ಸ್ಯಾಂಡಲ್‌ವುಡ್ ಏಂಜಲ್ ಬೃಂದಾ ಆಚಾರ್ಯ ಈಗ ಅಪ್ಸರೆ. ಆ ಅಪ್ಸರೆಯ ಬ್ಯಾಂಗ್‌ನಲ್ಲಿ ದಿಯಾ ಫೇಮ್ ದಸರಾ ದೀಕ್ಷಿತ್ ಶೆಟ್ಟಿ ಪ್ರೀತಿಯ ಸಾಲ ಮಾಡಿದ್ದಾರೆ. ಸಾಲ ಸಾಲದು ಅಂತ ಆ ಬ್ಯಾಂಕ್‌ನೇ ಕೊಳ್ಳೆ ಹೊಡೆಯೋಕೆ ಮುಂದಾಗಿದ್ದಾರೆ. ಅದಕ್ಕೆ ರಂಗಿತರಂಗ ಪ್ರೊಡ್ಯೂಸರ್ ಹಾಗೂ ರಕ್ಷಿತ್ ಟೀಂನಲ್ಲಿರೋ ಅಭಿ ಕೂಡ ಸಾಥ್ ನೀಡಿದ್ದಾರೆ. ಈ ಕುರಿತ ಕಲರ್‌ಫುಲ್ ಕಹಾನಿ ನಿಮಗಾಗಿ ಕಾಯ್ತಿದೆ.
ಇದು ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರದ ಹೊಚ್ಚ ಹೊಸ ಸಾಂಗ್. ಈ ಹಿಂದೆ ಶಿವ ಸಾಂಗ್ ಬಿಟ್ಟು ಭಕ್ತಿಯ ಪರಾಕಾಷ್ಠೆ ಮೆರೆದಿದ್ದ ಚಿತ್ರತಂಡ, ಇದೀಗ ಡುಯೆಟ್ ಸಾಂಗ್ ಬಿಡುಗಡೆ ಮಾಡಿ ಸರ್‌ಪ್ರೈಸ್ ನೀಡಿದೆ. ದಿಯಾ, ದಸರಾ, ಬ್ಲಿಂಕ್ ಸಿನಿಮಾಗಳ ಖ್ಯಾತಿಯ ದೀಕ್ಷಿತ್ ಶೆಟ್ಟಿ ಲೀಡ್‌ನಲ್ಲಿ ನಟಿಸಿರೋ ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಅಪ್ಸರೆ ಬೃಂದಾ ಆಚಾರ್ಯ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
ಅಪ್ಸರೆ ಬೃಂದಾ ಬ್ಯಾಂಕ್‌ನಲ್ಲಿ ದಸರಾ ದೀಕ್ಷಿತ್ ಪ್ರೀತಿಯ ಸಾಲ
ಸಾಲ ಸಾಲದು ಅಂತ ಬ್ಯಾಂಕ್ ದೋಚಲು ದೀಕ್ಷಿತ್ ಶೆಟ್ಟಿ ರೆಡಿ
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಗ್ಲಾಸ್ ಹಾಕಿಕೊಂಡು ಎಲ್ಲರ ದಿಲ್ ದೋಚಿದ್ದ ರಶ್ಮಿಕಾ ಮಂದಣ್ಣ ರೀತಿ ಇಲ್ಲಿ ಸ್ಯಾಂಡಲ್‌ವುಡ್ ಏಂಜಲ್ ಬೃಂದಾ ಆಚಾರ್ಯ ಮಿಂಚ್ತಿದ್ದಾರೆ. ಅಂದಹಾಗೆ ಅಪ್ಸರೆ ಬೃಂದಾ ಬ್ಯಾಂಕ್‌ನಲ್ಲಿ ದೀಕ್ಷಿತ್ ಶೆಟ್ಟಿ ಪ್ರೀತಿಯ ಸಾಲ ಮಾಡಿರೋದು ಇದ್ರಿಂದ ಕಾತರಿ ಆಗ್ತಿದೆ. ಬರೀ ಸಾಲ ಸಾಲದು ಅಂತ ಇಡೀ ಬ್ಯಾಂಕ್‌ನೇ ದೋಚೋಕೆ ಮುಂದಾಗ್ತಿದ್ದಾರೆ ದೀಕ್ಷಿತ್.
ಈ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಆಗಿರೋದು ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಚಿತ್ರಗಳ ಖ್ಯಾತಿಯ ನಿರ್ಮಾಪಕ ಹೆಚ್ ಕೆ ಪ್ರಕಾಶ್. ಇನ್ನು ಸಿಂಪಲ್ ಸುನಿ ಹಾಗೂ ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಪಳಗಿ, ಸದ್ಯ ಪಿನಾಕಾ ಅನ್ನೋ VFX ಕಂಪೆನಿ ನಡೆಸ್ತಿರೋ ಯುವ ಸಿನಿಮೋತ್ಸಾಹಿ ಅಭಿಷೇಕ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಇದು ಅಭಿಯ ಚೊಚ್ಚಲ ಕನಸು.
ಅಂದು ಕಿರಿಕ್ ಪಾರ್ಟಿ ರಶ್ಮಿಕಾ.. ಇಂದು ಬೃಂದಾ ಆಚಾರ್ಯ..!
ರಕ್ಷಿತ್ ಶೆಟ್ಟಿ ಗೆಳೆಯ ಅಭಿಗೆ ರಂಗಿತರಂಗ ಪ್ರೊಡ್ಯೂಸರ್ ಸಾಥ್
ಸಿನಿಮಾ ಇದೇ ನವೆಂಬರ್ 21ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದ್ದು, ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡುವ ಭರವಸೆ ಸ್ಯಾಂಪಲ್ಸ್‌ನಿಂದಲೇ ನೀಡಿದೆ ಟೀಂ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ. ಹೌದು.. ಟೀಸರ್ ಪ್ರಾಮಿಸಿಂಗ್ ಆಗಿದ್ದು, ಬೃಂದಾ-ದೀಕ್ಷಿತ್ ಕಾಂಬೋ ಸಖತ್ ಫ್ರೆಶ್ ಅನಿಸ್ತಿದೆ. ಕಂಟೆಂಟ್ ಬೇಸ್ಡ್ ಸಿನಿಮಾಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು, ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ಕೈಚಳವಿದೆ. ರಘು ಮೈಸೂರು ಕಲಾ ನಿರ್ದೇಶನ ಹಾಗೂ ತೇಜಸ್ ಶಾರ್ಪ್ ಎಡಿಟಿಂಗ್ ಚಿತ್ರಕ್ಕಿದ್ದು, ಅದೃಷ್ಠ ಪರೀಕ್ಷೆಗೆ ಥಿಯೇಟರ್‌ಗೆ ಬರೋದೊಂದೇ ಬಾಕಿ ಉಳಿದಿದೆ.