ಅರುಂಧತಿ, ಭಾಗಮತಿ ಮೀರಿಸುವಂತಿದೆ ಅನುಷ್ಕಾ ಕಥನಾರ್

50ನೇ ಚಿತ್ರದ ಮೂಲಕ ಮಲಯಾಳಂಗೂ ಕಾಲಿಟ್ರು ಕನ್ನಡತಿ

Untitled design 2026 04 02T193131.649

ಕಥನಾರ್ ಮೂಲಕ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ ಬಾಹುಬಲಿ ದೇವಸೇನಾ ಅನುಷ್ಕಾ ಶೆಟ್ಟಿ. ಯೆಸ್.. ತಮ್ಮ 50ನೇ ಸಿನಿಮಾ ಮೂಲಕ ಮಲಯಾಳಂಗೂ ಕಾಲಿಟ್ಟಿರೋ ಕನ್ನಡತಿ, ಸದ್ಯ ವಿಶ್ವ ಸಿನಿದುನಿಯಾ ಹುಬ್ಬೇರಿಸಿ ನೋಡುವಂತೆ ಮಾಡಿದ್ದಾರೆ. ಇಷ್ಟಕ್ಕೂ ಕಥನಾರ್ ಮೂವಿ ವಿಶೇಷತೆ ಏನು..? ಅರುಂಧತಿ, ಭಾಗಮತಿಗಿಂತ ಅದು ಹೇಗೆ ವಿಭಿನ್ನ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ ನೋಡಿ..

ಇಂದ್ರಜಾಲವನ್ನ ನಾನು ನಂಬಲ್ಲ. ಅವಗಾಹನೆಯಿಂದ ರಹಸ್ಯ ಮಾರ್ಗಗಳಲ್ಲಿ ಅವರು ಅದನ್ನ ಪರಿಶೋಧಿಸುತ್ತಿದ್ದಾರೆ. ಯಾರ ಊಹೆಗೂ ಎಟುಕದ. ಎಲ್ಲರೂ ಆಶ್ಚರ್ಯದಿಂದ ನೋಡುವಂತಹ ಒಂದು ಮಾಯಾಜಾಲ. ನಮ್ಮ ಆತ್ಮದ ಜೊತೆ ಬೆರೆತು, ನಮ್ಮ ಜ್ಞಾಪಗಳ ಜೊತೆಗೇ ಐಕ್ಯ ಆಗುವಂತಹ ಒಂದು ಘಟನೆ.

ನೋಡಿದ್ದು, ಕೇಳಿದ್ದು ಯಾವುದೂ ಬರಲ್ಲ. ಬರೋದು ಒಂದೇ. ಕಷ್ಟ ಕಾಲದಲ್ಲಿ ಬರೋ ಮಹಾ ಮಾನವ. ಅದೇ ಅಗ್ನಿ. ಇದು ಇತ್ತೀಚಗೆ ಬಿಡುಗಡೆ ಆಗಿರೋ ಮಲಯಾಳಂನ ಕಥನಾರ್ ಮೂವಿಯ ಟ್ರೈಲರ್ ಝಲಕ್‌‌ನಲ್ಲಿರೋ ಹಿನ್ನೆಲೆ ಧ್ವನಿ. ಇದರಲ್ಲೇ ಗೊತ್ತಾಗುತ್ತೆ ಇದೊಂದು ಪೀರಿಯಡ್ ಫ್ಯಾಂಟಸಿ ಥ್ರಿಲ್ಲರ್. ರೋಜಿನ್ ಥಾಮಸ್ ನಿರ್ದೇಶನದ ಈ ಚಿತ್ರದಲ್ಲಿ ಮಲಯಾಳಂ ನಟ ಜಯಸೂರ್ಯ ಹಾಗೂ ನಮ್ಮ ಕನ್ನಡತಿ, ಬಾಹುಬಲಿ ದೇವಸೇನಾ ಖ್ಯಾತಿಯ ಅನುಷ್ಕಾ ಶೆಟ್ಟಿ ಲೀಡ್‌‌ನಲ್ಲಿ ಕಾಣಸಿಗುತ್ತಾರೆ.

ಅಂದಹಾಗೆ ಈ ಟ್ರೈಲರ್ ಝಲಕ್ ನಿಜಕ್ಕೂ ವ್ಹಾವ್ ಫೀಲ್ ತರಿಸಿದ್ದು, ಅನುಷ್ಕಾ ಶೆಟ್ಟಿಯ ಈ ಹಿಂದಿನ ಅರುಂಧತಿ ಹಾಗೂ ಭಾಗಮತಿ ಸಿನಿಮಾಗಳ ಕಂಟೆಂಟ್‌ನ ಮೀರಿಸುವಂತಿದೆ. ಹೌದು.. ವಿಶ್ಯುವಲ್ ಪ್ರೆಸೆಂಟೇಷನ್, ಗ್ರಾಫಿಕ್ಸ್ ಹಾಗೂ ಸ್ಪೆಷಲ್ ಎಫೆಕ್ಟ್ಸ್ ನೋಡುಗರನ್ನ ಹೊಸ ಪ್ರಪಂಚಕ್ಕೆ ಕೊಂಡೊಯ್ಯಲಿದೆ. ಅಂದಹಾಗೆ ಈ ಸಿನಿಮಾದ ಕಥೆಯ ಎಳೆ ಕಡಮಟ್ಟು ಕಥನಾರ್‌ ಕುರಿತ ಕಥಾನಕ ಅನ್ನೋದು ವಿಶೇಷ. 9ನೇ ಶತಮಾನದಲ್ಲಿ ಕ್ರಿಶ್ಚಿಯರ್ ಧರ್ಮಗುರು ಆಗಿದ್ದ ಕಥನಾರ್, ಆತನ ಬಳಿ ಇದ್ದಂತಹ ಮ್ಯಾಜಿಕಲ್ ಪವರ್‌ನಿಂದ ಏನೆಲ್ಲಾ ಮಾಡ್ತಿದ್ರು ಅನ್ನೋದೇ ಚಿತ್ರದ ಅಸಲಿ ಕಥೆ.

ಇಲ್ಲಿ ಕಥನಾರ್ ಅನ್ನೋ ಟೈಟಲ್ ರೋಲ್‌‌ನಲ್ಲಿ ಜಯಸೂರ್ಯ ನಟಿಸಿದ್ದು, ಅನುಷ್ಕಾ ಶೆಟ್ಟಿ ಗಮನ ಸೆಳೆಯಲಿದ್ದಾರೆ. ಅಲ್ಲದೆ ಪ್ರಭುದೇವ ಕೂಡ ತಾರಾಗಣದಲ್ಲಿದ್ದು, ಟ್ರೈಲರ್‌ನಿಂದ ಚಿತ್ರಪ್ರೇಮಿಗಳಿಗೆ ಫ್ರೆಶ್ ಫೀಲ್ ಕೊಟ್ಟಿದೆ ಚಿತ್ರ. ಕಂಟೆಂಟ್ ಬೇಸ್ಡ್ ಸಿನಿಮಾಗಳನ್ನ ನೀಡುವುದರಲ್ಲಿ ಮಲಯಾಳಂ ಇಂಡಸ್ಟ್ರಿ ಎತ್ತಿದ ಕೈ. ಇದೀಗ ಈ ಕಥನಾರ್ ಚಿತ್ರದಿಂದ ಅದನ್ನ ಮತ್ತೊಮ್ಮೆ ಪ್ರೂವ್ ಮಾಡಲು ಹೊರಟಿದೆ ಟೀಂ. ಅನುಷ್ಕಾಗೆ ಇದು ಚೊಚ್ಚಲ ಮಲಯಾಳಂ ಮೂವಿ ಆಗಿದ್ದು, ಆಕೆಗಿದು 50ನೇ ಸಿನಿಮಾ ಕೂಡ ಹೌದು.

ಮಲಯಾಳಂನಲ್ಲಿ ತಯಾರಾಗಿರೋ ಈ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದು, ವಿಶ್ವ ಸಿನಿದುನಿಯಾದ ಬೆಳ್ಳಿತೆರೆಗೆ ಬರೋಬ್ಬರಿ 14 ಭಾಷೆಗಳಲ್ಲಿ ನೀಡುವ ದೊಡ್ಡ ಆಶಯ ಹೊತ್ತಿದೆ. ಹೌದು.. ಕನ್ನಡ, ತೆಲುಗು, ತಮಿಳು, ಹಿಂದಿ, ಬೆಂಗಾಳಿ, ಚೈನೀಸ್, ಫ್ರೆಂಚ್, ಕೊರಿಯನ್, ಇಟಾಲಿಯನ್, ರಷ್ಯನ್, ಇಂಡೋನೀಸ್, ಇಂಗ್ಲೀಷ್ ಹಾಗೂ ಜಾಪನೀಸ್ ಭಾಷೆಗಳಿಗೆ ಡಬ್ಬಿಂಗ್ ಕಾರ್ಯಗಳು ಭರದಿಂದ ಸಾಗುತ್ತಿವೆ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರೋ ಅನುಷ್ಕಾಗೆ ಈ ಚಿತ್ರ ಕೈ ಹಿಡಿದ್ರೆ, ಆಕೆಯ ಹಣೆಬರಹ ಕಂಪ್ಲೀಟ್ ಆಗಿ ಬದಲಾಗೋದ್ರಲ್ಲಿ ಡೌಟೇ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version