‘ಐಕಾನ್’ ಸ್ಟಾರ್ ಅಲ್ಲುಗೆ ದಿಲ್‌ರಾಜು ಮಾಸ್ಟರ್ ಸ್ಟ್ರೋಕ್..!

ಅಡ್ವಾನ್ಸ್ ಆದ್ರೂ ಡೇಟ್ಸ್ ನೀಡದ ಪುಷ್ಪ.. ಪ್ರೊಡ್ಯೂಸರ್ ಗರಂ

Untitled design (98)

ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಮೇಲೆ ಟಾಲಿವುಡ್‌ನ ಫೇಮಸ್ ಪ್ರೊಡ್ಯೂಸರ್ ದಿಲ್‌ರಾಜು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಹಾಲಿವುಡ್ ಶೈಲಿಯ ಸಿನಿಮಾ ಮಾಡೋಕೆ ಅಟ್ಲೀ ಜೊತೆ ಕೈ ಜೋಡಿಸಿರೋ ಐಕಾನ್ ಸ್ಟಾರ್‌‌ಗೆ ಮಾಸ್ಟರ್‌ ಸ್ಟ್ರೋಕ್ ನೀಡಿದ್ದಾರೆ ನಿರ್ಮಾಪಕ. ಇಷ್ಟಕ್ಕೂ ಏನಾಯ್ತು ಅಂಥದ್ದು ಅಂತೀರಾ..?

ಸಾಮಾನ್ಯವಾಗಿ ಸಿನಿಮಾಗಳು ದೊಡ್ಡ ಮಟ್ಟಕ್ಕೆ ಸಕ್ಸಸ್ ಆಗಿಬಿಟ್ರೆ ಸ್ಟಾರ್‌‌ಗಳನ್ನ ಹಿಡಿಯೋದು ಬಲು ಕಷ್ಟ. ಅದಕ್ಕೆ ಸಾಕಷ್ಟು ನಿದರ್ಶನಗಳಿವೆ. ಅಂತಹ ಸಾಲಿಗೆ ಪುಷ್ಪ-2 ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಅಲ್ಲು ಅರ್ಜುನ್ ಕೂಡ ಸೇರಿಕೊಂಡಿದ್ದಾರೆ. ಹೌದು, ಸಿನಿಮಾದಲ್ಲಿ ಪುಷ್ಪ ನ್ಯಾಷನಲ್ ಅಲ್ಲ, ಇಂಟರ್‌ ನ್ಯಾಷನಲ್ ಅನ್ನೋ ಡೈಲಾಗ್ ಇತ್ತು. ಅದ್ರಂತೆ ಲೋಕಲ್ ಪ್ರೊಡ್ಯೂಸರ್‌‌ಗಳ ಕೈಗೆ ಸಿಗ್ತಿಲ್ಲವಂತೆ ಪುಷ್ಪ ಸ್ಟಾರ್ ಅಲ್ಲು ಅರ್ಜುನ್.

ಹೌದು, ಇಂಥದ್ದೊಂದು ಮಹತ್ವದ ಆರೋಪ ಹೊತ್ತು, ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಸ್ಟೈಲಿಶ್ ಸ್ಟಾರ್ ಅಲ್ಲು. ಪುಷ್ಪ-1 ಚಿತ್ರದ ವೇಳೆ ಖ್ಯಾತ ನಿರ್ಮಾಪಕ ದಿಲ್‌ರಾಜು ಬ್ಯಾನರ್‌‌ಗೆ ಐಕಾನ್ ಸಿನಿಮಾ ಮಾಡಲು ಅಡ್ವಾನ್ಸ್ ಪಡೆದಿದ್ದ ಅಲ್ಲು ಅರ್ಜುನ್ ಕೊನೆಗೂ ಕೈ ಕೊಟ್ಟಿದ್ದಾರೆ. ಹೌದು, ಪುಷ್ಪ-1 ಬಳಿಕ ಸೆಟ್ಟೇರಬೇಕಿದ್ದ ಐಕಾನ್ ಸಿನಿಮಾ ಸೆಟ್ಟೇರಲೇ ಇಲ್ಲ. ಬದಲಿಗೆ ಪುಷ್ಪ-2 ಆಯ್ತು. ಹೋಗಲಿ ಪುಷ್ಪ ಸೀಕ್ವೆಲ್ ಬಳಿಕ ಆದ್ರೂ ಮುಹೂರ್ತ ಕಾಣುತ್ತಾ ಅಂದ್ರೆ ನೋ. ತಮಿಳು ಡೈರೆಕ್ಟರ್ ಅಟ್ಲೀ, ತಮಿಳು ಪ್ರೊಡಕ್ಷನ್ ಹೌಸ್ ಸನ್ ಪಿಕ್ಚರ್ಸ್‌ಗೆ ತಮ್ಮ ಡೇಟ್ಸ್ ಕೊಟ್ಟುಬಿಟ್ಟಿದ್ದಾರೆ ಅಲ್ಲು. AA22XA6 ಸಿನಿಮಾ ಶೂಟಿಂಗ್‌ಗೆ ಹೋಗೋಕೆ ತುದಿಗಾಲಲ್ಲಿ ನಿಂತಿದೆ.

ಸಾವಿರ ಕೋಟಿ ಸಿನಿಮಾ ಮಾಡಿದ ಮಾತ್ರಕ್ಕೆ ಸಿನಿಮಾ ಕರಿಯರ್ ಕಟ್ಟಿಕೊಳ್ಳೋಕೆ ಭದ್ರ ಬುನಾದಿ ಹಾಕಿಕೊಟ್ಟ ನಿರ್ಮಾಪಕರನ್ನ ಮರೆಯೋದು ಎಷ್ಟು ಸರಿ..? ಹಸಿದಾಗ ಅನ್ನ ಕೊಟ್ಟ ಅನ್ನದಾತರ ಮನಸ್ಸು ನೋಯಿಸುವುದು ಎಷ್ಟು ಸರಿ ಅಲ್ಲವೇ..? ಹೌದು.. ಅಲ್ಲು ಅರ್ಜುನ್ ಕರಿಯರ್‌ನ ಆರಂಭದ ಬಿಗ್ಗೆಸ್ಟ್ ಹಿಟ್ ಆರ್ಯ, ನಂತರದಲ್ಲಿ ಪರುಗು ಹಾಗೂ ಡಿಜೆ ಹೀಗೆ ಹ್ಯಾಟ್ರಿಕ್ ಹಿಟ್ಸ್ ನೀಡಿದ ಗರಿಮೆ ದಿಲ್‌ರಾಜುಗೆ ಸಲ್ಲುತ್ತೆ. ಅಂತಹ ದಿಲ್‌ರಾಜುಗೆ ಡೇಟ್ಸ್ ನೀಡದೆ ಆಟ ಆಡಿಸಿದ್ದಾರೆ ಐಕಾನ್ ಸ್ಟಾರ್.

ಅಲ್ಲು ಅರ್ಜುನ್‌ಗೆ ಸುಕುಮಾರ್ ಅವರು ಪುಷ್ಪ ಸಿನಿಮಾದ ಇವೆಂಟ್ ಒಂದರಲ್ಲಿ ಐಕಾನ್ ಸ್ಟಾರ್ ಪಟ್   ಟ ಕೊಟ್ಟಿದ್ದರು. ಆದೇ ಕಾರಣದಿಂದ ಐಕಾನ್ ಸಿನಿಮಾ ಮಾಡೋಕೆ ದಿಲ್‌ರಾಜು ಮುಂದಾಗಿದ್ರು. ಆದ್ರೀಗ ಐಕಾನ್ ಸ್ಟಾರ್‌ಗೆ ಐಕಾನ್ ಟೈಟಲ್ ಸಿಗದೇ ಇರೋದು ವಿಪರ್ಯಾಸ. ಹೌದು, ಅಲ್ಲು ಅರ್ಜುನ್ ಆಟ ಆಡಿಸ್ತಿರೋ ಪರಿ ನೋಡಿದ ದಿಲ್‌ರಾಜು, ತಾನು ಆ ಸಿನಿಮಾನ ಅಲ್ಲು ಅರ್ಜುನ್‌ಗೆ ಮಾಡ್ತಿಲ್ಲ. ಬೇರೆ ಸ್ಟಾರ್‌ಗೆ ಮಾಡ್ತೀನಿ ಅಂತ ಓಪನ್ ಸ್ಟೇಟ್ಮೆಂಟ್ ನೀಡಿದ್ದಾರೆ. ಆ ಮೂಲಕ ಮಾಸ್ಟರ್‌‌ ಸ್ಟ್ರೋಕ್ ನೀಡಿದ್ದಾರೆ ನಿರ್ಮಾಪಕ ದಿಲ್‌ರಾಜು.

ಶಾಕುಂತಲಂ, ದಿ ಫ್ಯಾಮಿಲಿ ಸ್ಟಾರ್ ಹಾಗೂ ಗೇಮ್ ಚೇಂಜರ್ ಚಿತ್ರಗಳಿಂದ ಸಾಕಷ್ಟು ಕೋಟಿ ನಷ್ಟ ಅನುಭವಿಸಿದ್ದ ದಿಲ್‌ರಾಜುಗೆ ಅಲ್ಲು ಅರ್ಜುನ್ ಕೈ ಹಿಡಿಯಬಹುದಿತ್ತು. ಆದ್ರೆ ಕೈ ಕೊಡುವ ಮೂಲಕ ಬ್ಯಾಡ್ ಎಕ್ಸಾಂಪಲ್ ಸೆಟ್ ಮಾಡಿದ್ದಾರೆ. ಅಟ್ಲೀ, ದೀಪಿಕಾ ಪಡುಕೋಣೆ ಅಂತಹ ಸಹನಟಿ ಜೊತೆ ಬಣ್ಣ ಹಚ್ಚುತ್ತಿರೋ ಉನ್ಮಾದದಲ್ಲಿರೋ ಅಲ್ಲು ಅರ್ಜುನ್‌ಗೆ ಅದ್ಯಾವಾಗ ಜ್ಞಾನೋದಯವಾಗುತ್ತೋ ಏನೋ ಕಾದು ನೋಡಬೇಕಿದೆ.

Exit mobile version