ಕೊಹ್ಲಿ ಪತ್ನಿ ಭರ್ಜರಿ ಕಂಬ್ಯಾಕ್..ಅಲ್ಲು-ಅಟ್ಲಿ ಜೊತೆ ಅನುಷ್ಕಾ

ಪುಷ್ಪ ಸ್ಟಾರ್ ಸೈನ್ಸ್ ಫಿಕ್ಷನ್‌‌ನಲ್ಲಿ ಸಾಲು ಸಾಲು ನಟಿಮಣಿಯರು

Untitled design 2026 03 23T140908.870

ಕಿಂಗ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮತ್ತೆ ಬಣ್ಣದ ಲೋಕಕ್ಕೆ ಹಿಂದಿರುಗುವ ಮುನ್ಸೂಚನೆ ಕೊಟ್ಟಿದ್ದಾರೆ. ಮದುವೆ, ಮಕ್ಕಳು ಅಂತ ಕಂಪ್ಲೀಟ್ ಫ್ಯಾಮಿಲಿ ವುಮನ್ ಆಗಿದ್ದ ಅನುಷ್ಕಾ, ಇದೀಗ 8 ವರ್ಷಗಳ ನಂತ್ರ ಕಂಬ್ಯಾಕ್ ಮಾಡ್ತಿದ್ದಾರೆ. ಇಷ್ಟಕ್ಕೂ ಯಾವ ಸ್ಟಾರ್ ಜೊತೆ..? ಯಾವ ಮೂವಿ..? ಏನು ಎತ್ತ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ..

ಅನುಷ್ಕಾ ಶರ್ಮಾ.. ಬಾಲಿವುಡ್ ಅಂಗಳದ ಈ ಬ್ಯೂಟಿ, ಆರ್ಮಿ ಬ್ಯಾಗ್ರೌಂಡ್ ಕುಟುಂಬದಿಂದ ಬಂದವರು. 2008ರಲ್ಲಿ ಶಾರೂಖ್ ಖಾನ್‌ರ ರಬ್ ನೇ ಬನಾದಿ ಜೋಡಿ ಚಿತ್ರದಿಂದ ಬಣ್ಣ ಹಚ್ಚಿ, ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳಿಂದ ಬಹುಬೇಗ ಬಾಲಿವುಡ್‌‌ನ ಮೋಸ್ಟ್ ಡಿಮ್ಯಾಂಡಿಂಗ್ ನಟಿ ಅನಿಸಿಕೊಂಡರು. ಆದ್ರೆ 2017ರಲ್ಲಿ ಕ್ರಿಕೆಟರ್ ವಿರಾಟ್ ಕೊಹ್ಲಿಯನ್ನ ಮದ್ವೆ ಆದ  ಬಳಿಕ ಅದ್ಯಾಕೋ ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು.

ಇದೀಗ ಐಪಿಎಲ್‌ಗಾಗಿ ಕೊಹ್ಲಿ ನಮ್ಮ ಬೆಂಗಳೂರಿಗೆ ವಾಪಸ್ ಆಗ್ತಿದ್ದಾರೆ. ಇತ್ತ ಅನುಷ್ಕಾ ಕೂಡ 2018ರ ನಂತರ ನಟನೆಯಿಂದ ಒಂದು ದೊಡ್ಡ ಗ್ಯಾಪ್ ಪಡೆದಿದ್ರು. ಇದೀಗ 8 ವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಭರ್ಜರಿ ಕಂಬ್ಯಾಕ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಅದೂ ನಮ್ಮ ಸೌತ್ ಡೈರೆಕ್ಟರ್ ಹಾಗೂ ಸೂಪರ್ ಸ್ಟಾರ್ ಚಿತ್ರದ ಮೂಲಕ ಅನ್ನೋದು ಇಂಟರೆಸ್ಟಿಂಗ್.

ಹೌದು.. ಪುಷ್ಪ ಹಾಗೂ ಪುಷ್ಪ-2 ಚಿತ್ರಗಳ ಬಳಿಕ ಗ್ಲೋಬಲಿ ಸಖತ್ ಸಂಚಲನ ಮೂಡಿಸಿರೋ ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಸದ್ಯ ತಮಿಳು ಡೈರೆಕ್ಟರ್ ಅಟ್ಲೀ ಜೊತೆಗೂಡಿ ಎಎ22 ಸಿನಿಮಾ ಮಾಡ್ತಿದ್ದಾರೆ. ಇದೊಂದು ಸೈನ್ಸ್ ಫಿಕ್ಷನ್ ಮೂವಿ ಆಗಿದ್ದು, ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗ್ತಾ ಬಂದಿದೆ. 800 ಕೋಟಿ ಬಜೆಟ್‌ನ ಈ ಹಾಲಿವುಡ್ ಸ್ಟ್ಯಾಂಡರ್ಡ್ ಮೂವಿಗೆ ಇದೀಗ ಅನುಷ್ಕಾ ಶರ್ಮಾ ಕೂಡ ನಾಯಕನಟಿ ಎನ್ನಲಾಗ್ತಿದೆ.

ಈಗಾಗ್ಲೇ ದೀಪಿಕಾ ಪಡುಕೋಣೆ, ಮೃಣಾಳ್ ಠಾಕೂರ್, ಜಾಹ್ನವಿ ಕಪೂರ್, ರಶ್ಮಿಕಾ ಮಂದಣ್ಣ, ರಮ್ಯಾ ಕೃಷ್ಣ ಹಾಗೂ ಯೋಗಿ ಬಾಬು ಚಿತ್ರದ ತಾರಾಗಣದಲ್ಲಿದ್ದು, ಅನುಷ್ಕಾ ಎಂಟ್ರಿಯಿಂದ ಸಿನಿಮಾದ ಜೋಶ್ ಮತ್ತಷ್ಟು ಹೆಚ್ಚಾಗಿದೆ. ಸಿಕ್ಕಾಪಟ್ಟೆ ಬಿಗ್ ಸ್ಕೇಲ್‌‌ನಲ್ಲಿ ತಯಾರಾಗ್ತಿರೋ ಈ ಬಿಗ್ಗೆಸ್ಟ್ ಬಿಗ್ ಬಜೆಟ್ ಪ್ರಾಜೆಕ್ಟ್ ಮೂಲಕ ಅನುಷ್ಕಾ ಕಂಬ್ಯಾಕ್ ಮಾಡ್ತಿರೋದು ಖುಷಿಯ ವಿಚಾರ. ಅಂದಹಾಗೆ 2017ರಲ್ಲಿ ವಿರಾಟ್ ಜೊತೆ ವಿವಾಹವಾದ ಬಳಿಕ ಮದ್ವೆ, ಮಕ್ಕಳು ಅಂತ ಕಂಪ್ಲೀಟ್ ಗೃಹಿಣಿ ಆಗಿಬಿಟ್ಟಿದ್ರು ಅನುಷ್ಕಾ. ಸಾಲದು ಅಂತ ಇಂಡಿಯಾ ಬಿಟ್ಟು ಲಂಡನ್‌ಗೆ ಕೂಡ ಶಿಫ್ಟ್ ಆಗಿದ್ದಾರೆ. ತಮ್ಮ ಮಕ್ಕಳನ್ನ ಅಲ್ಲೇ ಸ್ಕೂಲಿಂಗ್ ಮಾಡಿಸ್ತಿರೋದು ಮತ್ತೊಂದು ಹೈಲೈಟ್.

ಅನುಷ್ಕಾಗೆ 2016ರ ಸಲ್ಮಾನ್ ಜೊತೆಗಿನ ಸುಲ್ತಾನ್ ಹಾಗೂ ರಣ್‌ಬೀರ್ ಜೊತೆಗಿನ ಏ ದಿಲ್ ಹೈ ಮುಷ್ಕಿಲ್ ಸಿನಿಮಾಗಳು ದೊಡ್ಡ ಹಿಟ್ ಆಗಿದ್ದವು. ಅದೇ ರಣ್‌ಬೀರ್ ಜೊತೆ ಸಂಜು ಸಿನಿಮಾ ಮಾಡಿ ಭೇಷ್ ಅನಿಸಿಕೊಂಡಿದ್ದ ಅನುಷ್ಕಾ ಶಾರುಖ್ ಝೀರೋ ಚಿತ್ರವೇ ಕೊನೆ. ಅದಾದ ಬಳಿಕ ಗಾಯಬ್ ಆಗಿಬಿಟ್ಟಿದ್ರು. ಇದೀಗ ಮತ್ತೆ ಚಿತ್ರರಂಗದತ್ತ ಮುಖ ಮಾಡ್ತಿರೋ ಸುದ್ದಿ ಕೇಳಿ ಚಿತ್ರಪ್ರೇಮಿಗಳ ಜೊತೆ ವಿರಾಟ್ ಫ್ಯಾನ್ಸ್ ಕೂಡ ಖುಷ್ ಆಗಿದ್ದಾರೆ. ಈ ಸುದ್ದಿ ಅಫಿಶಿಯಲಿ ಅನೌನ್ಸ್ ಆಗೋದೊಂದೇ ಬಾಕಿ ಎನ್ನಲಾಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version