ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಒಟ್ಟು ಆಸ್ತಿ ಮೊತ್ತ 2700 ಕೋಟಿ ರೂಪಾಯಿಗೂ ಅಧಿಕ ಅಂತ ಅಂದಾಜಿಸಲಾಗಿದೆ. ಆದ್ರೆ ಅವರ ಮಗನ ತಿಂಗಳ ಸ್ಯಾಲರಿ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಹೌದು.. ಬಿಟೌನ್ ಸೂಪರ್ ಸ್ಟಾರ್ ಮಗನ ಸಂಬಳ ಕೇವಲ 4,500 ರೂಪಾಯಿ ಅಂದ್ರೆ ನೀವು ನಂಬಲೇಬೇಕು. ಈ ಕುರಿತ ಒಂದು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
- 2700Cr ಒಡೆಯ ಅಕ್ಷಯ್.. ಮಗನ ಸಂಬಳ 4,500 ರೂ.
- 15 ವರ್ಷಕ್ಕೇ ಮನೆ ಬಿಟ್ಟಿದ್ದ ಬಿಟೌನ್ ಕಿಲಾಡಿ ಮಗ ಆರವ್..!
- ಚಿತ್ರರಂಗಕ್ಕೆ ಎಂಟ್ರಿ ಕೊಡಲ್ಲವಂತೆ ಅಕ್ಷಯ್ ಕುಮಾರ್ ಮಗ
- ಫ್ಯಾಷನ್ ಡಿಸೈನಿಂಗ್ಗಾಗಿ ಸ್ಟಾರ್ ಮಗನ ಊರೂರು ಅಲೆದಾಟ
ಬಾಲಿವುಡ್ ಕಿಲಾಡಿ ಅಂತಲೇ ಫೇಮಸ್ ಆಗಿರೋ ಬಿಟೌನ್ ಸ್ಟಾರ್ ನಟ ಅಕ್ಷಯ್ ಕುಮಾರ್ ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಹೌದು.. ಅಕ್ಷಯ್ ಸುಮಾರು 2700 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಆಸ್ತಿ ಹೊಂದಿದ್ದಾರೆ. ಪ್ರಧಾನಿ ಮೋದಿವರೆಗೂ ಒಳ್ಳೆಯ ಬಾಂಧವ್ಯ ಹೊಂದಿರೋ ಹೈಲಿ ಇನ್‌ಫ್ಲುಯೆನ್ಸಲ್ ವ್ಯಕ್ತಿ. ಆದ್ರೆ ಅವರ ಮಗ ಆರವ್ ಭಾಟಿಯಾ ಮಾತ್ರ ತಿಂಗಳಿಗೆ ಕೇವಲ 4,500 ರೂಪಾಯಿ ಸಂಬಳಕ್ಕಾಗಿ ಊರೂರು ಅಲೆಯುತ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು.
ಹೌದು.. ಆರವ್ ಭಾಟಿಯಾ ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾರ ಮುದ್ದಿನ ಮಗ. ಈಗ ಆತನ ವಯಸ್ಸು 23 ವರ್ಷಗಳಂತೆ. ಆದ್ರೆ ಆರವ್ 15ನೇ ವಯಸ್ಸಿಗೆ ತಮ್ಮ ಪೋಷಕರ ಮೇಲೆ ಡಿಪೆಂಡ್ ಆಗೋದನ್ನ ಬಿಡ್ತಾರೆ. ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳೋಕೆ ಮುಂದಾಗ್ತಾರೆ. ತನಗೆ ಇಷ್ಟ ಬಂದಂತಹ ಕೋರ್ಸ್ ಓದಿಕೊಂಡು, ಇಷ್ಟ ಬಂದ ಲೈಫ್ ಲೀಡ್ ಮಾಡ್ತಿರೋದು ಇಂಟರೆಸ್ಟಿಂಗ್.
ಅಕ್ಷಯ್ ಪುತ್ರ ಆರವ್ ಭಾಟಿಯಾಗೆ ಫ್ಯಾಷನ್ ಡಿಸೈನಿಂಗ್ ಹಾಗೂ ಟೆಕ್ಸ್‌ಟೈಲ್ ಇಂಡಸ್ಟ್ರಿಯಲ್ಲಿ ಬಹಳ ಆಸಕ್ತಿ. ಅದೇ ಕಾರಣದಿಂದ ಆತ ದೇಶದ ಮೂಲೆ ಮೂಲೆಯಲ್ಲಿರೋ ಹಳ್ಳಿಗಳಿಗೆ ತೆರಳಿ, ಅಲ್ಲಿನ ಜನರ ಉಡುಗೆ, ತೊಡುಗೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡ್ತಿದ್ದಾರೆ. ಆ ರಿಸರ್ಚ್ ವರ್ಕ್ ಮಾಡೋಕೆ ಅಂತ ಕಂಪನಿ ಅಕ್ಷಯ್ ಕುಮಾರ್ ಮಗನಿಗೆ ಕೇವಲ ನಾಲ್ಕೂವರೆ ಸಾವಿರ ಹಣವನ್ನ ಸ್ಟೈ ಫಂಡ್‌ನಂತೆ ನೀಡ್ತಿದೆ. ಅದಲ್ಲದೆ, ಪಾಕೆಟ್ ಮನಿ, ಫೀಸ್, ಬುಕ್ಸ್, ಪಾರ್ಟಿ ಅಂತ ಯಾವುದಕ್ಕೂ ಆರವ್ ತನ್ನ ಪೋಷಕರ ಮೇಲೆ ಹಣಕ್ಕಾಗಿ ಡಿಪೆಂಡ್ ಆಗಿಲ್ಲವಂತೆ.
ಸಾಮಾನ್ಯವಾಗಿ ಪೋಷಕರು ಶ್ರೀಮಂತರಾಗಿದ್ದು, ಕೋಟಿ ಕೋಟಿ ಹಣ ದುಡಿಯುತ್ತಿದ್ರೆ, ಮಕ್ಕಳನ್ನ ಬಹಳ ಮುದ್ದಾಗಿ, ಅವರು ಕೇಳಿದ್ದನ್ನೆಲ್ಲಾ ಕೊಡಿಸೋ ಮೂಲಕ ಯಾವುದಕ್ಕೂ ಕುಂದು ಬಾರದಂತೆ ನೋಡಿಕೊಳ್ತಾರೆ. ಆದ್ರೆ ಸಾವಿರಾರು ಕೋಟಿ ಒಡೆಯನಾದ ಅಕ್ಷಯ್ ಕುಮಾರ್ ಮಾತ್ರ, ಬದುಕು, ಹಣ, ಬಾಂಧವ್ಯಗಳ ಮಹತ್ವ ಅರಿತುಕೊಳ್ಳುವ ನಿಟ್ಟಿನಲ್ಲಿ ತಮ್ಮ ಮಗ ಆರವ್‌ನನ್ನ ಸಣ್ಣ ವಯಸ್ಸಿಗೇ ಸ್ವತಂತ್ರವಾಗಿ ಬದುಕಲು ಬಿಟ್ಟಿರೋದು ಅಚ್ಚರಿ. ಇದೊಂಥರಾ ಇತರರಿಗೂ ಸ್ಫೂರ್ತಿ ಅಂದ್ರೆ ತಪ್ಪಾಗಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
