ಮದುವೆಯ ಸೀಕ್ರೆಟ್ ರಿವೀಲ್ ಮಾಡಿದ ಆ್ಯಂಕರ್ ಅನುಶ್ರೀ

Untitled design 2025 04 09t163742.023

ನಟಿ-ಆ್ಯಂಕರ್ ಅನುಶ್ರೀ ಅವರ ಮದುವೆ ವಿಷಯವು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆಯಾಗುತ್ತಿರುತ್ತದೆ. ಇದೀಗ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ತಮ್ಮ ಮದುವೆ ವಿಷಯದ ರಿಲೀವ್‌ ಮಾಡಿದ್ದಾರೆ. ನಾಳೆ (ಏಪ್ರಿಲ್ 10) ಲೈಕಾ ವಸುಪಾಲ್ ಮತ್ತು ನಾಗಭೂಷಣ್ ನಟಿಸಿರುವ ವಿದ್ಯಾಪತಿ ಸಿನಿಮಾ ರಿಲೀಸ್ ಆಗಲಿದೆ. ವಿದ್ಯಾಪತಿ ಸಿನಿಮಾ ಪ್ರಚಾರದ ಸಂದರ್ಭದಲ್ಲಿ, ಅನುಶ್ರೀ “ಈ ವರ್ಷದೊಳಗೆ ಅನುಪತಿ ಬಂದೇ ಬರುತ್ತದೆ” ಎಂದು ಹೇಳಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಈ ಹೇಳಿಕೆ ಅವರ ಮದುವೆಗೆ ಸುಳಿವು ಕೊಟ್ಟಂತೆ ಇದೆ. 

ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ನಡೆದ ಸಂವಾದದಲ್ಲಿ, ಮಲೈಕಾ ವಸುಪಾಲ್ “ನಿಮ್ಮ ಗಂಡ ಹೇಗಿರಬೇಕು?” ಎಂದು ಕೇಳಿದಾಗ, ಅನುಶ್ರೀ “ಅವನು ಜವಾಬ್ದಾರಿಯುತವಾಗಿ ತನ್ನ ಜೀವನ ನಡೆಸಿದರೆ ಸಾಕು. ನನ್ನನ್ನು ಬದುಕಲು ಬಿಡಬೇಕು” ಎಂದು ಉತ್ತರಿಸಿದರು. ಮದುವೆಗೆ ಸಂಬಂಧಿಸಿದ ಮಲೈಕಾ ಅವರ ಪ್ರಶ್ನೆಗೆ, “ನಾಳೆ ವಿದ್ಯಾಪತಿ, ಈ ವರ್ಷ ಅನುಪತಿ” ಎಂದು ಹಾಸ್ಯವಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ತಮ್ಮ ಮಾತಿನ ಮೂಲಕವೇ ಛಾಪು ಮೂಡಿಸಿದ ಆ್ಯಂಕರ್ ಅನುಶ್ರೀ ಅವರ “ಮದುವೆ ಯಾವಾಗ?” ಎಂದು ಅಭಿಮಾನಿಗಳು ಕೇಳುತ್ತಿರುತ್ತಾರೆ. ಇದಕ್ಕೆಲ್ಲಾ ಉತ್ತರಿಸುತ್ತಿದ್ದ ಅನುಶ್ರೀ, “ಮದುವೆ ಆಗದೆ ಇರಲ್ಲ, ಮದುವೆ ಆಗೇ ಆಗುತ್ತೆ. ಆ ಸಮಯದಲ್ಲಿ ನಿಮಗೆ ತಿಳಿಸುತ್ತೇನೆ. ಅಲ್ಲಿಯವರೆಗೆ ಈ ವಿಷಯ ಕೆದಕಬೇಡಿ” ಎಂದು ವಿನಂತಿಸಿದ್ದಾರೆ. ಆದರೂ, ಸೋಷಿಯಲ್ ಮೀಡಿಯಾದಲ್ಲಿ ಅವರ ಪ್ರತಿ ಪೋಸ್ಟ್‌ನ ಕಾಮೆಂಟ್‌ಗಳಲ್ಲಿ ಈ ಪ್ರಶ್ನೆ ಮೂಡುತ್ತಲೇ ಇದೆ.

 ಇತ್ತೀಚೆಗೆ ಜೀ ಕನ್ನಡದ “ಬ್ಯಾಚುಲರ್ಸ್ ಪಾರ್ಟಿ” ಶೋದಲ್ಲಿ, ರವಿಚಂದ್ರನ್ ಅನುಶ್ರೀಗೆ “ಮದುವೆ ಫಿಕ್ಸ್ ಆಗಿದೆ” ಎಂದು ಹೇಳಿ ಗಮನ ಸೆಳೆದಿದ್ದರು. ನೃತ್ಯ ಸ್ಪರ್ಧೆಯ ಸಂದರ್ಭದಲ್ಲಿ, ಅಮೃತಾ ಅವರಿಗೆ ಚಳಿ ಎಂದು ಹೇಳಿದಾಗ, ಅನುಶ್ರೀ “ನೋಡುವವರಿಗೆ ಬಿಸಿ” ಎಂದು ಜೋಕ್ ಮಾಡಿದ್ದರು. ಇದಕ್ಕೆ ರವಿಚಂದ್ರನ್ “ಬಿಸಿ ಆದ್ರೆ ಮದುವೆ ನಿಕ್ಕ್” ಎಂದು ಹಾಸ್ಯದಲ್ಲಿ ಮಾತನಾಡಿದ್ದರು. ಅವರ ಈ ಮಾತನ್ನು ಅಭಿಮಾನಿಗಳು ಗಂಭೀರವಾಗಿ ತೆಗೆದುಕೊಂಡಿದ್ದರು.

ವಿದ್ಯಾಪತಿ ಚಿತ್ರದ ಯಶಸ್ಸು ಮತ್ತು ಅನುಪತಿ ಪ್ರಾಜೆಕ್ಟ್‌ಗೆ ಸಂಬಂಧಿಸಿ ಅನುಶ್ರೀ ನೀಡಿದ ಹೇಳಿಕೆಗಳು ಅವರ ವೈಯಕ್ತಿಕ ಜೀವನದತ್ತ ಸೂಚನೆಗಳೆಂದು ಅನುಮಾನಿಸಲಾಗಿದೆ. ರವಿಚಂದ್ರನ್‌ರಂತಹ ಹಿರಿಯರ ಹಿಂಟ್‌ಗಳು ಮತ್ತು ಅನುಶ್ರೀಯವರ ಸ್ಪಷ್ಟ ಉತ್ತರಗಳು, 2024ರೊಳಗೆ ಮದುವೆ ನಡೆಯಬಹುದೆಂದು ಹೇಳಲಾಗುತ್ತದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

 

Exit mobile version