ಭಾಗ್ಯಲಕ್ಷ್ಮೀ ಬ್ಯಾಂಕ್ ರಾಬರಿಗೆ ಬರಬೇಕಿದ್ದ ದೀಕ್ಷಿತ್ ಶೆಟ್ಟಿ ಅಂಡ್ ಗ್ಯಾಂಗ್, ಬೆಂಗಳೂರಿನ ಡೈರಿ ಸರ್ಕಲ್‌ನಲ್ಲಿ ನಡೆದ 7 ಕೋಟಿ 11 ಲಕ್ಷದ ರಿಯಲ್ ರಾಬರಿಯಿಂದ ಒಂದು ವಾರ ತಡವಾಗಿ ಬರೋಕೆ ಸಜ್ಜಾಗಿದ್ದಾರೆ. ಇಷ್ಟಕ್ಕೂ ಗಾಬರಿ ಆಗುವಂಥದ್ದೇನೂ ಆಗಿಲ್ಲ ಅಂತಿರೋ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರತಂಡದ ಮನದಾಳದ ಮಾತುಗಳ ಡಿಟೈಲ್ಸ್ ಇಲ್ಲಿದೆ.
- ‘ಭಾಗ್ಯಲಕ್ಷ್ಮೀ ಬ್ಯಾಂಕ್’ ರಾಬರಿ ಮುಂದಕ್ಕೆ.. ಗಾಬರಿ ಬೇಡ..!!
- ರೀಲ್ ರಾಬರಿಗೂ ಮೊದ್ಲೇ 7ಕೋಟಿ 11ಲಕ್ಷ ರಿಯಲ್ ರಾಬರಿ
- ಈ ವಾರ ಬರ್ತಿಲ್ಲ .. ನ-27ಕ್ಕೆ BOB ಚಿತ್ರ ರಿಲೀಸ್ ಕನ್ಫರ್ಮ್
- ದೀಕ್ಷಿತ್ ಶೆಟ್ಟಿ & ಗ್ಯಾಂಗ್.. ಬೃಂದಾ ಬ್ಯಾಕ್ ಟು ಬ್ಯಾಕ್ ಎಂಟ್ರಿ
ಪ್ರೀತಿಯ ಕನ್ನಡ ಕಲಾಭಿಮಾನಿಗಳೇ.. ‘ಶ್ರೀ ದೇವಿ ಎಂಟರ್‌ಟೈನರ್ಸ್ ಬ್ಯಾನರ್’ನಿಂದ ಇಲ್ಲಿಯವರೆಗೆ ‘ರಂಗಿತರಂಗ’, ‘ಅವನೇ ಶ್ರೀಮನ್ನಾರಾಯಣ’, ‘ಕಥಾಸಂಗಮ’, ‘ಸ್ಪೂಕಿ ಕಾಲೇಜ್’ನಂತಹ ಭಿನ್ನ ಅಲೆಯ ಮನರಂಜನಾತ್ಮಕ ಸಿನಿಮಾಗಳು ತಯಾರಾಗಿವೆ. ಎಲ್ಲಾ ಚಿತ್ರಗಳನ್ನ ನೀವು ಪ್ರೀತಿಯಿಂದ ನೋಡಿ, ನಮ್ಮ ಸಂಸ್ಥೆಗೆ ಬೆಂಬಲವಾಗಿ ನಿಂತಿದ್ದೀರಿ. ಇದೀಗ ನಮ್ಮ ಬ್ಯಾನರ್‌ನಿಂದ ಕನ್ನಡ ಚಿತ್ರರಂಗಕ್ಕೆ ಐದನೇ ಕಾಣಿಕೆಯಾಗಿ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ದೀಕ್ಷಿತ್ ಶೆಟ್ಟಿ ಹಾಗೂ ಬೃಂದಾ ಆಚಾರ್ಯ ಮುಖ್ಯಭೂಮಿಕೆಯ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಸಿನಿಮಾಗೆ ಸಿಂಪಲ್ ಸುನಿ ಹಾಗೂ ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಪಳಗಿರೋ ಅಭಿಷೇಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಮ್ಮ ಸಂಸ್ಥೆ ಇಲ್ಲಿಯವರೆಗೆ ಮಾಡಿರೋ ಎಲ್ಲಾ ಚಿತ್ರಗಳಲ್ಲಿ ಹೊಸ ನಿರ್ದೇಶಕರುಗಳಿಗೆ ಅವಕಾಶ ಕೊಡುತ್ತಾ ಬಂದಿದೆ. ಅದರ ಬಗ್ಗೆ ನಮಗೆ ಹೆಮ್ಮೆಯೂ ಇದೆ. ಆದ್ರೀಗ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರವನ್ನು ಅಂದುಕೊಂಡ ದಿನಾಂಕಕ್ಕೆ ಅಂದ್ರೆ ನವೆಂಬರ್ 21ಕ್ಕೆ ತೆರೆಗೆ ತರಲು ಆಗುತ್ತಿಲ್ಲ. ಈ ಬಗ್ಗೆ ಕನ್ನಡ ಚಿತ್ರಪ್ರೇಮಿಗಳಲ್ಲಿ ಕ್ಷಮೆ ಯಾಚಿಸುತ್ತಿದ್ದೇವೆ.
ಕೆಲ ತಾಂತ್ರಿಕ ಕೆಲಸಗಳ ವಿಳಂಬನೆಯಿಂದ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಸಿನಿಮಾದ ರಿಲೀಸ್ ಅನ್ನು ಒಂದು ವಾರ ಮುಂದೂಡುತ್ತಿದ್ದೇವೆ. ಇದೇ ನವೆಂಬರ್ 27ರ ಗುರುವಾರದಂದು ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಬಿಡುಗಡೆ ಆಗುತ್ತಿದ್ದು, ಎಂದಿನಂತೆ ನಿಮ್ಮ ಪ್ರೀತಿ, ಸಹಕಾರ ಹಾಗೂ ಪ್ರೋತ್ಸಾಹ ಇರಲಿ. ಧನ್ಯವಾದಗಳೊಂದಿಗೆ.. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಟೀಂ ಅನ್ನೋ ಪೋಸ್ಟ್ ಹೊರಬಿದ್ದಿದೆ. ಯೆಸ್.. ಬಿಓಬಿ ಸಿನಿಮಾ ಈ ವಾರ ಬರ್ತಿಲ್ಲ ಅನ್ನೋದು ಸ್ಪಷ್ಟವಾಗಿದೆ. ಇವರುಗಳು ರೀಲ್ ರಾಬರಿಗೆ ಬರೋಕೆ ಮೊದಲೇ ನಿನ್ನೆ 7 ಕೋಟಿ 11 ಲಕ್ಷ ರೂಪಾಯಿಯಷ್ಟು ದೊಡ್ಡ ಮೊತ್ತದ ಹಣ ರಿಯಲ್ ಆಗಿ ರಾಬರಿ ಆಗಿಬಿಟ್ಟಿದೆ.
ದೀಕ್ಷಿತ್ ಶೆಟ್ಟಿ ಹಾಗೂ ಬೃಂದಾ ಆಚಾರ್ಯ ಇಬ್ಬರಿಗೂ ಒಂಥರಾ ಬ್ಯಾಕ್ ಟು ಬ್ಯಾಕ್ ಡಬಲ್ ಧಮಾಕ. ಯಾಕಂದ್ರೆ ಈ ವಾರ ಬೃಂದಾ ನಟನೆಯ ಮಾರುತ ತೆರೆಗೆ ಬರ್ತಿದೆ. ಈಗಾಗ್ಲೇ ದೀಕ್ಷಿತ್, ರಶ್ಮಿಕಾ ಜೊತೆ ನಟಿಸಿರೋ ದಿ ಗರ್ಲ್ ಫ್ರೆಂಡ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಹಾಗಾಗಿ ಇಬ್ಬರೂ ಸಹ ಒಂದರ ಹಿಂದೊಂದು ಸಿನಿಮಾಗಳ ಮೂಲಕ ಮಸ್ತ್ ಮನರಂಜನೆ ನೀಡ್ತಿದ್ದಾರೆ. ಹೆಚ್ ಕೆ ಪ್ರಕಾಶ್ ನಿರ್ಮಾಣದ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಆ ನಿಟ್ಟಿನಲ್ಲಿ ಲೇಟ್ ಆದ್ರೂ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟು ರಂಜಿಸಲಿದೆ ಅನ್ನೋದು ಸ್ಪಷ್ಟವಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
