ಬಹುನಿರೀಕ್ಷಿತ ‘ಅವತಾರ್-3’ ಟ್ರೈಲರ್ ರಿಲೀಸ್ ..!

ಮೂರು ವರ್ಷದ ನಂತರ ಬರ್ತಿದೆ ಅವತಾರ್-3

Untitled design 2025 07 30t204535.249

‘ಅವತಾರ್ 2’ ಸಿನಿಮಾದಿಂದ ಬಂದ ಟೀಕೆಯನ್ನು ನಿರ್ದೇಶಕ ಜೇಮ್ಸ್ ಕ್ಯಾಮರನ್ ಗಂಭೀರವಾಗಿ ಪರಿಗಣಿಸಿ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾವನ್ನ ತಯಾರಿ ಮಾಡಿದ್ದಾರೆ. ಹಾಗಾದ್ರೆ ಅವತಾರ್: ಫೈರ್ ಆಂಡ್ ಆಶ್ ಟ್ರೈಲರ್ ಹೇಗಿದೆ ಅಂತ ತೋರಿಸ್ತೀವಿ ಈ ಸ್ಟೋರಿ ನೋಡಿ.

ಅವತಾರ್ ಸಿನಿಮಾ ಸರಣಿಯ ಮೂರನೇ ಭಾಗ  ಬಿಡುಗಡೆಗೆ ಸಜ್ಜಾಗಿದೆ. 2009 ರಲ್ಲಿ ಬಿಡುಗಡೆ ಆಗಿದ್ದ ‘ಅವತಾರ್’ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿತ್ತು. ಬಾಕ್ಸ್ ಆಫೀಸ್ನಲ್ಲಿ ದಾಖಲೆಯನ್ನೇ ನಿರ್ಮಿಸಿತ್ತು. ಅದಾದ 13 ವರ್ಷಗಳ ಬಳಿಕ 2022 ರಲ್ಲಿ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾ ಸಹ ಹಿಟ್ ಎನಿಸಿಕೊಂಡಿತು. ಇದೀಗ ಅದೇ ಸಿನಿಮಾ ಸರಣಿಯ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.

ಪಾಂಡೋರಾ ಎಂಬ ಕಲ್ಪಿತ ಪ್ರದೇಶದಲ್ಲಿ ನಡೆಯುವ ಮಾನವ ಮತ್ತು ನಾವಿ ಜನಾಂಗದ ನಡುವಿನ ಸಂಘರ್ಷದ ಕತೆಯನ್ನು ಮೊದಲ ಎರಡು ‘ಅವತಾರ್’ ಸಿನಿಮಾಗಳು ಹೊಂದಿದ್ದವು. 2022 ರ ‘ವೇ ಆಫ್ ವಾಟರ್’ ಸಿನಿಮಾ ಮಾನವ ಹಾಗೂ ನಾವಿಗಳ ನಡುವೆ ನೀರಿನ ಮೇಲೆ ನಡೆಯುವ ಸಂಘರ್ಷದ ಕತೆಯನ್ನು ಒಳಗೊಂಡಿತ್ತು. ಚಿತ್ರ ವಿಚಿತ್ರ ಜಲಚರಗಳನ್ನು ಸಿನಿಮಾದ ನಿರ್ದೇಶಕ ಜೇಮ್ಸ್ ಕ್ಯಾಮರನ್ ಸೃಷ್ಟಿಸಿದ್ದರು. ಆದರೆ ಆ ಸಿನಿಮಾದ ಬಗ್ಗೆ ತುಸು ಟೀಕೆ ವ್ಯಕ್ತವಾಗಿತ್ತು.

2009 ರ ‘ಅವತಾರ್’ ಸಿನಿಮಾ 2022 ರ ‘ಅವತಾರ್’ ಸಿನಿಮಾದ ಕತೆ ನಡೆಯುವ ಸ್ಥಳ, ಫೈಟ್ ಕೊರಿಯೋಗ್ರಫಿ ಬಿಟ್ಟರೆ ಬೇರೇನೂ ವ್ಯತ್ಯಾಸವಿಲ್ಲ ಎಂದು ಟೀಕಿಸಲಾಗಿತ್ತು. ಆದ್ರೆ ನಿದೇರ್ಶಕ ಜೇಮ್ಸ್ ಇದನ್ನ ಗಂಭೀರವಾಗಿ ಪರಿಗಣಿಸಿ ಮೂರನೇ ಭಾಗವನ್ನ ನಿರ್ದೇಶಣ ಮಾಡಿದಂತೆ ಕಂಡಿದೆ.

ಅವತಾರ್: ಫೈರ್ ಆಂಡ್ ಆಶ್ ಸಿನಿಮಾನಲ್ಲಿ ನಾವಿ ಜನಾಂಗ ಬುಕಟ್ಟುಗಳ ನಡುವಿನ ಸಂಘರ್ಷದ ಕತೆಯನ್ನು ಒಳಗೊಂಡಿರುವ ಸುಳಿವನ್ನು ಸಿನಿಮಾದ ಟ್ರೈಲರ್ ನೀಡುತ್ತಿದೆ. ಪ್ರಕೃತಿಯನ್ನು ಆರಾಧಿಸುವ ನಾವಿಗಳು ಹಾಗೂ ಬೆಂಕಿಯನ್ನು ಆರಾಧಿಸುವ ಜನಾಂಗದ ನಡುವೆ ನಡೆಯುವ ಸಂಘರ್ಷದ ಕತೆಯನ್ನು ‘ಫೈರ್ ಆಂಡ್ ಆಶ್’ ಸಿನಿಮಾ ಒಳಗೊಂಡಿರುವಂತಿದೆ.

ಒಟ್ನಲ್ಲಿ ಸಂಘರ್ಷದ ಕತೆಯ ಜೊತೆಗೆ ‘ಅವತಾರ್’ ಸಿನಿಮಾ ಸರಣಿಯ ನಾಯಕ ಜೇಕ್ ಸೂಲಿ ಹಾಗೂ ಅವನ ಕುಟುಂಬದ ಕತೆ, ಸೆಂಟಿಮೆಂಟ್ ಇನ್ನಿತರೆಗಳನ್ನು ಸಹ ಸಿನಿಮಾ ಒಳಗೊಂಡಿರುವಂತಿದೆ. ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾದ ಅಂತ್ಯದಲ್ಲಿ ನಾವಿ ಅವರಿಂದ ಬೇರ್ಪಟ್ಟು ಮಾನವರನ್ನು ಸೇರಿದ್ದ ಸ್ಪೈಡರ್ ಗೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಇದ್ದಂತಿದೆ. ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಡಿಸೆಂಬರ್ 19 ರಂದು ಬಿಡುಗಡೆ ಆಗಲಿದೆ.

 ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

 

 

 

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version