BOB ಟ್ರೈಲರ್ ಕಿಕ್.. ದೀಕ್ಷಿತ್ ಪ್ಯಾನ್ ಇಂಡಿಯಾ ರಾಕ್ಸ್

ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀಗೆ ಮುರಳಿ, ಪ್ರೇಮ್ ಶುಭಾಶಯ

Untitled design 2025 11 16T165255.927

ರಾಬರಿಗಳ ಕುರಿತ ಆಲ್ ಟೈಂ ಬೆಸ್ಟ್ ದೃಶ್ಯಕಾವ್ಯ ಅಂದ್ರೆ ಅದು ಒನ್ ಅಂಡ್ ಓನ್ಲಿ ಮನಿ ಹೀಸ್ಟ್. ಇದೀಗ ಅಂಥದ್ದೇ ಬ್ಯಾಂಕ್ ರಾಬರಿಯ ಕಥಾನಕ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ತೆರೆಗೆ ಬರ್ತಿದೆ. ಶ್ರೀಮುರಳಿ, ಪ್ರೇಮ್‌ರಿಂದ ಟ್ರೈಲರ್ ಲಾಂಚ್ ಆಗಿದ್ದು, ದಿಯಾ ದೀಕ್ಷಿತ್ ಶೆಟ್ಟಿ ಪ್ಯಾನ್ ಇಂಡಿಯಾ ಸಂಚಲನ ಮೂಡಿಸಿದ್ದಾರೆ. ಆದ್ರೂ ಕೂಡ ಕೈ ಹಿಡಿಯದ ಕನ್ನಡಿಗರ ಬಗ್ಗೆ ಸಿಕ್ಕಾಪಟ್ಟೆ ಎಮೋಷನಲ್ ಆಗಿ ಮಾತನಾಡಿದ್ದಾರೆ. ಅದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.

ಇದು ಇದೇ ಶುಕ್ರವಾರ ರಿಲೀಸ್ ಆಗ್ತಿರೋ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಸಿನಿಮಾದ ಟ್ರೈಲರ್ ಝಲಕ್. ರೋರಿಂಗ್ ಸ್ಟಾರ್ ಶ್ರೀಮುರಳಿ, ಲವ್ಲಿಸ್ಟಾರ್ ಪ್ರೇಮ್, ಡಾ. ಮೇಘನಾ ಗಾಂವ್ಕರ್ ಟ್ರೈಲರ್ ಲಾಂಚ್ ಮಾಡಿ ಟೀಂಗೆ ಶುಭ ಹಾರೈಸಿದ್ರು. ಅಭಿಷೇಕ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಬ್ಯಾಂಕ್ ರಾಬರಿ ಕಥೆಯೊಂದನ್ನ ಹಾಸ್ಯದ ಅಂಶಗಳೊಂದಿಗೆ ಹೇಳುವ ಕಾರ್ಯ ಮಾಡ್ತಿದೆ ಚಿತ್ರತಂಡ. ದಿಯಾ ದೀಕ್ಷಿತ್ ಶೆಟ್ಟಿ ಹಾಗೂ ಬೃಂದಾ ಆಚಾರ್ಯ ಲೀಡ್‌‌ನಲ್ಲಿರೋ ಈ ಚಿತ್ರದ ಟ್ರೈಲರ್ ಸಂಥಿಂಗ್ ಡಿಫರೆಂಟ್ ಆಗಿದೆ.

ರಂಗಿತರಂಗ, ಅವನೇ ಶ್ರೀಮನ್ನಾರಾಯಣದಂತಹ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನ ನೀಡಿರೋ ಹೆಚ್.ಕೆ. ಪ್ರಕಾಶ್ ನಿರ್ಮಾಣದಲ್ಲಿ ತಯಾರಾಗಿರೋ ಬಿಓಬಿ, ಕಥೆ, ಪಾತ್ರಗಳು ಹಾಗೂ ಮೇಕಿಂಗ್‌‌ನಿಂದ ಇಂಪ್ರೆಸ್ಸೀವ್ ಅನಿಸಿದೆ. ಮನಿ ಹೀಸ್ಟ್ ಸೀರೀಸ್ ರೀತಿ ಇಲ್ಲಿ ನಾಯಕನಟ ತನ್ನ ಗೆಳೆಯರ ತಂಡಕ್ಕೆ ವೆರೈಟಿ ಗೆಟಪ್‌ಗಳ ಮಾಸ್ಕ್‌‌ಗಳನ್ನ ಹಾಕಿಸಿ, ಬ್ಯಾಂಕ್‌ಗೆ ಲಗ್ಗೆ ಇಡ್ತಾನೆ. ಅಲ್ಲಿ ಅಪ್ಸರೆಯಂತಹ ನಾಯಕನಟಿ ಅಕೌಂಟೆಂಟ್ ಆಗಿರ್ತಾರೆ. ಆ ಸೀರಿಯಸ್ ಕಥೆ ಜೊತೆ ತಿಳಿ ಹಾಸ್ಯ ಹಾಗೂ ನಿವಿರಾದ ಪ್ರೇಮಕಥೆ ಕೂಡ ಗಮನ ಸೆಳೆಯಲಿದೆ.

ಪಿನಾಕ ಅನ್ನೋ ವಿಎಫ್‌ಎಕ್ಸ್ ಸ್ಟುಡಿಯೋ ನಡೆಸ್ತಿದ್ದ ಅಭಿಷೇಕ್ ನಿರ್ದೇಶನದ ಮೊದಲ ಸಿನಿಮಾ ಇದು. ಸೀಮಪಲ್ ಸುನಿ ಹಾಗೂ ರಕ್ಷಿತ್ ಶೆಟ್ಟಿ ಜೊತೆ ಪಳಗಿರೋ ಅಭಿ, ತುಂಬಾ ಹಾರ್ಡ್‌ ವರ್ಕ್‌ ಮಾಡಿ ಈ ಸಿನಿಮಾನ ಕಟ್ಟಿದ್ದಾರೆ. ಪತ್ನಿ ತುಂಬು ಗರ್ಭಿಣಿ ಆಗಿದ್ರೂ ಸಹ ಸಿನಿಮಾಗಾಗಿ ಹಗಲಿರುಳು ದುಡಿದು ಫೈನಲ್ ಕಾಪಿ ಹೊರತೆಗೆದಿದ್ದಾರೆ ಅಭಿ. ಸದ್ಯ ಅಭಿಗೆ ಡಬಲ್ ಧಮಾಕ.. ಒಂದ್ಕಡೆ ಮಗನ ಆಗಮನ ಆಗಿದೆ. ಮತ್ತೊಂದ್ಕಡೆ ಥಿಯೇಟರ್‌ಗೆ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಕೂಡ ಆಗಮನ ಆಗ್ತಿದೆ.

ಇನ್ನೂ ಈ ಸಿನಿಮಾನ ಡೈರೆಕ್ಟರ್ ಅಭಿ ನಟ ರಿಷಬ್ ಶೆಟ್ಟಿಗಾಗಿ ಕಥೆ ತಯಾರಿಸಿದ್ದರಂತೆ. ಕೊನೆಗೆ ಅದು ದೀಕ್ಷಿತ್ ಶೆಟ್ಟಿ ಪಾಲಾಗಿದೆ. ರಂಗಿತರಂಗ, ಎಎಸ್‌‌ಎನ್ ಚಿತ್ರಗಳಿಂದ ಹಿಡಿದು ಸ್ಪೂಕಿ ಕಾಲೇಜ್‌ವರೆಗೆ ಶ್ರೀ ದೇವಿ ಎಂಟರ್‌ಟೈನರ್ಸ್‌ ಬ್ಯಾನರ್‌‌ನ ಎಲ್ಲಾ ಚಿತ್ರಗಳಲ್ಲಿ ನಿರ್ಮಾಪಕ ಹೆಚ್‌‌ ಕೆ ಪ್ರಕಾಶ್ ಹೊಚ್ಚ ಹೊಸ ನಿರ್ದೇಶಕರುಗಳಿಗೆ ಅವಕಾಶ ಕೊಡ್ತಿರೋದು ಇಂಟರೆಸ್ಟಿಂಗ್. ಜೂಡಾ ಸ್ಯಾಂಡಿ ಸಂಗೀತ, ಅಭಿಷೇಕ್ ಕಾಸರಗೋಡು ಸಿನಿಮಾಟೋಗ್ರಫಿ ಚಿತ್ರಕ್ಕಿದ್ದು, ಗೋಪಾಲ್ ಕೃಷ್ಣ ದೇಶಪಾಂಡೆ, ಸಾಧು ಕೋಕಿಲ ಅಂತಹ ಹಿರಿಯ ಕಲಾವಿದರು ಕೂಡ ತಾರಾಗಣದಲ್ಲಿದ್ದಾರೆ.

ದಿಯಾ, ಕೆಟಿಎಂ ಹಾಗೂ ಬ್ಲಿಂಕ್‌‌ನಂತಹ ಹಿಟ್ ಚಿತ್ರಗಳ ನಾಯಕನಟ ದೀಕ್ಷಿತ್ ಶೆಟ್ಟಿ ಅದ್ಭುತ ನಟ. ಸಿನಿಮಾಗಾಗಿ ತನು ಮನವನ್ನು ಅರ್ಪಿಸಿ ಬಿಡ್ತಾರೆ. ಟಾಲಿವುಡ್‌ನ ದಸರಾ ಚಿತ್ರದ ಬಳಿಕ ದೀಕ್ಷಿತ್ ನಸೀಬು ಬದಲಾಗಿ ಹೋಯ್ತು. ಸದ್ಯ ರಶ್ಮಿಕಾ ಜೊತೆಗಿನ ದಿ ಗರ್ಲ್‌ ಫ್ರೆಂಡ್ ಸಿನಿಮಾ ಟಾಕ್ ಆಫ್ ದಿ ಟೌನ್ ಆಗಿದೆ. ಶಿವಣ್ಣ, ದುಲ್ಕರ್ ಸಲ್ಮಾನ್ ಅಂತಹ ಸೂಪರ್ ಸ್ಟಾರ್ಸ್‌ ಜೊತೆ ಮಲ್ಟಿ ಸ್ಟಾರ್ ಸಿನಿಮಾಗಳನ್ನ ಮಾಡ್ತಿದ್ದಾರೆ ದೀಕ್ಷಿತ್. ಆದ್ರೂ ಕೂಡ ಅವ್ರ ಮನಸ್ಸಲ್ಲಿ ತುಂಬಾ ನೋವಿದೆ. ಅದಕ್ಕೆ ಕಾರಣ ನಮ್ಮ ಕನ್ನಡಿಗರು. ಕನ್ನಡದ ಪ್ರೇಕ್ಷಕರು.

ಯೆಸ್.. ಹೊರಗಡೆ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ, ತಾಯ್ನಾಡು, ಮನೆಯಂತಹ ಕರ್ನಾಟಕದಲ್ಲಿ ನಮ್ಮ ಸ್ಯಾಂಡಲ್‌ವುಡ್‌‌ನಲ್ಲಿ ದೊಡ್ಡ ಗೆಲುವು ಬೇಕು ಅಂತ ಹಪಹಪಿಸುತ್ತಿದ್ದಾರೆ. ಬಹುಶಃ ನಮ್ಮ ಡೈರೆಕ್ಟರ್‌‌ಗಳು, ಪ್ರೊಡ್ಯೂಸರ್‌‌ಗಳು ಹಾಗೂ ಬರಹಗಾರರು ದೀಕ್ಷಿತ್‌‌ರನ್ನ ಸರಿಯಾಗಿ ಬಳಸಿಕೊಳ್ಳದೇ ಇರೋದು ಕೂಡ ಇದಕ್ಕೆ ಕಾರಣವಾಗಿದೆ. ಅವರು ಹೇಳಿದಂತೆ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ನಿಮ್ಮ ನಿರೀಕ್ಷೆ ಹುಸಿ ಮಾಡಲ್ಲ. ಮೊದಲ ಮೂರು ದಿನದಲ್ಲೇ ಸಿನಿಮಾ ನೋಡಿ. ಇಂತಹ ಕಲಾವಿದರನ್ನ ನಮ್ಮಲ್ಲೇ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವೂ ಹೌದು. ಇದೇ ನವೆಂಬರ್ 21ರ ಶುಕ್ರವಾರ ಬಿಓಬಿ ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಲಗ್ಗೆ ಇಡ್ತಿದೆ. ಮಿಸ್ ಮಾಡ್ಕೋಬೇಡಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

Exit mobile version