ಹೊಸ ಬಾಳಿನ ಹೊಸ್ತಿಲಿಗೆ ಕಾಲಿಟ್ಟ ನಿರೂಪಕಿ ಅನುಶ್ರಿ ಹಾರೈಸಿದ ಕೋಟಿ ಕೋಟಿ ಹೃದಯಗಳಿಗೆ ಧನ್ಯವಾದ ಹೇಳಿದ್ದಾರೆ. ಅನುಶ್ರೀ -ರೋಶನ್ ಸಪ್ತಪದಿ ವೇಳೆ ಕಣ್ಣೀರಿಟ್ಡಿದ್ಯಾಕೆ. ಹೇಗಿತ್ತು ಅನುಶ್ರೀ ಕಲ್ಯಾಣ? ಹೇಗೆ ಸಿಂಗಾರ ಮಾಡಿಕೊಂಡಿದ್ರು? ಸೆಲೆಬ್ರಿಟಿಗಳು ಯಾರೆಲ್ಲ ಹಾರೈಸಿದ್ರು ಗೊತ್ತಾ?
- ಅನುಶ್ರೀ -ರೋಷನ್ ವಿವಾಹ ಸಮಾರಂಭದ ಝಲಕ್..!
- ಮದುವೆಯಲ್ಲಿ ಅಪ್ಪು ಫೋಟೋ.. ಅನುಶ್ರೀ ಕಣ್ಣೀರು
- ಪತಿಯನ್ನು ನೋಡಿ ನಾಚಿ ನೀರಾದ ಮಾತಿನ ಮಲ್ಲಿ
ಕಿರುತೆರೆ ಜಗತ್ತಿನಲ್ಲಿ ನಿರೂಪಕಿಯಾಗಿ ಅತೀ ಹೆಚ್ಚು ಜನಪ್ರಿಯತೆ ಪಡೆದ ಮಾತಿನ ಮಲ್ಲಿ ನಿರೂಪಕಿ ಅನುಶ್ರಿ ರೋಶನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಅಂದಹಾಗೆ ಬೆಂಗಳೂರಿನ ಕಗ್ಗಲಿಪುರದ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ಮದುವೆ ಮಾಡಿಕೊಂಡ ಅನುಶ್ರೀ ಕಲ್ಯಾಣ ಮಂಟಪ ವಿಶೇಷವಾಗಿ ಅಲಂಕೃತವಾಗಿತ್ತು ಬಗೆ ಬಗೆಯ ಹೂಗಳಿಂದ ತುಂಬಿದ್ದ ಮಂಟಪದಲ್ಲಿ ಮೊದಲಿಗೆ ಅಪ್ಪು ದರ್ಶನವಾಗ್ತಿತ್ತು.
ಅಂದ ಹಾಗೆ ತಳಿರು ತೋರಣಗಳಿಂದ ರಂಗು ರಂಗಿನ ಚಿತ್ತಾರಗಳಿಂದ ಶೃಂಗಾರಗೊಂಡಿದ್ದ ಮಂಟಪಕ್ಕೆ ಅನುಶ್ರಿ ರೋಶನ್ ಎಂಟ್ರಿ ಕೊಟ್ಟ ವೇಳ ಭಾವುಕರಾಗಿದ್ರು. ಒಬ್ಬರನ್ನೊಬ್ಬರು ಕಣ್ಣಲ್ಲೇ ಕನಸುಗಳನ್ನ ಅರಳಿಸುತ್ತಾ ಸಪ್ತಪದಿ ತುಳಿದಿದ್ರು. ಇದೇ ವೇಳೆ ಅನುಶ್ರಿ ಕೊರಳಿಗೆ ಮಾಂಗಲ್ಯಧಾರಣೆ ಆದ ಸಮಯ ಅನುಶ್ರಿ ರೋಶನ್ ಗೆ ಥ್ಯಾಂಕ್ಸ್ ಹೇಳಿ ಆನಂದಬಾಷ್ಪ ಸುರಿಸಿದ್ರು.
ಅನುಶ್ರಿ ಮದುವೆಯಲ್ಲಿ ಅರ್ಜುನ್ ಜನ್ಯ, ಶಿವಣ್ಣ, ಹಂಸಲೇಖ, ರಾಜ್ ಬಿ ಶೆಟ್ಟಿ, ರಚಿತಾ ರಾಮ್, ಡಾಲಿ, ತರುಣ್ ಸೋನಲ್ ದಂಪತಿ, ನಟಿ ಪ್ರೇಮ ಸೇರಿದಂತೆ ಹಲವು ನಟನಟಿಯರು ಸಂಭ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ರು.
ಅನುಶ್ರೀ ಸೋಶಿಯಲ್ ಮೀಡಿಯಾದಲ್ಲಿ, “ಹೊಸ ಬಾಳಿನ ಹೊಸ್ತಿಲಲ್ಲಿ ಹಾರೈಸಿದ ಹೃದಯಗಳಿಗೆ ಕೋಟಿ ಕೋಟಿ ಧನ್ಯಾವಾದಗಳು” ಎಂದು ಮದುವೆ ವಿಡಿಯೋ ಶೇರ್ ಮಾಡಿದ್ದಾರೆ. ಅಂದಹಾಗೆ ಈ ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಫೋಟೋ, ಅನುಶ್ರೀ-ರೋಶನ್ ಜೊತೆಗೆ ಅಪ್ಪು ನಿಂತಿರುವಂತೆ ವಿಡಿಯೋ ಎಡಿಟ್ ಮಾಡಲಾಗಿದೆ. ಇದನ್ನು ನೋಡಿದ ಎಂಥವರು ಕೂಡ ಭಾವುಕರಾಗುತ್ತಾರೆ. ಒಟ್ಟಿನಲ್ಲಿ ಏಕಾಂಗಿ ನಿರೂಪಣೆ ನಂತರ ಹೊಸ ಮನ್ವಂತರ ಅಂತ ಮದುವೆ ಸುದ್ದಿ ನೀಡಿದ್ದ ಅನುಶ್ರೀ ಈಗ ಅವರ ಅಭಿಮಾನಿಗಳ ಹಾರೈಕೆಗೆ ಧನ್ಯವಾದ ಹೇಳಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್