ಪವನ್ ಒಡೆಯರ್ ಹಾಗೂ ಶಿವಣ್ಣ ಕಾಂಬೋನ ಬೇಲ್ ಚಿತ್ರದ ಮತ್ತೊಂದು ಟೀಸರ್ ರಿಲೀಸ್ ಆಗಿದೆ. ಅಲ್ಲಿ ಇಡೀ ಚಿತ್ರದಲ್ಲಿರೋ ಕ್ಯಾರೆಕ್ಟರ್‌ಗಳ ಮ್ಯಾರಥಾನ್ ನಡೆದಿದೆ. ಅಷ್ಟೇ ಅಲ್ಲ.. ಮಾಧ್ಯಮದ ಅವಹೇಳನ ಚರ್ಚೆಗೆ ಗ್ರಾಸವಾಗಿದೆ. ಅಂತಹ ಕಂಟೆಂಟ್ ಏನಿದೆ..? ಅದಕ್ಕೆ ಡೈರೆಕ್ಟರ್ ಕೊಡೋ ಉತ್ತರ ಏನು..? ಎಲ್ಲಕ್ಕೂ ಕ್ಲ್ಯಾರಿಟಿ ಇಲ್ಲಿದೆ ನೋಡಿ.
- ಬೇಲ್ ಟೀಸರ್ ಓಕೆ.. ಮಾಧ್ಯಮ ಅವಹೇಳನ ಯಾಕೆ ಡೈರೆಕ್ಟ್ರೇ..?
- ಶಿವಣ್ಣನ ಚಿತ್ರದಲ್ಲಿ ಪವನ್ ಒಡೆಯರ್ ಯಾಕೆ ಹೀಗೆ ಮಾಡಿದ್ರು?
- ದರ್ಶನ್ ಮೀಡಿಯಾಗೆ ಅಪಮಾನಿಸಿದಂತಿದೆ ಯೋಗಿ ಡೈಲಾಗ್
- ಇದು ಡಿಬಾಸ್ ದರ್ಶನ್ ಬೇಲ್ ಕಥೆನಾ..? ಅಸಲಿಯತ್ತೇನು..?!
‘ವಾಟ್ ಯು ಪೀಪಲ್ ಥಿಂಕ್ ಯುವರ್ ಡೂಯಿಂಗ್..? ಕಾಫಿ, ಟೀ ಕುಡ್ಕೊಂಡು.. ಗೆಟ್ ಔಟ್ ಆಫ್ ಮೈ ಪ್ಲೇಸ್. ಗೊತ್ತಾಗಲ್ಲವೇನ್ರೀ ಮಿಡಿಯಾ..?’ ಇದು ಬೇಲ್ ಚಿತ್ರದ ಹೊಚ್ಚ ಹೊಸ ಟೀಸರ್‌ನಲ್ಲಿರೋ ಒಂದು ಡೈಲಾಗ್. ಖಳನಾಯಕನ ಪಾತ್ರಧಾರಿ ಲೂಸ್‌ಮಾದ ಯೋಗಿ ಹೊಡೆಯೋ ಮಾಸ್ ಡೈಲಾಗ್. ಕೇಳೋಕೆ ಜನಕ್ಕೆ ಮಜಬೂತಾಗಿ ಇರಬಹುದು. ಆದ್ರೆ ಮಾಧ್ಯಮವನ್ನೇ ಅವಹೇಳನ ಮಾಡಿ ಜನಕ್ಕೆ ಮಜಾ ಕೊಡೋ ದರ್ದು ಡೈರೆಕ್ಟರ್‌ಗೆ ಏನಿದೆಯೋ ಗೊತ್ತಿಲ್ಲ.
ಯೆಸ್.. ಗೂಗ್ಲಿ, ಗೋವಿಂದಾಯನಮಃ, ರಣವಿಕ್ರಮ, ನಟಸಾರ್ವಭೌಮ ಅಂತಹ ಸಕ್ಸಸ್‌ಫುಲ್ ಸಿನಿಮಾಗಳ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಬೇಲ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್ ಹೀರೋ ಆಗಿ ಲೀಡ್‌ನಲ್ಲಿ ನಟಿಸಿದ್ದು, ಶಿವಣ್ಣನ ಸಿನಿಮಾದಲ್ಲೇ ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನ ಡೈರೆಕ್ಟರ್ ಒಡೆಯರ್ ಇಟ್ಟಿರೋದು ಚರ್ಚೆಗೆ ಕಾರಣವಾಗಿದೆ.
ಅಂದಹಾಗೆ ಈ ಬಗ್ಗೆ ನಮ್ಮ ಗ್ಯಾರಂಟಿ ನ್ಯೂಸ್ ಟೀಂ ದೂರವಾಣಿ ಕರೆ ಮೂಲಕ ಡೈರೆಕ್ಟರ್ ಪವನ್ ಒಡೆಯರ್‌ನ ಕೇಳಿದಾಗ.. ಇದು ಕಥೆ ಹಾಗೂ ಪಾತ್ರಕ್ಕೆ ಡಿಮ್ಯಾಂಡ್ ಮಾಡಿತು ಅಷ್ಟೇ. ನನಗೆ ಮಾಧ್ಯಮ ಮೇಲೆ ಅಪಾರ ಗೌರವ, ಅಭಿಮಾನ ಇದೆ. ನೀವೆಲ್ಲಾ ನಮಗೆ ಸಾಕಷ್ಟು ವರ್ಷಗಳಿಂದ ಸಪೋರ್ಟ್ ಮಾಡ್ತಾ ಬಂದಿದ್ದೀರಿ. ನಾನ್ಯಾಕೆ ಮಾಧ್ಯಮಕ್ಕೆ ಅಗೌರವ ತರಲಿ..? ಆ ಡೈಲಾಗ್ ಯಾಕೆ ಅನ್ನೋದನ್ನ ಸಿನಿಮಾ ನೋಡಿದ್ರೆ ಅರ್ಥವಾಗುತ್ತೆ ಎಂದಿದ್ದಾರೆ. ಬಹುಶಃ ಮುಂದಿನ ಸುದ್ದಿಗೋಷ್ಠಿಯಲ್ಲಿ ಒಡೆಯರ್ ಮಾಧ್ಯಮದವರ ಪ್ರಶ್ನೆಗಳಿಗೆ ಜವಾಬು ನೀಡಲು ಉತ್ತರಗಳನ್ನ ಸಿದ್ಧಗೊಳಿಸಿಕೊಳ್ಳಬೇಕಾಗುತ್ತೆ.
ಅಂದಹಾಗೆ ಬೇಲ್ ಟೀಸರ್ ನೋಡಿದ್ರೆ ಅದು ಕಂಟೆಂಟ್‌ಗಿಂತ ಚಿತ್ರದಲ್ಲಿರೋ ಕಲಾವಿದರ ದಂಡನ್ನ ಪರಿಚಯಿಸಿದಂತಿದೆ. ಮಲಯಾಳಂ ನಟ ಜಯರಾಮ್ ಅವರಿಂದ ಹಿಡಿದು, ತೆಲುಗು ನಟ ಸಾಯಿಕುಮಾರ್ ತನಕ ಸಾಲು ಸಾಲು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಶಿವಣ್ಣ ಖಡಕ್ ಪೊಲೀಸ್ ಕಾಪ್ ಆಗಿ ಬಣ್ಣ ಹಚ್ಚಿದ್ದು, ಎಲ್ಲೋ ಒಂದ್ಕಡೆ ಇದು ಡಿಬಾಸ್ ದರ್ಶನ್ ಅವ್ರ ಡಿ ಗ್ಯಾಂಗ್ & ರೇಣುಕಾಸ್ವಾಮಿ ಮರ್ಡರ್ ಕೇಸ್ ಹಾಗೂ ಬೇಲ್‌ಗೆ ಸಂಬಂಧಿಸಿದ್ದಾ ಅನ್ನೋ ಅನುಮಾನ ಕೂಡ ಕಾಡದೆ ಇರಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
