ಎರಡೆರಡು ಟೀಸರ್‌ಗಳಿಂದ ದೊಡ್ಡ ಭರವಸೆ ಹುಟ್ಟಿಹಾಕಿರೋ ಲಿವಿಂಗ್ ಲೆಜೆಂಡ್ ಶಿವಣ್ಣನ ಬೇಲ್ ಅಡ್ಡಾದಿಂದ ಹಾಡೊಂದು ಹೊರಬಿದ್ದಿದೆ. ಪವನ್ ಒಡೆಯರ್ ಆ್ಯಕ್ಷನ್ ಕಟ್ ಹೇಳಿರೋ ಬೇಲ್ ಚಿತ್ರದ ಫಸ್ಟ್ ಸಾಂಗ್‌ನಲ್ಲಿ ಶಿವಣ್ಣನೇ ಇಲ್ಲ. ಬದಲಿಗೆ ದಿಯಾ ದೀಕ್ಷಿತ್ ಶೆಟ್ಟಿ ಹಾಗೂ ಬ್ಯಾಂಗಲ್ ಬಂಗಾರಿ ಸಂಜನಾ ಆನಂದ್ ರಂಗು ಚೆಲ್ಲಿದ್ದಾರೆ.
ಶಿವಣ್ಣನ ‘ಬೇಲ್’.. ಚೆಲುವೆ ಸಂಜು ಮೇಲೆ ದೀಕ್ಷಿತ್‌ಗೆ ಲವ್..!
ಪವನ್ ಒಡೆಯರ್ ಲೈನ್.. ಅಜನೀಶ್ ಲೋಕನಾಥ್ ಟ್ಯೂನ್
ಟೀಸರ್‌ಗಳಂತೆ ಸಾಂಗ್ ಕೂಡ ಇಂಪ್ರೆಸ್ಸೀವ್ & ಇಂಟರೆಸ್ಟಿಂಗ್
ಬಹುದೊಡ್ಡ ತಾರಾಗಣದ ಬೇಲ್.. ಶಿವಣ್ಣ v/s ಲೂಸ್‌ಮಾದ..!
ಚೆಲುವೆ ಕೇಳೇ ಚೆಲುವೆ.. ಇದು ಶಿವಣ್ಣನ ಬೇಲ್ ಸಿನಿಮಾದಿಂದ ಹೊರಬಿದ್ದಿರೋ ಮೊದಲ ಸಾಂಗ್ ಝಲಕ್. ಇಂಟರೆಸ್ಟಿಂಗ್ ಅಂದ್ರೆ ಈ ಹಾಡಲ್ಲಿ ನಮ್ಮ ಶಿವಣ್ಣ ಇಲ್ಲ. ಬದಲಿಗೆ ಮತ್ತೊಬ್ಬ ಸ್ಯಾಂಡಲ್‌ವುಡ್ ಹೀರೋ ದೀಕ್ಷಿತ್ ಶೆಟ್ಟಿ ಹಾಗೋ ಬ್ಯಾಂಗಲ್ ಬಂಗಾರಿ ಫೇಮ್ ಸಂಜನಾ ಆನಂದ್ ಮಿಂಚುತ್ತಿದ್ದಾರೆ. ರೊಮ್ಯಾಂಟಿಕ್ ಲವ್ ಡುಯೆಟ್ ಸಾಂಗ್‌ನಲ್ಲಿ ಅಮುಲ್ ಬೇಬಿ ಹಾಗೂ ಸಂಜು ಬೇಬಿ ಜೋಡಿ ಅಕ್ಷರಶಃ ಮೋಡಿ ಮಾಡಿದೆ.
ಡೈರೆಕ್ಟರ್ ಪವನ್ ಒಡೆಯರ್ ನಿರ್ದೇಶನದ ಜೊತೆಗೆ ಈ ಹಾಡಿಗೆ ಅವರೇ ಸಾಹಿತ್ಯ ಕೂಡ ರಚಿಸಿದ್ದು, ಅಜನೀಶ್ ಲೋಕನಾಥ್ ಮ್ಯೂಸಿಕ್ ಒನ್ಸ್ ಅಗೈನ್ ಮೆಚ್ಚುವಂತಿದೆ. ಕೆ ಎಸ್ ಹರಿಶಂಕರ್ ಹಾಗೂ ಹರ್ಷಿಕಾ ದೇವನಾಥ್ ಅಷ್ಟೇ ಸೊಗಸಾಗಿ ಹಾಡಿದ್ದಾರೆ. ದೀಕ್ಷಿತ್ ಶೆಟ್ಟಿ ಮತ್ತು ಸಂಜನಾ ಆನಂದ್ ಮುದ್ದಾದ ಕೆಮಿಸ್ಟ್ರಿ ಸಿನಿರಸಿಕರನ್ನ ಆಕರ್ಷಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣನ ಇಂಟ್ರಡಕ್ಷನ್ ಟೀಸರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಔಟ್‌ಪುಟ್ ನೋಡಿ ಎಲ್ಲರೂ ಹುಬ್ಬೇರಿಸಿದ್ರು. ಅದ್ರಲ್ಲೂ ಕರುನಾಡ ಚಕ್ರವರ್ತಿಯ ಪವರ್‌ಫುಲ್ ಲುಕ್ ಜೊತೆ ಖಡಕ್ ಡೈಲಾಗ್‌ಗಳು ಭಾರೀ ಕುತೂಹಲ ಹುಟ್ಟಿಹಾಕಿತ್ತು. ಮಾಸ್ ಆ್ಯಕ್ಷನ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಕಾಮಿಡಿ ಕೂಡ ಜೋರಿದೆ ಅನ್ನೋದಕ್ಕೆ ಸೆಕೆಂಡ್ ಟೀಸರ್ ಸಾಕ್ಷಿಯಾಗಿತ್ತು.
ಇನ್ ಫ್ಯಾಕ್ಟ್ ಬೇಲ್ ಸಿನಿಮಾದ ಎರಡನೇ ಟೀಸರ್‌ನಲ್ಲಿ ತಂಡದಲ್ಲಿರೋ ಅಷ್ಟೂ ಮಂದಿ ಕಲಾವಿದರನ್ನ ಪರಿಚಯಿಸಿದ್ರು ಒಡೆಯರ್. ಬಹುದೊಡ್ಡ ತಾರಾಗಣವಿರೋ ಈ ಸಿನಿಮಾದಲ್ಲಿ ಮಲಯಾಳಂ ನಟ ಜಯರಾಮ್, ಸಾಯಿಕುಮಾರ್ ಕೂಡ ವಿಶೇಷವಾಗಿ ಗಮನ ಸೆಳೆಯಲಿದ್ದಾರೆ. ಮತ್ತೊಂದು ಹೈಲೈಟ್ ಅಂದ್ರೆ ಅದು ಲೂಸ್‌ಮಾದ ಯೋಗಿ. ಹೌದು.. ಯೋಗಿ ಇಲ್ಲಿ ಖಡಕ್ ಖಳನಾಯಕನಾಗಿ ಶಿವಣ್ಣನ ವಿರುದ್ಧ ಕಾಣಸಿಗಲಿದ್ದಾರೆ.
ಟಾಕ್ಸಿಕ್ ಮತ್ತು ಜನ ನಾಯಗನ್ ಚಿತ್ರಗಳನ್ನ ನಿರ್ಮಿಸಿದ್ದ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ವೆಂಕಟ್ ಕೆ. ನಾರಾಯಣ್ ಅದ್ಧೂರಿ ಬಜೆಟ್‌ನಲ್ಲಿ ಬೇಲ್ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಇದೇ ಗಾಂಧಿ ಜಯಂತಿಯಂದು ಅಂದ್ರೆ ಅಕ್ಟೋಬರ್ 2ಕ್ಕೆ ಪ್ಯಾನ್ ಇಂಡಿಯಾ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ.
