ನೀವು ಇಲ್ಲದೇ ಜೀವನ ಬದಲಾಗಿದೆ: ತಾಯಿ ನೆನೆದು ಭಾವುಕರಾದ ಐಶ್ವರ್ಯ ಶಿಂಧೋಗಿ

ತಾಯಿ ನೆನೆದು ಭಾವುಕರಾದ ಐಶ್ವರ್ಯ ಶಿಂಧೋಗಿ

Untitled design 2025 02 26t130513.198

ಕನ್ನಡದ ಕಿರುತೆರೆ ನಟಿ ಹಾಗೂ ಬಿಗ್‌ಬಾಸ್‌ ಸ್ಪರ್ಧಿ ಐಶ್ವರ್ಯ ಶೊಂಧೋಗಿ ಅವರ ತಾಯಿಯ ಹುಟ್ಟುಹಬ್ಬ ಇಂದು. ಆಗಲಿರುವ ತಾಯಿಯ ನೆನೆದು ಸೋಶಿಯಲ್‌ ಮೀಡಿಯಾದಲ್ಲಿ ಭಾವೋದ್ವೇಗ ಪೋಸ್ಟ್‌ ಹಂಚಿಕೊಂಡಿದ್ದಾರೆ. ತಾಯಿಯನ್ನು ಕಳೆದುಕೊಂಡ ನಂತರದ ಜೀವನದ ಸವಾಲುಗಳು, ನೆನಪುಗಳು ಮತ್ತು ತಾಯಿಯೊಂದಿಗಿನ ಸ್ನೇಹದ ಬಗ್ಗೆ ಹೃದಯಸ್ಪರ್ಶಿ ಸಂದೇಶ ಬರೆದಿದ್ದಾರೆ.

ಪ್ರತಿ ವರ್ಷ ತಾಯಿಯ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಐಶ್ವರ್ಯ, “ನೀವು ಇಲ್ಲದೆ ನನ್ನ ಜೀವನ ಮೊದಲಿನಂತೆ ಇಲ್ಲ. ಪದಗಳಲ್ಲಿ ನಿಮಗೆ ಎಷ್ಟು ಮಿಸ್ ಮಾಡಿಕೊಳ್ಳುತ್ತೀನಿ ಎಂಬುದು ಹೇಳಲಾಗದು” ಎಂದು ಬರೆದುಕೊಂಡಿದ್ದಾರೆ.

ADVERTISEMENT
ADVERTISEMENT

“ಕೆಲವೊಮ್ಮೆ ನೀವು ಮತ್ತೆ ಹಿಂತಿರುಗಿ ಬಾರದೇ ಇರಬೇಕೆನಿಸುತ್ತದೆ. ನಿಮ್ಮ ನಗುವು, ಮಾತು, ನನ್ನನ್ನು ಪ್ರೀತಿಯಿಂದ ಕರೆಯುವ ಧ್ವನಿ – ಇವೆಲ್ಲವನ್ನೂ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಶೇರ್ ಮಾಡಿಕೊಂಡಿದ್ದಾರೆ.

ತಾಯಿಯ ಪ್ರೀತಿಯ ನೆನಪಿನಲ್ಲಿ, “ನಾನು ಇಂದು ಯಾವ ಉತ್ತ ಸ್ಥಾನದಲ್ಲಿದ್ದರೂ ಅದಕ್ಕೆ ಕಾರಣ ನೀವು. ನನ್ನ ಮೇಲೆ ತೋರಿದ ಪ್ರೀತಿ ಮತ್ತು ಸ್ನೇಹ ಯಾವತ್ತೂ ಮರೆಯುವುದಿಲ್ಲ” ಎಂದು ಎಮೋಷನಲ್ ಮೆಸೇಜ್ ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಭಾವುಕರಾದ ಕ್ಷಣ:
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕುಟುಂಬ ಸಭೆಯ ಸಂದರ್ಭದಲ್ಲಿ, ತಮ್ಮ ಕುಟುಂಬದ ಯಾರೂ ಅವರಿಗಾಗಿ ಪತ್ರ ಬರೆಯಿಲ್ಲ ಎಂಬ ಕಾರಣಕ್ಕೆ ಕಣ್ಣೀರು ಹಾಕಿದ ಐಶ್ವರ್ಯ ಶಿಂಧೋಗಿಗೆ ನಿರೂಪಕ ಸುದೀಪ್ ಸಾಂತ್ವನ ಹೇಳಿದರು.

ಯಾವುದೇ ಸೀರಿಯಲ್, ಸಿನಿಮಾ ಅಥವಾ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡರೂ ಐಶ್ವರ್ಯ ಶಿಂಧೋಗಿ ಯಾವತ್ತೂ ತಮ್ಮ ತಂದೆ-ತಾಯಿಯನ್ನು ನೆನೆಸಿಕೊಳ್ಳುತ್ತಾರೆ.

Exit mobile version