ರೋಷನ್‌‌ ಜೊತೆ ಅನುಶ್ರೀ ಸಪ್ತಪದಿ.. ಹೊಸ ಮನ್ವಂತರ..!

ಪುನೀತ ಪರ್ವ.. ಅಪ್ಪು ಮೂಲಕವೇ ರೋಷನ್ ಪರಿಚಯ

Untitled design 2025 08 28t232308.635

ರಾಜರತ್ನ ಅಪ್ಪು ಕಟ್ಟಾಭಿಮಾನಿ, ಕರ್ನಾಟಕದ ನಂಬರ್ ಒನ್ ನಿರೂಪಕಿ ಅನುಶ್ರೀ ಸಪ್ತಪದಿ ತುಳಿಯುವ ಮೂಲಕ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಪುನೀತ ಪರ್ವದಲ್ಲಿ ಅಪ್ಪು ಮೂಲಕವೇ ಪರಿಚಯವಾದ ರೋಷನ್ ಜೊತೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ ಅನುಶ್ರೀ. ಹಾಗಾದ್ರೆ ಇವ್ರ ಲವ್ ಸ್ಟೋರಿ ಎಂಥದ್ದು..? ಯಾರೆಲ್ಲಾ ಬಂದು ಆಶೀರ್ವದಿಸಿದ್ರು..? ಮದ್ವೆ ಎಷ್ಟು ಅರ್ಥಪೂರ್ಣವಾಗಿತ್ತು ಅನ್ನೋದ್ರ ಡೀಟೇಲ್ಸ್ ಇಲ್ಲಿದೆ.

ಕರ್ನಾಟಕದ ನಂಬರ್ ಒನ್ ಆ್ಯಂಕರ್ ಅನುಶ್ರೀ, ಕೂರ್ಗ್‌ ಮೂಲದ ಉದ್ಯಮಿ ರೋಷನ್ ಜೊತೆ ಸಪ್ತಪದಿ ತುಳಿಯೋ ಮೂಲಕ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೌರಿ-ಗಣೇಶ ಹಬ್ಬದ ಈ ಸುಸಂದರ್ಭದಲ್ಲಿ ಗುರು ಹಿರಿಯರು ನಿಶ್ಚಯಿಸಿದ ಶುಭ ಮುಹೂರ್ತದಲ್ಲಿ ಸತಿ-ಪತಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇಷ್ಟು ದಿನ ಒಂಟಿಯಾಗಿದ್ದ ಅನುಗೆ ಅನುಕ್ಷಣ ಜೊತೆಗಿರೋ ಪತಿರಾಯ ಈಕೆ ಬಾಳಿಗೆ ಬಂದಾಗಿದೆ.

ಬೆಂಗಳೂರಿನ ಹೊರವಲಯದಲ್ಲಿರೋ ಖಾಸಗಿ ರೆಸಾರ್ಟ್‌‌ವೊಂದರಲ್ಲಿ ಇಂದು ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ನಡೆದಿದ್ದು, ಅನುಶ್ರೀ ಮಹಾಲಕ್ಷ್ಮೀಯಂತೆ ಕಂಗೊಳಿಸುತ್ತಿದ್ದರು. ಮದುವೆ ಕಳೆ ಆಕೆಯಲ್ಲಿ ಇತ್ತೀಚೆಗೆ ತುಂಬಿ ತುಳುಕಿತ್ತು. ಅಲ್ಲದೆ, ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಜೊತೆ ಬಹಳ ಸರಳವಾಪೂರ್ಣಗಿ, ಅರ್ಥವಾಗಿ ರೋಷನ್ ಕೈ ಹಿಡಿದರು ಅನು.

ಮಂತ್ರ ಮಾಂಗಲ್ಯ ಆಗಬೇಕೆಂದುಕೊಂಡಿದ್ದ ಅನುಶ್ರೀ ಕೊನೆಗೆ ರೋಷನ್‌ಗಾಗಿ ಸರಳ ವಿವಾಹಕ್ಕೆ ಅಣಿಯಾಗಿದ್ದಾರೆ. ಅಂದಹಾಗೆ ರಾಜರತ್ನ ಅಪ್ಪು ಡೈ ಹಾರ್ಡ್‌ ಫ್ಯಾನ್ ಆಗಿರೋ ಅನುಶ್ರೀ, ಅಪ್ಪು ಭಾವಚಿತ್ರ ಇಟ್ಟುಕೊಂಡೇ ಮದ್ವೆ ಆಗಿರೋದು ಇಂಟರೆಸ್ಟಿಂಗ್. ಅಲ್ಲದೆ, ರೋಷನ್ ಸಿಗೋಕೆ ಕಾರಣ ಕೂಡ ಅಪ್ಪು ಅನ್ನೋದು ಮತ್ತೊಂದು ಹೈಲೈಟ್. ಹೌದು, ಮದ್ವೆ ಬಳಿಕ ಮೊದಲ ಬಾರಿಗೆ ಪತಿ ರೋಷನ್ ಜೊತೆ ಕೂಡ ಮಾತನಾಡಿದ ಅನುಶ್ರೀ, ಪುನೀತ ಪರ್ವದಲ್ಲಿ ಇವರು ಪರಿಚಯ ಆದ್ರು. ಸ್ನೇಹವಾಯ್ತು, ಪ್ರೇಮಾಂಕುರಿಸಿತು. ಮನೆಯಲ್ಲಿ ಹೇಳಿ ಮನದನ್ನೆಯಾದೆ ಅಂತ ಲವ್ ಸ್ಟೋರಿ ಬಿಚ್ಚಿಟ್ಟರು.

ಇನ್ನು ಶಿವಣ್ಣ-ಗೀತಕ್ಕ ದಂಪತಿ, ರಚಿತಾ ರಾಮ್, ಹಂಸಲೇಖ, ತರುಣ್ ಸುಧೀರ್ ದಂಪತಿ, ಲವ್ಲಿಸ್ಟಾರ್ ಪ್ರೇಮ್, ಶರಣ್, ಚೈತ್ರಾ ಆಚಾರ್, ಹಿರಿಯನಟಿ ತಾರಾ, ರಾಜ್ ಬಿ ಶೆಟ್ಟಿ, ಶ್ವೇತಾ ಚೆಂಗಪ್ಪ, ಅರ್ಜುನ್ ಜನ್ಯ, ವಿಜಯ್ ರಾಘವೇಂದ್ರ, ಪ್ರೇಮಾ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಸೇರಿದಂತೆ ಸಾಲು ಸಾಲು ಕಲಾವಿದರು ಹಾಗೂ ತಂತ್ರಜ್ಞರು ಬಂದು ನವ ವಧು-ವರರಿಗೆ ಶುಭ ಕೋರಿದ್ರು.

ಒಟ್ಟಾರೆ ಅನುಶ್ರೀಗೆ ಇಡೀ ಚಿತ್ರರಂಗದ ನಂಟಿದೆ. ಎಲ್ಲರೊಟ್ಟಿಗೆ ಉತ್ತಮ ಬಾಂಧವ್ಯ, ಒಡನಾಟ ಇರೋ ಅನುಶ್ರೀಗೆ ಚಿತ್ರರಂಗದ ಬಹುತೇಕ ಮಂದಿ ಗಣ್ಯರು ಬಂದು ಹರಸಿ ಹಾರೈಸಿದ್ರು. ಆದ್ರೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದಂತಹ ಒಂದಷ್ಟು ಮಂದಿ ಅನುಶ್ರೀ ಫ್ಯಾನ್ಸ್‌ಗೆ ಕಲ್ಯಾಣ ಮಂಟಪದ ಬಳಿ ಬಿಡಲಿಲ್ಲ ಅನ್ನೋ ಕೊರಗಿತ್ತು. ಅಭಿಮಾನಿಗಳು ಕೊಂಚ ಬೇಸರ ವ್ಯಕ್ತಪಡಿಸಿದರಾದ್ರೂ, ಅನುಶ್ರೀ-ರೋಷನ್ ಕಲ್ಯಾಣ ಮಾತ್ರ ಅರ್ಥಪೂರ್ಣ ಅನಿಸಿತು. ಹ್ಯಾಪಿ ಮ್ಯಾರೀಡ್ ಲೈಫ್ ಅನುಶ್ರೀ.

Exit mobile version