ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಫಸ್ಟ್ ಸಾಂಗ್ ರಿವೀಲ್

ಶಿವನ ಜಪದಲ್ಲಿ ದಿಯಾ ದೀಕ್ಷಿತ್ & ಚೆಲುವೆ ಬೃಂದಾ

Film 2025 04 21t150008.228

ದಿಯಾ ಫೇಮ್ ದೀಕ್ಷಿತ್, ಕೌಸಲ್ಯ ಸುಪ್ರಜಾ ರಾಮ ಫೇಮ್ ಬೃಂದಾ ಆಚಾರ್ಯಗೆ ರಂಗಿತರಂಗ ಪ್ರೊಡ್ಯೂಸರ್ ಕೈ ಹಿಡಿದಿದ್ದಾರೆ. ಈ ಸೂಪರ್ ಕಾಂಬೋ ಬ್ಯಾಂಕ್‌ಗೆ ಕೈ ಹಾಕಿದ್ದು, ಅವ್ರನ್ನ ಲಾರ್ಡ್‌ ಶಿವ ಕೂಡ ಕೈ ಹಿಡಿದಿದ್ದಾರೆ.

ಭಿನ್ನ ಅಲೆಯ ಸಿನಿಮಾಗಳಿಂದಲೇ ಸೌತ್ ಸಿನಿದುನಿಯಾದಲ್ಲಿ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಆಗಿ ಗುರ್ತಿಸಿಕೊಂಡಿದ್ದಾರೆ ದಿಯಾ, ದಸರಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ. ಇನ್ನು ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟು, ಕೌಸಲ್ಯ ಸುಪ್ರಜಾ ರಾಮ ಚಿತ್ರದಿಂದ ದೊಡ್ಡ ಸಕ್ಸಸ್ ಕಂಡ ಬೃಂದಾ ಆಚಾರ್ಯ ಸದ್ಯ ದೀಕ್ಷಿತ್‌ಗೆ ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ. ಇವರಿಬ್ಬರ ಕಾಂಬೋಗೆ ಬಂಡವಾಳ ಹಾಕಿರೋದು ರಂಗಿತರಂಗ ಫೇಮ್ ಪ್ರೊಡ್ಯೂಸರ್ ಹೆಚ್‌‌.ಕೆ ಪ್ರಕಾಶ್.

ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಪಳಗಿರೋ ಅಭಿಷೇಕ್ ಎಂ ಚೊಚ್ಚಲ ನಿರ್ದೇಶನದ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರಕ್ಕಾಗಿ ಇಷ್ಟೆಲ್ಲಾ ಮಂದಿ ಜೊತೆಯಾಗಿದ್ದಾರೆ. ಅಂದಹಾಗೆ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ಬ್ಯುಸಿ ಆಗಿದೆ ಚಿತ್ರತಂಡ. ಇತ್ತೀಚೆಗೆ ಚಿತ್ರದ ಆಲ್ಬಮ್‌ನಿಂದ ಹರ ಓಂ ಅನ್ನೋ ಮೊದಲ ಲಿರಿಕಲ್ ಸಾಂಗ್‌ನ ಲಾಂಚ್ ಮಾಡಲಾಯಿತು.

ನಾಗಾರ್ಜುನ್ ಶರ್ಮಾ ಸಾಹಿತ್ಯ ರಚಿಸಿರೋ ಹಾಗೂ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿರೋ ಈ ಹಾಡನ್ನ ಶಿಲ್ಪಾ ಮುಡ್ಬಿ ಹಾಡಿದ್ದು, ತೆಲುಗಿನಲ್ಲಿ ರಾಬರ್ಟ್‌ ಖ್ಯಾತಿಯ ಮಂಗ್ಲಿ ಹಾಡಿದ್ದಾರೆ. ಲಾರ್ಡ್‌ ಶಿವನ ಕುರಿತ ಈ ಹಾಡು, ಒನ್ ಆಫ್ ದಿ ಬೆಸ್ಟ್ ಡಿವೋಷನಲ್ ಸಾಂಗ್ ಆಗುವ ಮುನ್ಸೂಚನೆ ನೀಡಿದೆ. ಟ್ಯೂನ್, ಸಾಹಿತ್ಯ, ಗಾಯನ ಎಲ್ಲವೂ ಪರ್ಫೆಕ್ಟ್ ಆಗಿ ಸಿಂಕ್ ಆಗಿವೆ.

ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಲಹರಿ ಸಂಸ್ಥೆಯ ಲಹರಿ ವೇಲು, ಕಾರ್ಯಕಾರಿ ನಿರ್ಮಾಪಕ ನಂಜೇಗೌಡ, ನಿರ್ಮಾಪಕರ ಗೆಳೆಯರ ಬಳಗದಲ್ಲಿರೋ ವಸಂತಾ, ವಿನುತಾ ಹಾಗೂ ಸುಭಾಷಿಣಿ ಅವರು ಉಪಸ್ಥಿತರಿದ್ದರು. ಸ್ಫೂಕಿ ಕಾಲೇಜ್ ಬಳಿಕ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರಕ್ಕೆ ಕೈ ಹಾಕಿರೋ ಹೆಚ್ ಕೆ ಪ್ರಕಾಶ್ ಅವರು ಈ ಚಿತ್ರದಿಂದ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಲಕ್ಷಣ ತೋರಿದ್ದಾರೆ.

Exit mobile version