ಭೂಮಿ ಶೆಟ್ಟಿ, ರಿಷಬ್ ಶೆಟ್ಟಿಗೆ ಟಾಲಿವುಡ್ ರೆಡ್ ಕಾರ್ಪೆಟ್

PVCUನಲ್ಲಿ ಮೊದಲು ಜೈ ಹನುಮಾನ್.. ನಂತ್ರ ಮಹಾಕಾಳಿ

Untitled design 2025 10 30t173619.363

ಕಾಂತಾರ ಕ್ರಿಯೇಟರ್ ರಿಷಬ್ ಶೆಟ್ಟಿ ನೆಕ್ಸ್ಟ್ ವೆಂಚರ್ ತೆಲುಗಿನ ಜೈ ಹನುಮಾನ್. ಶೆಟ್ರ ಜೊತೆ ಮತ್ತೊಬ್ಬ ಕುಂದಾಪುರ ಪ್ರತಿಭೆಗೂ ಗಾಳ ಹಾಕಿದೆ ಟಾಲಿವುಡ್. ಯೆಸ್.. ಮಹಾಕಾಳಿಯಾದ ಭೂಮಿ ಶೆಟ್ಟಿ, ಲೇಡಿ ಸೂಪರ್ ಹೀರೋ ಆಗ್ತಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಇವರಿಬ್ಬರೂ ಸಹ ಒಂದೇ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಅದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.

ಕಾಂತಾರ-1 ಬಳಿಕ ವಾಟ್ ನೆಕ್ಸ್ಟ್ ರಿಷಬ್ ಶೆಟ್ಟಿ ಅನ್ನೋ ಪ್ರಶ್ನೆಗೆ ಈಗಾಗ್ಲೇ ಉತ್ತರ ಸಿಕ್ಕಾಗಿದೆ. ಯೆಸ್.. ತೆಲುಗಿನಲ್ಲಿ ಜೈ ಹನುಮಾನ್ ಅನ್ನೋ ಸಿನಿಮಾ ಮಾಡೋದಾಗಿ ಅನೌನ್ಸ್ ಮಾಡಿದ್ದ ರಿಷಬ್, ಇದೀಗ ಅದನ್ನೇ ಮಾಡೋಕೆ ಮೆಂಟಲಿ ಕೂಡ ಫಿಕ್ಸ್ ಆಗಿದ್ದಾರೆ. ಫಸ್ಟ್ ಲುಕ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಶ್ರೀರಾಮನ ಮೂರ್ತಿಯನ್ನ ಅಪ್ಪಿಕೊಂಡಿರೋ ಹನುಮಂತನ ಪಾತ್ರದಲ್ಲಿ ಶೆಟ್ರು ಎಲ್ಲರ ಹುಬ್ಬೇರಿಸಿದ್ದಾರೆ.

ಅಂದಹಾಗೆ ಈ ಬಾರಿ ರಿಷಬ್ ಶೆಟ್ಟಿ ಬರೀ ನಟನಾಗಿ ತಮ್ಮ ಪಾತ್ರಕ್ಕೆ ಜೀವ ತುಂಬುವ ಕಾರ್ಯ ಮಾಡ್ತಿದ್ದಾರೆ. ಈ ಹಿಂದೆ ಹನುಮ್ಯಾನ್ ಅನ್ನೋ ಸಿನಿಮಾನ ಡೈರೆಕ್ಟ್ ಮಾಡಿದ್ದ ಪ್ರಶಾಂತ್ ವರ್ಮಾ, PVCU- ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲೇ ಜೈ ಹನುಮಾನ್‌ ಚಿತ್ರವನ್ನು ಮಾಡ್ತಿರೋದು ವಿಶೇಷ. ಸದ್ಯದಲ್ಲೇ ಇದ್ರ ಶೂಟಿಂಗ್ ಕಿಕ್‌ಸ್ಟಾರ್ಟ್‌ ಆಗಲಿದ್ದು, ಇದೀಗ ಅದೇ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ಮತ್ತೊಂದು ಮೂವಿ ಅನೌನ್ಸ್ ಆಗಿದೆ. ಅದೇ ಮಹಾಕಾಳಿ.

ಮಹಾಕಾಳಿ ಲೇಡಿ ಸೂಪರ್ ಹೀರೋ ಕಥಾನಕದ ಚಿತ್ರವಾಗಿದ್ದು, ಫಸ್ಟ್ ಲುಕ್ ಸಖತ್ ವೈಬ್ರೆಂಟ್ ಆಗಿದೆ. ವಿಶೇಷ ಏನಪ್ಪಾ ಅಂದ್ರೆ ಈ ಮಹಾಕಾಳಿ ಸಿನಿಮಾಗೂ ಸಹ ಡೈರೆಕ್ಟರ್ ಪ್ರಶಾಂತ್ ವರ್ಮಾ ಒನ್ಸ್ ಅಗೈನ್ ಕುಂದಾಪುರದ ಪ್ರತಿಭೆಯನ್ನೇ ಆರಿಸಿಕೊಂಡಿದ್ದಾರೆ. ಹೌದು.. ಭೂಮಿ ಶೆಟ್ಟಿ ಮಹಾಕಾಳಿಯಾಗಿ ಮಿಂಚು ಹರಿಸಲಿದ್ದಾರೆ.

ಕನ್ನಡ ಬಿಗ್‌ಬಾಸ್ ಸೀಸನ್ 7ರ 4ನೇ ರನ್ನರ್ ಅಪ್ ಆಗಿದ್ದ ಭೂಮಿ ಶೆಟ್ಟಿ, ತೆಲುಗು ಸೀರಿಯಲ್‌ಗಳ ಮೂಲಕ ಟಾಲಿವುಡ್‌‌ಗೂ ಎಂಟ್ರಿ ಕೊಟ್ಟಿದ್ರು. ಇಕ್ಕಟ್ ಚಿತ್ರದ ಬಳಿಕ ಹೈದ್ರಾಬಾದ್‌‌ನಲ್ಲೇ ಬೀಡು ಬಿಟ್ಟಿದ್ದ ಭೂಮಿ ಶೆಟ್ಟಿ, ವಿಜಯ್ ದೇವರಕೊಂಡ ನಟನೆಯ ಕಿಂಗ್‌ಡಮ್ ಚಿತ್ರದಲ್ಲಿ ಸತ್ಯದೇವ್ ಪತ್ನಿ ಪಾತ್ರದಲ್ಲಿ ತೆಲುಗು ಮಂದಿ ದಿಲ್ ದೋಚಿದ್ರು. ಇದೀಗ ಅದೇ ಕಿಂಗ್‌‌ಡಮ್ ಸಿನಿಮಾದ ಆ ಗತ್ತಿನ ಪಾತ್ರ, ಗಮ್ಮತ್ತಿನ ಅಭಿನಯ ಭೂಮಿಗೆ ಪ್ರಶಾಂತ್ ವರ್ಮಾ ನಿರ್ದೇಶನದ ಮಹಾಕಾಳಿ ಲೇಡಿ ಸೂಪರ್ ಹೀರೋ ಚಿತ್ರದ ಲೀಡ್‌‌‌ಗೆ ಆಯ್ಕೆ ಆಗುವಂತೆ ಮಾಡಿದೆ.

ಒಟ್ಟಾರೆ ಟಾಲಿವುಡ್ ನಮ್ಮ ಕನ್ನಡದ ಟ್ಯಾಲೆಂಟ್ಸ್‌ಗೆ ಅದರಲ್ಲೂ ಕುಂದಾಪುರದ ಮಂದಿಗೆ ಹೀಗೆ ರೆಡ್‌ ಕಾರ್ಪೆಟ್ ಹಾಸಿ ವೆಲ್ಕಮ್ ಮಾಡ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

Exit mobile version