ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ದೇಶಕರು ಎಂಟ್ರಿ ಕೊಡುತ್ತಲೇ ಇದ್ದಾರೆ. ಹೊಸ ನಿರ್ದೇಶಕರ ಸಿನಿಮಾ ಎಂದರೆ ಏನಾದರೂ ಹೊಸತನ ಇರಬಹುದು ಎಂಬ ನಂಬಿಕೆ ಕೂಡ ಪ್ರೇಕ್ಷಕರಿಗೆ ಇರುತ್ತದೆ. ಈಗ ಹೊಸ ತಂಡವೊಂದು ಟೈಟಲ್ ಪೋಸ್ಟರ್ ಮೂಲಕ ಪರಿಚಯಗೊಂಡಿದೆ. ಈ ಸಿನಿಮಾ ಹೆಸರು ಬಂದೂಕ್. ಹೊಸ ನಿರ್ದೇಶಕರ ಜೊತೆ ಘಟಾನುಘಟಿ ತಾರಾಬಳಗ ಕೈ ಜೋಡಿಸಿದೆ.
ಯುವ ಪ್ರತಿಭೆ ಮಹೇಶ್ ರವಿಕುಮಾರ್ ಬರೆದು ನಿರ್ದೇಶನ ಮಾಡಿರುವ ಚೊಚ್ಚಲ ಚಿತ್ರ ಸದ್ದಿಲ್ಲದೆ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದಲ್ಲಿ ಬಾಲಾಜಿ ಮನೋಹರ್, ಶ್ವೇತಾ ಪ್ರಸಾದ್, ಗೋಪಾಲ ಕೃಷ್ಣ ದೇಶಪಾಂಡೆ, ಶಂಕರ್ ಅಶ್ವಥ್, ಹರೀಶ್ ರೈ ಅವರಂತಹ ಪ್ರತಿಭಾನ್ವಿತ ತಾರಾಬಳಗ ಅಭಿನಯಿಸಿದೆ.