ನಕುಲ್ ಗೌಡ-ಮಾನ್ವಿತ ಹರೀಶ್ ಅಭಿನಯದ “BAD” ಚಿತ್ರ ಮಾ. 28ಕ್ಕೆ ಬಿಡುಗಡೆ

ಪಿ.ಸಿ.ಶೇಖರ್ ನಿರ್ದೇಶನದ ಹಾಗು ನಕುಲ್ ಗೌಡ - ಮಾನ್ವಿತ ಹರೀಶ್ ಅಭಿನಯದ "BAD" ಚಿತ್ರ ಈ ವಾರ ತೆರೆಗೆ

Untitled design 2025 03 25t191523.441

ಪಿ.ಸಿ.ಶೇಖರ್ ನಿರ್ದೇಶನದ, ಎಸ್ ಆರ್ ವೆಂಕಟೇಶ್ ಗೌಡ ನಿರ್ಮಿಸಿರುವ ಹಾಗೂ ನಕುಲ್ ಗೌಡ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ “BAD” ಚಿತ್ರ ಈ ವಾರ ಮಾರ್ಚ್ 28 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ “BAD” ಚಿತ್ರಕ್ಕೆ ನಿರ್ದೇಶಕ ಪಿ.ಸಿ.ಶೇಖರ್ ಅವರೆ ಸಂಕಲನ ಕಾರ್ಯ ಮಾಡಿದ್ದಾರೆ. ಜಿ.ರಾಜಶೇಖರ್ ಕಲಾ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿರುವ “BAD” ಚಿತ್ರಕ್ಕೆ ಸಚಿನ್ ಜಗದೀಶ್ವರ್ ಎಸ್ ಬಿ ಸಂಭಾಷಣೆ ಬರೆದಿದ್ದಾರೆ.

“ಪ್ರೀತಿಯ ರಾಯಭಾರಿ” ಚಿತ್ರದ ಮೂಲಕ ಜನರ ಮನಗೆದ್ದಿರುವ ನಕುಲ್ ಗೌಡ “BAD” ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ, ಪದ್ಮ ಶಿವಮೊಗ್ಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Exit mobile version