ಕಿರಿಕ್ ಮಾಡ್ತಿದ್ದ ದರ್ಶನ್ ಫ್ಯಾನ್ಸ್ ಹಾಗೂ ಡಿಬಾಸ್‌ಗಾಗಿಯೇ ತನಗೆ ಡ್ಯಾಗರ್ ಹಾಕಲು ಬಂದಿದ್ದ ಲೇಡಿ ಡಾನ್ ವಿರುದ್ಧ ಸಮರ ಸಾರಿದ್ದ ಪ್ರಥಮ್, ಅದ್ಯಾಕೋ ಇತ್ತೀಚೆಗೆ ಕೊಂಚ ಸೈಲೆಂಟ್ ಆಗಿದ್ರು. ಆದ್ರೀಗ ಫಸ್ಟ್ ನೈಟ್ ವಿತ್ ದೆವ್ವ ಸಿನಿಮಾನ ರಿಲೀಸ್ ಮಾಡೋ ಧಾವಂತದಲ್ಲಿರೋ ಪ್ರಥಮ್, ಸಖತ್ ಆ್ಯಕ್ಟೀವ್ ಆಗಿದ್ದಾರೆ.
ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಹೀರೋ ಆಗಿ ನಟಿಸಿರೋ, ಪಿ.ವಿ.ಆರ್.ಸ್ವಾಮಿ ಗೂಗಾರದೊಡ್ಡಿ ನಿರ್ದೇಶನದ ಫಸ್ಟ್ ನೈಟ್ ವಿತ್ ದೆವ್ವ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಏಪ್ರಿಲ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನೆರವೇರಿತು. ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನ ಕೂಡ ಪ್ರಥಮ್ ಅವರೇ ರಚಿಸಿದ್ದು, ಇದೇ ಚಿತ್ರದಲ್ಲಿ ನಟಿಸಿರುವ ಹಿರಿಯನಟ ಶ್ರೀನಿವಾಸಮೂರ್ತಿ ಟ್ರೈಲರ್‌ಗೆ ಚಾಲನೆ ನೀಡಿದ್ದು ವಿಶೇಷ.
ದರ್ಶನ್ ವಿವಾದದ ಬಳಿಕ ಪ್ರಥಮ್ ‘ಫಸ್ಟ್ ನೈಟ್ ವಿತ್ ದೆವ್ವ’
ಡೆವಿಲ್ ಎದುರು ಬರಬೇಕಿದ್ದ ಚಿತ್ರ.. ಏ-3ಕ್ಕೆ ಗ್ರ್ಯಾಂಡ್ ರಿಲೀಸ್
ಇತ್ತೀಚೆಗೆ ಸಿನಿಮಾಗಳು ಥಿಯೇಟರ್‌ನಲ್ಲಿ ನಿಲ್ಲೋದೇ ಕಷ್ಟ ಕಷ್ಟ. ಅಂಥದ್ರಲ್ಲಿ ಡಬ್ಬಿಂಗ್, ಸ್ಯಾಟಲೈಟ್ ಹಾಗೂ ಓಟಿಟಿ ರೈಟ್ಸ್ ಅಂತೂ ತುಂಬಾ ದೂರದ ಮಾತು. ಆದ್ರೆ ನಟ ಪ್ರಥಮ್ ಈ ಫಸ್ಟ್ ನೈಟ್ ವಿತ್ ದೆವ್ವ ಚಿತ್ರದ ಡಬ್ಬಿಂಗ್ ಹಾಗೂ ಸ್ಯಾಟಲೈಟ್ ರೈಟ್ಸ್‌ನ ಒಳ್ಳೆಯ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಮನರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡು ಮಾಡಿರುವ ಹಾರರ್ ಕಾಮಿಡಿ ಚಿತ್ರ ಇದಾಗಿದ್ದು, ಇಲ್ಲಿ ನಾಯಕನಿಗೆ ಮದುವೆಯಾಗುತ್ತದೆ. ಆತನಿಗೆ ತನ್ನ ಹೆಂಡತಿ ದೆವ್ವ ಎಂಬುದು ಮದುವೆಯಾದ ಕೂಡಲೇ ಗೊತ್ತಾಗುತ್ತೆ. ನಂತರ ಆತನ ಫಸ್ಟ್ ನೈಟ್ ಆಗುತ್ತಾ ಇಲ್ವಾ ಅನ್ನೋದೇ ಈ ಚಿತ್ರದ ಕಥಾಹಂದರ ಅಂದ್ರು ನಟ ಪ್ರಥಮ್.
ಪ್ರಥಮ್ ಒಳ್ಳೆಯ ಮಾತುಗಾರ ಅನ್ನೋದು ಎಲ್ರಿಗೂ ಗೊತ್ತು. ಆದ್ರೆ ಈ ಚಿತ್ರದಲ್ಲಿ ಅವರ ಪಾತ್ರಕ್ಕೆ ಮಾತು ತುಂಬಾ ಕಮ್ಮಿ. ಎಲ್ಲರ ಸಹಕಾರದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ನಾನು ಛಾಯಾಗ್ರಾಹಕನಾಗಿ ಬಹಳ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ. ಈ ಚಿತ್ರಕ್ಕೂ ನಾನೇ ಕ್ಯಾಮೆರಾ ವರ್ಕ್ ಜೊತೆಗೆ ನಿರ್ದೇಶನವನ್ನೂ ಮಾಡಿದ್ದೇನೆ. ಇದು ನಾನು ಡಿಓಪಿ ಆಗಿ ಕಾರ್ಯ ನಿರ್ವಹಿಸಿರುವ 53ನೇ ಸಿನಿಮಾ ಅಂತಾರೆ ಡೈರೆಕ್ಟರ್.
ರಿಲೀಸ್‌ಗೂ ಮೊದಲೇ ಚಿತ್ರದ ಡಬ್ಬಿಂಗ್, ಟಿವಿ ರೈಟ್ಸ್ ಮಾರಾಟ
ಚಿತ್ರರಂಗದ ಗೆಳೆಯ.. ಮಾತುಗಾರ ಪ್ರಥಮ್‌ಗೆ ಮಾತೇ ಕಮ್ಮಿ..!
ಈ ಚಿತ್ರದಲ್ಲಿ ಮಿಮಿಕ್ರಿ ಗೋಪಿ, ತುಕಾಲಿ ಸಂತು, ಸುಶ್ಮಿತಾ ಪಾತ್ರಗಳು ಪ್ರಭಾವ ಬೀರುತ್ತವೆ. ಒಟ್ಟು 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆಯಂತೆ. ಪ್ರಥಮ್ ಪತ್ನಿಯಾಗಿ ನಾನು ನಟಿಸಿದ್ದೇನೆ. ಇನ್ನೋಸೆಂಟ್ ಹುಡುಗಿಯ ಪಾತ್ರ. ನನ್ನ ಪಾತ್ರ ಹೇಗೆ ಚೇಂಜ್ ಆಗುತ್ತಾ ಹೋಗುತ್ತದೆ ಎನ್ನುವುದೇ ವಿಶೇಷ. ಎರಡು ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಅಂತ ನಾಯಕಿ ನಿಖಿತಾಸ್ವಾಮಿ ಖುಷಿ ಹಂಚಿಕೊಂಡರು.
ನಾನು ಅಣ್ಣಾವ್ರ ಕಾಲದ ನಟರ ಜತೆಗೂ ನಟಿಸಿದ್ದೇನೆ. ಈಗಿನ ಕಾಲದ ನಟರ ಜತೆಗೂ ನಟಿಸಿದ್ದೇನೆ. ನನಗೆ ಅಂಥಾ ಬದಲಾವಣೆ ಏನೂ ಕಾಣಿಸುತ್ತಿಲ್ಲ ಅಂತಾರೆ ಹಿರಿಯನಟ ಶ್ರೀನಿವಾಸ ಮೂರ್ತಿ. ಮಿಮಿಕ್ರಿ ಗೋಪಿ ಮಾತನಾಡಿ ಪ್ರಥಮ್ ಹಾಗೂ ಸ್ವಾಮಿ ಇಬ್ಬರೂ ಸೇರಿ ನನ್ನಿಂದ ಬೆಳಗಿನ ಜಾವದ ವರೆಗೂ ಕೆಲಸ ಮಾಡಿಸಿದ್ದಾರೆ, ಮಿಮಿಕ್ರಿ ಕೂಡ ಮಾಡಿಸಿದ್ದಾರೆ ಅಂದ್ರು.
ಅದ್ವಿಕ್ ವರ್ಮ ಸಂಗೀತ ಚಿತ್ರಕ್ಕಿದ್ದು, ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ. ಹರೀಶ್‍ರಾಜ್ ವಿಲನ್ ಪಾತ್ರದಲ್ಲಿ ಗಮನ ಸೆಳೆಯಲಿದ್ದಾರೆ. ಅಂದಹಾಗೆ ಈ ಫಸ್ಟ್ ನೈಟ್ ವಿತ್ ದೆವ್ವ ಚಿತ್ರ ದರ್ಶನ್ ಡೆವಿಲ್ ಸಿನಿಮಾದ ರಿಲೀಸ್ ದಿನವೇ ತೆರೆಗೆ ಬರಬೇಕಿತ್ತು. ಆದ್ರೆ ದರ್ಶನ್ ಫ್ಯಾನ್ಸ್ ಕಾಟ, ಲೇಡಿ ಡಾನ್ ಡ್ಯಾಗರ್ ಕೇಸ್‌ನಿಂದ ಕೊಂಚ ಲೇಟ್ ಆಯ್ತು. ಲೇಟ್ ಆದ್ರೂ ಲೇಟೆಸ್ಟ್ ಆಗಿ ತೆರೆಗೆ ಬರ್ತಿದೆ ಅನ್ನೋದು ಮಾತ್ರ ಗ್ಯಾರಂಟಿ.
