‘ಅಧಿರ’ ಮೂಲಕ ಸಿನಿಮಾರಂಗಕ್ಕೆ ಹೊಸ ಹೀರೋ ಆಗಿ ಕಲ್ಯಾಣ್ ದಾಸರಿ ಎಂಟ್ರಿ

ಪ್ರಶಾಂತ್‌ ವರ್ಮಾ, ಕಲ್ಯಾಣ ದಾಸರಿ, ಎಸ್‌ ಜೆ ಸೂರ್ಯ ಸಾರಥ್ಯದಲ್ಲಿ ಅಧಿರ

Untitled design 2025 09 24t110427.222

ವಿಶೇಷವಾಗಿ ಕಥೆ ಹೇಳುವಿಕೆಯ ಮೂಲಕವೇ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ನಿರ್ದೇಶಕರ ಸಾಲಿನಲ್ಲಿ ಪ್ರಶಾಂತ್‌ ವರ್ಮಾ ಸಹ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಪ್ರೇಕ್ಷಕರ ಮನ ಗೆದ್ದಿರುವ ಪ್ರಶಾಂತ್ ವರ್ಮಾ, ಮತ್ತೊಮ್ಮೆ ಆರ್‌ಕೆಡಿ ಸ್ಟುಡಿಯೋಸ್ ಜೊತೆ ಕೈಜೋಡಿಸಿ, ಭಾರೀ ಬಜೆಟ್‌ನ ಸೂಪರ್‌ಹೀರೋ ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಟಾಲಿವುಡ್‌ನಲ್ಲಿ ಜಾಂಬಿ ಪ್ರಕಾರದ ಹೊಸ ಅಧ್ಯಾಯವನ್ನು ಪರಿಚಯಿಸಿ, ಭಾರತದ ಮೊದಲ ಮೂಲ ಸೂಪರ್‌ಹೀರೋ ಸಿನಿಮಾ ‌ʻಹನುಮಾನ್ʼ ಮೂಲಕ ಕ್ರಾಂತಿಗೆ ಮುನ್ನುಡಿ ಬರೆದಿದ್ದ ಈ ನಿರ್ದೇಶಕ, ಈಗ ಹೊಸ ಪ್ರಾಜೆಕ್ಟ್‌ನತ್ತ ಚಿತ್ತ ಹರಿಸಿದ್ದಾರೆ.

ʻಅಧಿರʼ ಮೂಲಕ ಹೊಸ ಹೀರೋ ಆಗಿ ಕಲ್ಯಾಣ್ ದಾಸರಿ ಅದ್ದೂರಿಯಾಗಿ ಸಿನಿ ಪ್ರವೇಶ ಮಾಡುತ್ತಿದ್ದಾರೆ. ಅವರ ಜೊತೆಗೆ ಹಿರಿಯ ನಟ ಎಸ್. ಜೆ. ಸೂರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಿವಾಜ್ ರಾಮೇಶ್ ದುಗ್ಗಲ್ ಅವರ ಆರ್‌ಕೆಡಿ ಸ್ಟುಡಿಯೋಸ್ ಈ ಪ್ರತಿಷ್ಠಿತ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರದ ನಿರ್ದೇಶನವನ್ನು ಶರಣ್ ಕೋಪಿಸೆಟ್ಟಿ ಕೈಗೆತ್ತಿಕೊಂಡಿದ್ದಾರೆ.

ಭಾರತೀಯ ಇತಿಹಾಸ ಮತ್ತು ಆಧುನಿಕ ಸಿನೆಮಾ ಶೈಲಿಯನ್ನೂ ಒಟ್ಟುಗೂಡಿಸಿಕೊಂಡು ʻಅಧಿರʼ ಸಿನಿಮಾ ಮೂಡಿಬರಲಿದೆ. ಪ್ರಶಾಂತ್‌ ವರ್ಮಾ ಸಿನೆಮಾಟಿಕ್ ಯೂನಿವರ್ಸ್ (PVCU) ಮೂಲಕ ಮತ್ತೊಂದು ವಿಶೇಷ ಕಥೆ ನೋಡುಗರ ಕಣ್ಣ ಮುಂದೆ ಬರಲಿದೆ.

ಪ್ರಸ್ತುತ ʻಅಧಿರʼ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಎಸ್. ಜೆ. ಸೂರ್ಯ ಅವರ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ. ಸೂರ್ಯ ಜತಗೆ ಕಲ್ಯಾಣ್ ದಾಸರಿ ಸಹ ಸೂಪರ್‌ ಹೀರೋ ರೀತಿ ಕಂಡು ಅಚ್ಚರಿ ಮೂಡಿಸಿದ್ದಾರೆ.

ಧರ್ಮವನ್ನು ರಕ್ಷಿಸಲು ಹೋರಾಡುವ ಹೊಸ ಸೂಪರ್‌ಹೀರೋನ ಕಥೆಯೇ ಈ ʻಅಧಿರʼ. ಸಿಡಿಲಿನಂತಿರುವ ಆ್ಯಕ್ಷನ್‌, ಉಸಿರು ಬಿಗಿಸುವ ದೃಶ್ಯ ವೈಭವ, ಮನ ಸೆಳೆಯುವ ಸಂಗೀತ ಹಾಗೂ ಭವ್ಯ ನಿರೂಪಣೆಯೊಂದಿಗೆ ಈ ಚಿತ್ರವು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.

ʻಅಧಿರʼ ಚಿತ್ರದ ತಾಂತ್ರಿಕ ತಂಡ
ಕಥೆ: ಪ್ರಶಾಂತ್ ವರ್ಮಾ
ನಿರ್ಮಾಣ ಸಂಸ್ಥೆ: ಆರ್‌ಕೆಡಿ ಸ್ಟುಡಿಯೋಸ್
ಪ್ರಸ್ತುತಪಡಿಸಿದವರು: ಆರ್.ಕೆ. ದುಗ್ಗಲ್
ನಿರ್ಮಾಪಕ: ರಿವಾಜ್ ರಾಮೇಶ್ ದುಗ್ಗಲ್
ನಿರ್ದೇಶಕ: ಶರಣ್ ಕೋಪಿಸೆಟ್ಟಿ
ಮುಖ್ಯ ಪಾತ್ರಧಾರಿಗಳು: ಕಲ್ಯಾಣ್ ದಾಸರಿ, ಎಸ್. ಜೆ. ಸೂರ್ಯ
ಸಂಗೀತ: ಶ್ರೀ ಚರಣ್ ಪಕಲ
ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್: ವೆಂಕಟ್ ಕುಮಾರ್ ಜೆಟ್ಟಿ
ಛಾಯಾಗ್ರಹಣ: ಶಿವೇಂದ್ರ ದಸರಾಧಿ
ಕಲಾ ನಿರ್ದೇಶನ: ಶ್ರೀ ನಾಗೇಂದ್ರ ಟಾಂಗಾಲ
ವಸ್ತ್ರ ವಿನ್ಯಾಸ: ಲಂಕಾ ಸಂತೋಷಿ

Exit mobile version