33 ಸಾವಿರ ಕೋಟಿ ಸನ್ ಗ್ರೂಪ್ಗೆ ಸನ್ ಇನ್ ಲಾ ಆಗ್ತಿರೋ ಅನಿರುದ್ದ್ ರವಿಚಂದರ್ ಮದುವೆಯ ಭವಿಷ್ಯವನ್ನ 13 ವರ್ಷಗಳ ಹಿಂದೆಯೇ ನುಡಿದಿದ್ರು ಜ್ಯೋತಿಷಿ. ಅದ್ಯಾರು ಅನ್ನೋದ್ರ ಜೊತೆಗೆ ಅನಿರುದ್ದ್ ಬ್ಯಾಗ್ರೌಂಡ್ ಹಾಗೂ ತಲೈವಾ ರಜನಿಕಾಂತ್ಗೂ ಇವರಿಗೂ ಇರೋ ಸಂಬಂಧ ಏನು ಅನ್ನೋದ್ರ ಡಿಟೈಲ್ಡ್ ಸ್ಟೋರಿ ಇಲ್ಲಿದೆ ನೋಡಿ..
- ಕಾವ್ಯಾ ಮಾರನ್-ಅನಿರುದ್ದ್.. ಎಷ್ಟು ವರ್ಷದ ಸ್ನೇಹ & ಲವ್
- ಒಟ್ಟಿಗೆ ಕಾಣಿಸಿಕೊಂಡ ಜೋಡಿಯ ವಿಡಿಯೋ ಎಲ್ಲೆಡೆ ವೈರಲ್
- ಗಾಯಕಿ ಆ್ಯಂಡ್ರಿಯಾ ಜೊತೆ ಅನಿರುದ್ದ್ ಲವ್ ನಂತ್ರ ಬ್ರೇಕಪ್
ಕಾವ್ಯಾ ಹಾಗೂ ಅನಿರುದ್ದ್ ನಡುವೆ ದೊಡ್ಡ ಲವ್ ಸ್ಟೋರಿ ಏನೂ ಇಲ್ಲ. ಆದ್ರೆ ಕಳೆದ ವರ್ಷ ಇವರಿಬ್ಬರೂ ಸೀಕ್ರೆಟ್ ಆಗಿ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವದಂತಿ ಹಬ್ಬಿತ್ತು. ಅದಕ್ಕೆ ಖುದ್ದು ಅನಿರುದ್ದ್ ಉತ್ತರ ಕೂಡ ನೀಡಿದ್ದು.. ಆ ತರಹ ಏನೂ ಇಲ್ಲ. ಚಿಲ್ ಆಗಿ ಇರಿ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಹಾಕಿದ್ರು. ಆದ್ರೆ ಈ ಜೋಡಿ ಫಾರಿನ್ನಲ್ಲಿ ಒಟ್ಟಿಗೆ ಓಡಾಡ್ತಿದ್ದ ಸಣ್ಣದೊಂದು ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗಲೂ ಅದೇ ವಿಡಿಯೋ ಇವರ ನಡುವಿನ ಪ್ರೀತಿ, ಪ್ರೇಮ, ಸ್ನೇಹಕ್ಕೆ ಇರೋ ಏಕೈಕ ಸಾಕ್ಷಿಯಾಗಿ ಎಲ್ಲೆಡೆ ಹರಿದಾಡ್ತಿದೆ.
ಅಂದಹಾಗೆ ಅನಿರುದ್ದ್ಗೆ ಈ ಹಿಂದೆ ಗಾಯಕಿ ಜೊತೆ ಲವ್ ಆಗಿತ್ತು. ಆರು ವರ್ಷಗಳ ಏಜ್ ಗ್ಯಾಪ್ ಇದ್ದಂತಹ ಗಾಯಕಿ ಆ್ಯಂಡ್ರಿಯಾ ಜೊತೆಗಿನ ಖಾಸಗಿ ಫೋಟೋಗಳು ವೈರಲ್ ಆಗಿದ್ದವು. ಕಿಸ್ ಮಾಡ್ತಿರೋ ಆ ಫೋಟೋಸ್ ಬಗ್ಗೆ ಇದೆಲ್ಲಾ ಸತ್ಯಕ್ಕೆ ದೂರವಾದ ಮಾತುಗಳು ಅಂತ ತಳ್ಳಿ ಹಾಕಿದ್ರು ಅನಿರುದ್ದ್. ಆದ್ರೆ ಅದ್ಯಾಕೋ ಆ ವಿವಾದದ ನಂತ್ರ ಆತ ಆಕೆ ಜೊತೆ ಬ್ರೇಕಪ್ ಕೂಡ ಮಾಡಿಕೊಂಡರು. ಕರಿಯರ್ ಮೇಲೆ ಫೋಕಸ್ ಮಾಡಿದ್ರು.
- 2013ರಲ್ಲೇ ಟಿವಿ ಶೋನಲ್ಲಿ ಮದ್ವೆ ಭವಿಷ್ಯ ನುಡಿದಿದ್ದ ಜ್ಯೋತಿಷಿ
- ಕಾವ್ಯಾ-ಅನಿರುದ್ದ್ ಮದ್ವೆ ಕುರಿತ ಹಳೆಯ ವಿಡಿಯೋ ಈಗ ಸದ್ದು
ತಂತಿ ಟಿವಿಯ ಅನುದಿನ್ ಅಪ್ಸರಾ ಅನ್ನೋ ಶೋನಲ್ಲಿ 2013ರಲ್ಲಿ ಅಂದ್ರೆ 13 ವರ್ಷಗಳ ಹಿಂದೆಯೇ ಕಂಪೋಸರ್ ಅನಿರುದ್ದ್ ಮದುವೆ ಬಗ್ಗೆ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ರು. ಆ ಹಳೆಯ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಹೌದು.. ಜಯಶ್ರೀ ಅನ್ನೋ ಟ್ಯಾರೋ ಕಾರ್ಡ್ ಜ್ಯೋತಿಷಿ ಅನಿರುದ್ದ್ ಮದ್ವೆ ಬಗ್ಗೆ ಅಂದೇ ಮಾತನಾಡಿದ್ರು. ಈತ ಮದ್ವೆ ಆಗುವ ಹೆಣ್ಣು ದೊಡ್ಡ ವಿದ್ಯಾವಂತೆ ಆಗಿರ್ತಾಳೆ ಎಂದಿದ್ದರು. ಅದಕ್ಕೆ ಪೂರಕವಾಗಿ ಕಾವ್ಯಾ ಯುಕೆ ಬ್ಯುಸಿನೆಸ್ ಸ್ಕೂಲ್ನಲ್ಲಿ ಎಂಬಿಎ ಪದವಿ ಪಡೆದು ಬಂದಿದ್ದಾರೆ.
ಅಲ್ಲದೆ.. ಆಕೆ ಮಾಧ್ಯಮ, ಬ್ರಾಡ್ಕಾಸ್ಟಿಂಗ್ ಅಥವಾ ಟೆಲಿ ಕಮ್ಯುನಿಕೇಷನ್ ಕ್ಷೇತ್ರಕ್ಕೆ ಸಂಬಂಧಿಸಿದವರಾಗಿರುತ್ತಾರೆ. ಇಬ್ಬರ ಕುಟುಂಬಗಳ ಮನೆಗಳು ಒಂದರಿಂದ 2 ಕಿಲೋಮೀಟರ್ ದೂರದಲ್ಲಿ ಇರಬಹುದು ಅಂತಲೂ ಹೇಳಲಾಗಿತ್ತು. ಅದೆಲ್ಲಾ ಈಗ ವೈರಲ್ ಆಗ್ತಿದೆ. ಅದು ಅಕ್ಷರಶಃ ನಿಜ ಕೂಡ ಆಗಿದೆ. ಯಾಕಂದ್ರೆ ಕಾವ್ಯಾ ಮಾರನ್-ಅನಿರುದ್ದ್ ಮನೆಗಳು ಬಹಳ ಹತ್ತಿರದಲ್ಲೇ ಇವೆ. ಮಿಗಿಲಾಗಿ ಆಕೆ ಚಾನೆಲ್ ಓನರ್ ಮಗಳು ಕೂಡ ಹೌದು. ಸೋ.. ಒಮ್ಮೊಮ್ಮೆ ಜೋತಿಷ್ಯ ನಿಜವಾಗುತ್ತೆ ಅಂತಾರಲ್ವಾ.. ಹಾಗೆಯೇ ಇವರುಗಳ ವಿಚಾರದಲ್ಲಿ ಅದು ನಿಜವಾಗಿದೆ.
- ತಲೈವಾ ರಜನಿಕಾಂತ್ ಸೋದರಳಿಯ ಈ ಅನಿರುದ್ದ್..!!
- ಅನಿರುದ್ದ್ ಟ್ಯಾಲೆಂಟ್ನ ಕೊಂಡಾಡಿದ್ದ ಸೂಪರ್ ಸ್ಟಾರ್
ಅನಿರುದ್ದ್ ರವಿಚಂದರ್ ತಲೈವಾ ರಜನಿಕಾಂತ್ ಅವರ ಸೋರದಳಿಯ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹೌದು.. ರವಿ ರಾಘವೇಂದ್ರ ಮಗ ಈ ಅನಿರುದ್ದ್ ರವಿಚಂದರ್. ರಜನಿಕಾಂತ್ ಮದ್ವೆ ಆಗಿರೋ ಲತಾ ಇದೇ ಅನಿರುದ್ದ್ ರವಿಚಂದರ್ ಅವರ ಸೋದರತ್ತೆ. ಅಂದ್ರೆ ರವಿ ರಾಘವೇಂದ್ರ ಅವರ ಅಕ್ಕ. ಅಲ್ಲಿಗೆ ಅನಿರುದ್ದ್ ಸೂಪರ್ ಸ್ಟಾರ್ ರಜನಿಕಾಂತ್ ಕುಟುಂಬದ ಕುಡಿ ಅನ್ನೋದು ಕಾತರಿ ಆದಂತೆ.
ಇದೆಲ್ಲಕ್ಕಿಂತ ಹೆಚ್ಚಾಗಿ ರಜನಿಕಾಂತ್ರ ಸಾಕಷ್ಟು ಇತ್ತೀಚಿನ ಸಿನಿಮಾಗಳಿಗೆ ಅನಿರುದ್ದ್ ಅವರೇ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅನಿರುದ್ದ್ ಮಾಡಿರೋ ಸಾಧನೆಯನ್ನ ಮೆಚ್ಚಿ, ವೇದಿಕೆಗಳಲ್ಲಿ ತಲೈವಾ ಹಾಡಿ ಹೊಗಳಿದ್ದಾರೆ. ಅದ್ರಲ್ಲೂ ಇವೆಂಟ್ ಒಂದರಲ್ಲಿ ಸೌತ್ ಈಸ್ ಏಷ್ಯಾದ ಮೋಸ್ಟ್ ಎಲಿಜಿಬಲ್, ಟ್ಯಾಲೆಂಟೆಡ್ ಪರ್ಸನ್ ಅಂತ ಅನಿನ ರಜನಿ ಕೊಂಡಾಡಿದ್ರು.
ಅನಿರುದ್ದ್ ತಂದೆ ಆ್ಯಕ್ಟರ್, ತಾಯಿ ಲಕ್ಷ್ಮೀ ರವಿಚಂದರ್ ಕ್ಲಾಸಿಕಲ್ ಡ್ಯಾನ್ಸರ್. ಅನಿರುದ್ದ್ ತಾತ ಕೂಡ ಚಿತ್ರರಂಗದಲ್ಲಿ ಡೈರೆಕ್ಟರ್ ಆಗಿಯೇ ಕಲಾಸೇವೆ ಮಾಡಿದವರು. ಹಾಗಾಗಿ ಸಿನಿಮಾ ರಂಗ ಹಾಗೂ ಮ್ಯೂಸಿಕ್ ಕ್ಷೇತ್ರಗಳಲ್ಲಿ ಬಹುದೊಡ್ಡ ಹಿನ್ನೆಲೆ ಇರೋ ಕುಟುಂಬದಿಂದ ಅನಿರುದ್ದ್ ಮೇಲೆ ಬಂದಿರೋದು ವಿಶೇಷ. ಕಲಾನಿಧಿ ಮಾರನ್ ಅವರ ಲೊಯೊಲಾ ಕಾಲೇಜ್ನಿಂದಲೇ ಗ್ರ್ಯಾಜುಯೇಟ್ ಆಗುವ ಅನಿರುದ್ದ್, ಮುಂದೆ ಲಂಡನ್ನ ಟ್ರನಿಟಿ ಕಾಲೇಜ್ ಆಫ್ ಮ್ಯೂಸಿಕ್ನಲ್ಲಿ ಸಂಗೀತ ಕಲೆಯುತ್ತಾರೆ. ಅದರಲ್ಲೂ ಪಿಯಾನೋದಲ್ಲಿ ಪಾಂಡಿತ್ಯ ಪಡೆಯೋ ಅನಿರುದ್ದ್.. ಎಆರ್ ರೆಹಮಾನ್ ಜಡ್ಜ್ ಆಗಿದ್ದ ಶೋನಲ್ಲಿ ಅವರಿಂದ ಮೆಚ್ಚುಗೆ ಪಡೆದು ವಿನ್ ಕೂಡ ಆಗಿರ್ತಾರೆ.
- ತಮಿಳು, ತೆಲುಗು, ಹಿಂದಿ ಚಿತ್ರರಂಗಗಳಲ್ಲಿ ಅನಿರುದ್ದ್ ರಾಕ್ಸ್
- ಸೂಪರ್ ಸ್ಟಾರ್ಸ್ ಫೇವರಿಟ್ ರಾಕ್ಸ್ಟಾರ್, ಕಂಪೋಸರ್..!
- ದೇಶ, ವಿದೇಶಗಳಲ್ಲಿ ಅನಿರುದ್ದ್ ಲೈವ್ ಮ್ಯೂಸಿಕ್ ಕಾನ್ಸರ್ಟ್ಸ್
- ಸಿನಿಮಾವೊಂದಕ್ಕೆ ಅನಿರುದ್ದ್ ಸಂಭಾವನೆ 8ರಿಂದ 25 ಕೋಟಿ
2012ರಲ್ಲಿ ಧನುಷ್ ನಟನೆಯ 3 ಸಿನಿಮಾದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕನಾಗಿ ಹೊರಹೊಮ್ಮಿದ ಅನಿರುದ್ದ್ ರವಿಚಂದರ್.. ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಬಹುದೊಡ್ಡ ಹೆಸರು ಮಾಡಿದ್ರು. ಸಾಲು ಸಾಲು ಸೂಪರ್ ಹಿಟ್ ಸಾಂಗ್ಸ್ ಹಿಂದೆ ಇವರ ಕೈಚಳಕವಿದೆ. ಅದ್ರಲ್ಲೂ ದಳಪತಿ ವಿಜಯ್, ತಲಾ ಅಜಿತ್, ಧನುಷ್, ಸೂಪರ್ ಸ್ಟಾರ್ ರಜನಿಕಾಂತ್ರ ಇತ್ತೀಚಿನ ಸಿನಿಮಾಗಳಿಗೆಲ್ಲಾ ಇವರೇ ಖಾಯಂ ಕಂಪೋಸರ್.
ತೆಲುಗಿನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ರ ಅಜ್ಞಾತವಾಸಿ ಚಿತ್ರದಿಂದ ನ್ಯೂ ಇನ್ನಿಂಗ್ಸ್ ಆರಂಭಿಸಿದ ಅನಿರುದ್ದ್, ಯೂಟರ್ನ್, ಜೆರ್ಸಿ, ಗ್ಯಾಂಗ್ಲೀಡರ್ ಸಿನಿಮಾಗಳಿಗೂ ಕಂಪೋಸ್ ಮಾಡಿದ್ರು. ದೇವರ, ಕಿಂಗ್ಡಮ್ ಹಾಗೂ ಇತ್ತೀಚೆಗೆ ತೆರೆಕಂಡ ನಾನಿಯ ಪ್ಯಾರಡೈಸ್ ಚಿತ್ರಕ್ಕೂ ಅನಿರುದ್ದ್ ಸಂಗೀತ ಅವುಗಳ ತೀವ್ರತೆ ಹೆಚ್ಚಿಸಿತ್ತು.
ಅಂದಹಾಗೆ ಅನಿರುದ್ದ್ ಸದ್ಯ ಸೌತ್ನ ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಕಮ್ ಗಾಯಕ. ಇವರ ಸಾಂಗ್ಸ್ ಹಾಗೂ ಮ್ಯೂಸಿಕ್ ಅಂದ್ರೆ ಮಲಗಿದ್ದವರೂ ಎದ್ದು ಕುಣಿಯುತ್ತಾರೆ. ಸಿನಿಮಾವೊಂದರ ಸಂಗೀತ ಸಂಯೋಜನೆಗಾಗಿ ಬರೋಬ್ಬರಿ 8ರಿಂದ 25 ಕೋಟಿಯಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುವಂತಹ ಅನಿರುದ್ದ್, ದೇಶ ವಿದೇಶಗಳಲ್ಲಿ ಲೈವ್ ಕಾನ್ಸರ್ಟ್ಸ್ ನಡೆಸ್ತಾರೆ. ಕೋಟ್ಯಂತರ ಮಂದಿಯ ದಿಲ್ ದೋಚುವುದರ ಜೊತೆ ಕೋಟಿ ಕೋಟಿ ದುಡಿಯುತ್ತಿದ್ದಾರೆ.
ಸ್ಟಾರ್ಗಳ ಜೊತೆ ಅನಿರುದ್ದ್ ಕೂಡ ಸಾಂಗ್ಸ್ ಮಧ್ಯೆ ಸ್ಪೆಷಲ್ ಅಪಿಯರೆನ್ಸ್ ನೀಡೋದು ವಾಡಿಕೆ. ಅನಿ ಸ್ಕ್ರೀನ್ ಮೇಲೆ ಕಾಣ್ತಿದ್ದಂತೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆಗಳ ಮೂಲಕ ಅಭಿಮಾನ ತೋರುತ್ತಾರೆ. ಅಂಥದ್ದೊಂದು ಕ್ರೇಜ್ ಹುಟ್ಟಿಹಾಕಿದ್ದಾರೆ ಈ ಯಂಗ್ಸ್ಟರ್ ಅನಿರುದ್ದ್. ಒಟ್ಟಾರೆ ಕಾವ್ಯಾ ಮಾರನ್ ಕೈ ಹಿಡಿಯೋ ಮೂಲರ ಅನಿರುದ್ದ್ ರವಿಚಂದರ್.. ಸನ್ ಗ್ರೂಪ್ ಸಮೂಹ ಸಂಸ್ಥೆಗಳಿಗೆ ವಾರಸ್ದಾರ ಆಗ್ತಿರೋದು ಬಿಗ್ಗೆಸ್ಟ್ ಬ್ರೇಕಿಂಗ್ ನ್ಯೂಸ್ ಆಗಿ ಪರಿಣಮಿಸಿದೆ. ಮದ್ವೆ ಎಷ್ಟು ವೈಭವೋಪೇತವಾಗಿ ನಡೆಯಲಿದೆ.. ಯಾರೆಲ್ಲಾ ಸಾಕ್ಷಿ ಆಗ್ತಾರೆ ಅನ್ನೋದನ್ನ ಇನ್ನಷ್ಟೇ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
