ಹಿಟ್ & ರನ್‌ಗೆ ಯುವಕ ಸಾವು: ನಟಿ ನಂದಿನಿ ಕಶ್ಯಪ್ ಬಂಧನ

Untitled design 2025 07 30t160649.223

ಹಿಟ್ ಆಂಡ್ ರನ್ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ನಂದಿನಿ ಕಶ್ಯಪ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಗುವಾಹಟಿಯ ದಖಿಂಗಾವ್ ಪ್ರದೇಶದಲ್ಲಿ ಜುಲೈ 25ರ ತಡರಾತ್ರಿ ನಡೆದ ಭೀಕರ ಕಶ್ಯಪ್‌ ಅವರ ವಾಹನ ಡಿಕ್ಕಿ ಹೊಡೆದು ನಾಲ್ಕು ದಿನಗಳ ನಂತರ ಯುವಕ ಸಾವನ್ನಪ್ಪಿದ್ದಾನೆ.

ಪ್ರತ್ಯಕ್ಷದರ್ಶಿಗಳ ವಿವರಣೆಯ ಪ್ರಕಾರ, ನಂದಿನಿ ಕಶ್ಯಪ್ ತನ್ನ ಬೊಲೆರೊ ಎಸ್‌ಯುವಿಯನ್ನು ವಾಹನವು ಗಂಟೆಗೆ 120 ಕಿಲೋಮೀಟರ್‌ಗಿಂತಲೂ ಹೆಚ್ಚಿನ ವೇಗದಲ್ಲಿ ಚಲಾಯಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕಶ್ಯಪ್‌‌ ವಾಹನವು, ಬೀದಿ ದೀಪಗಳ ದುರಸ್ತಿಗೆ ಸಹಾಯ ಮಾಡುತ್ತಿದ್ದ ಸಮಿಯುಲ್ ಎಂಬ ಯುವಕನಿಗೆ ಡಿಕ್ಕಿ ಹೊಡೆದಿದ್ದಾರೆ. ಆಕೆ ಮದ್ಯದ ಅಮಲಿನಲ್ಲಿದ್ದಳು ಎಂದು ಕೆಲವರು ಆರೋಪಿಸಿದ್ದು, ಅಪಘಾತದ ನಂತರ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾದಳು ಎಂದು ಹೇಳಲಾಗಿದೆ.

ಅಪಘಾತದಲ್ಲಿ ಸಮಿಯುಲ್‌ಗೆ ತಲೆಗೆ ತೀವ್ರ ಗಾಯಗಳು ಮತ್ತು ಮೂಳೆ ಮುರಿತಗಳಾಗಿದ್ದವು. ತಕ್ಷಣವೇ ಅವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿ) ದಾಖಲಿಸಲಾಯಿತು. ಆದರೆ, ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಜುಲೈ 28ರಂದು ಅವರನ್ನು ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯರ ಎಲ್ಲ ಪ್ರಯತ್ನಗಳ ಹೊರತಾಗಿಯೂ, ಜುಲೈ 29ರ ಸಂಜೆ ಸಮಿಯುಲ್ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.

ಸಮಿಯುಲ್‌ರ ತಾಯಿ, ತಮ್ಮ ಮಗನ ಮರಣದಿಂದ ದುಃಖಿತರಾಗಿ, ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. “ನನ್ನ ಮಗನಿಗೆ ನ್ಯಾಯ ಸಿಗಬೇಕು. ನಾವು ಬಡವರು, ಆದರೆ ಅದಕ್ಕಾಗಿಯೇ ನಮ್ಮ ನೋವಿಗೆ ಮೌಲ್ಯವಿಲ್ಲವೇ? ನಂದಿನಿ ಕಶ್ಯಪ್ ಆಸ್ಪತ್ರೆಗೆ ಬಂದು ನನ್ನ ಮಗನನ್ನು ಭೇಟಿಯಾಗಲಿಲ್ಲ. ಕನಿಷ್ಠ ಮಾನವೀಯತೆಯನ್ನಾದರೂ ತೋರಿಸಬಹುದಿತ್ತು. ಆದರೆ ಆಕೆ ಸ್ಥಳದಿಂದ ಓಡಿಹೋದಳು,” ಎಂದು ಅವರು ಭಾವುಕರಾಗಿ ಹೇಳಿದರು.

ಪೊಲೀಸರು ಈಗಾಗಲೇ ನಂದಿನಿ ಕಶ್ಯಪ್‌ರನ್ನು ಬಂಧಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಅಪಘಾತದ ಸಮಯದಲ್ಲಿ ಆಕೆಯ ರಕ್ತದಲ್ಲಿ ಆಲ್ಕೊಹಾಲ್‌ನ ಅಂಶವಿತ್ತೇ ಎಂಬುದನ್ನು ಖಚಿತಪಡಿಸಲು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜೊತೆಗೆ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ.

Exit mobile version