್ಸ್ ಮಾಡೋದು, ಲಾಂಗ್ ಹಿಡಿದುಕೊಂಡು ಬೈಕ್‌ನಲ್ಲಿ ವ್ಹೀಲಿಂಗ್ ಮಾಡಿಕೊಂಡು ಹೋಗೋದು ಈಗೀಗ ಕಾಮನ್ ಆಗ್ತಾ ಇದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಹಾಗೂ ಬೆಂಗಳೂರು ಪೊಲೀಸ್ ಸೈಬರ್ ಸೆಕ್ಯುರಿಟಿ ವಿಂಗ್ ಇಂಥಾ ಸೋಶಿಯಲ್ ಮೀಡಿಯಾ ರೀಲ್ಸ್ ಮಾಡಿದವ್ರನ್ನ ಎಚ್ಚರಿಸಿ, ಕ್ರಮ ತಗೊಳ್ತಾ ಇದೆ.
ಇದೇ ನ್ಯಾಯ ಎಲ್ಲರಿಗೂ ಆಗಬೇಕು. ಸಾಮಾನ್ಯ ಜನರಿಗೊಂದು ನ್ಯಾಯ. ಸೆಲೆಬ್ರಿಟಿಗಳಿಗೆ ಒಂದು ನ್ಯಾಯ ಆಗಬಾರದು. ಆದರೆ, ಇದರ ಬಗ್ಗೆ ಕೊಂಚವೂ ಆಲೋಚಿಸದೆ ಕನ್ನಡದ ಇಬ್ಬರು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಮಚ್ಚು ಲಾಂಗ್ ಹಿಡಿದು ಪೋಸ್ ನೀಡಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ತಾರಾ? ಇವ್ರಿಗೂ ಖಾಕಿ ಬಿಸಿ ಮುಟ್ಟಿಸುತ್ತಾ ಅನ್ನೋ ಕುತೂಹಲ ಮೂಡುತ್ತದೆ.ಈ ಪೋಸ್ಟ್‌ಗಳು ಸಾಮಾಜಿಕ ಜಾಲ ತಾಣಗಗಲ್ಲಿ ವೈರಲ್ ಆಗ್ತಿವೆ.
ಬಿಗ್ ಬಾಸ್ ಸ್ಪರ್ಧಿಗಳಾಗಿದ್ದ ವಿನಯ್ ಗೌಡ ಹಾಗೂ ರಜತ್ ಕಿಶನ್ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ದರ್ಶನ್ ಅವರ ಸಿನಿಮಾಗಳ ಹೆಸರನ್ನು ಪ್ಯಾಂಟ್ ಮೇಲೆ ಬರೆಸಿಕೊಂಡಿರುವ ರಜತ್, ಬಿಳ್ಳಿ ಬಣ್ಣದ ಶರ್ಟ್‌ನ ಮೇಲೆ ಡಿಬಾಸ್ ಎಂದು ದೊಡ್ಡದಾಗಿ ಬರೆದುಕೊಂಡಿದ್ದಾರೆ. ಇನ್ನೊಂದೆಡೆ ಇದೇ ಮಾದರಿಯ ಸಿಂಪಲ್ ಡ್ರೆಸ್‌ನಲ್ಲಿರುವ ವಿನಯ್ ಗೌಡ ರೀಲ್ಸ್ ಮಾಡಿದ್ದು, ತಮ್ಮ ರೀಲ್ಸ್‌ನಲ್ಲಿ ಮಚ್ಚೊಂದನ್ನಕೈಯಲ್ಲಿ ಹಿಡಿದು ರೀಲ್ಸ್‌ಗೆ ಪೋಸ್ ಕೊಟ್ಟಿದ್ದಾರೆ. ಈ ರೀಲ್ಸ್ ಅನ್ನು ರಜತ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ, ಇಲ್ಲಿ ಸಣ್ಣ ಮಟ್ಟದ ಎಚ್ಚರಿಕೆ ತೋರಿಸಿರುವ ವಿನಯ್ ಗೌಡ ತಮ್ಮ ಅಕೌಂಟ್‌ನಲ್ಲಿ ಇದನ್ನು ಪೋಸ್ಟ್ ಮಾಡಿಲ್ಲ.
‘ನನ್ನ ಸೋದರ ಏನಾದರೂ ಪ್ರಾಬ್ಲಂ ಎಂದು ಹೇಳಿದಾಗ.. ಕರಿಯಾ..’ ಎಂದು ರಜತ್ ಈ ರೀಲ್ಸ್‌ಗೆ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಇದನ್ನು ಸಾರ್ವಜನಿಕ ಸ್ಥಳದಲ್ಲಿ ಮಾಡದೇ ಇರಬಹುದು. ಆದರೆ, ಇಂಥ ರೀಲ್ಸ್‌ಗಳನ್ನು ಸೆಲೆಬ್ರಿಟಿಯಾದವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದರಿಂದ ಆಗುವ ಅಪಾಯಗಳ ಬಗ್ಗೆ ಎಚ್ಚರಿಕೆ ಹೊಂದಿರಬೇಕು. ಇದು ಆಗಬೇಕೆಂದರೆ, ಬೆಂಗಳೂರು ಪೊಲೀಸರು ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಜನರಿಗೆ ಬೇರೆ ಬೇರೆ ಕಾನೂನು ಮಾಡದೇ, ಇಂಥ ವರ್ತನೆ ತೋರಿದ ಎಲ್ಲರ ಮೇಲೂ ಕೇಸ್ ಹಾಕಿ ಕ್ರಮ ತೆಗೆದುಕೊಳ್ಳಬೇಕು.