ವೈವಾಹಿಕ ಜೀವನಕ್ಕೆ ಕಾಲಿಟ್ಟ ಹುಡುಗರು ಸಿನಿಮಾದ ನಟಿ ಅಭಿನಯ

Untitled design 2025 04 17t144752.835

ಪುನೀತ್ ರಾಜ್‌ಕುಮಾರ್ ನಟನೆಯ ‘ಹುಡುಗರು’ ಚಿತ್ರದಲ್ಲಿ ಅಪ್ಪು ಅವರ ತಂಗಿಯ ಪಾತ್ರದಲ್ಲಿ ಹೃದಯ ಸ್ಪರ್ಶಕ ಅಭಿನಯ ನೀಡಿದ್ದ ನಟಿ ಅಭಿನಯ, ಇದೀಗ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷ ಚೇತನರಾಗಿದ್ದರೂ ಸಹ, ತಮ್ಮ ಪ್ರತಿಭೆಯ ಮೂಲಕ ಅನೇಕ ಚಿತ್ರಪ್ರೇಮಿಗಳ ಮನಗೆದ್ದಿರುವ ನಟಿ ಅಭಿನಯ ಅವರು ಈ ಹಿಂದೆ ತಮ್ಮ ಗೆಳೆಯ ವೇಗೇಶನಾ ಕಾರ್ತಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಅಭಿನಯ ಅವರಿಗೆ ಮಾತು ಬರೋದಿಲ್ಲ, ಹಾಗೆ ಕಿವಿಗೂ ಕೇಳೋದಿಲ್ಲ. ಆದರೆ ಅವರ ನಟನೆಯ ಪ್ರತಿಭೆ ಹಗುರವಾಗಿ ಪರಿಗಣಿಸಲಾಗದು. ವಿಶೇಷ ಚೇತನರಾಗಿದ್ದರೂ ಅವರು ತಮ್ಮ ಅಭ್ಯಾಸ ಮತ್ತು ಪ್ರಾಮಾಣಿಕತೆಯಿಂದ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲೂ ಅನೇಕ ಪ್ರಭಾವಶಾಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.

‘ಹುಡುಗರು’ ಮೂಲಕ ಗಮನ ಸೆಳೆದ ಅಭಿನಯ

ಅಭಿನಯ ತಮ್ಮ ಚಲನಚಿತ್ರ ಪ್ರವೇಶವನ್ನು ಕನ್ನಡದ ‘ಹುಡುಗರು’ ಚಿತ್ರದ ಮೂಲಕ ಪ್ರಾರಂಭಿಸಿದರು. ಈ ಚಿತ್ರದಲ್ಲಿ ಅವರು ಪುನೀತ್ ರಾಜ್‌ಕುಮಾರ್ ಅವರ ತಂಗಿಯ ಪಾತ್ರದಲ್ಲಿ ಮೆಚ್ಚುಗೆ ಗಳಿಸಿದರು. ನಂತರ ಅವರು ‘ಕಿಚ್ಚು’, ‘ಆಟೋ ರಾಮಣ್ಣ’ ಮುಂತಾದ ಚಿತ್ರಗಳಲ್ಲಿಯೂ ನಟಿಸಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದ್ದರು.

ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ನಟಿಸಿದ ಅಭಿನಯ

ಚೆನ್ನೈನಲ್ಲಿ ಹುಟ್ಟಿ ಬೆಳೆದ ಅಭಿನಯ ಅವರು ತಮ್ಮ ನಟನೆಯ ಪ್ರತಿಭೆಯಿಂದ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲೂ ಚಿರಪರಿಚಿತರಾಗಿದ್ದಾರೆ. ಅವರು ತಮಿಳಿನಲ್ಲಿ ‘ನಾಡೋಡಿಗಳ್’ ಚಿತ್ರದಲ್ಲಿ ಹೀರೋನ ತಂಗಿಯ ಪಾತ್ರದಲ್ಲಿ ಅಭಿನಯಿಸಿ ಅಭಿಮಾನಿಗಳ ಮನಗೆದ್ದರು. ತದನಂತರ ಅವರು ತೆಲುಗಿನಲ್ಲಿ ‘ಡಮರುಕಂ’, ‘ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು’, ‘ಧಮ್ಮು’, ‘ಸೀತಾ ರಾಮಂ’, ‘ಧ್ರುವ’, ‘ಥನಿ ಒರುವನ್’, ‘ವೀರಂ’, ‘ಪೂಜೈ’ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿದರು.

ಇತ್ತೀಚೆಗೆ ಅಭಿನಯ ಅವರು ತಮ್ಮ ಬಾಲ್ಯದ ಗೆಳೆಯ ವೇಗೇಶನಾ ಕಾರ್ತಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಾರ್ತಿಕ್ ಬೆಂಗಳೂರಿನಲ್ಲಿ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಸುಮಾರು 15 ವರ್ಷಗಳಿಂದ ಸ್ನೇಹಿತರಾಗಿದ್ದು, ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಭಿನಯ ಅವರು ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು  ಅಭಿಮಾನಿಗಳೊಂದಿಗೆ ಸಂತೋಷ ಹಂಚಿಕೊಂಡಿದ್ದರು. “ನನ್ನ ಬಾಳ ಸಂಗಾತಿ ನನಗೆ 15 ವರ್ಷಗಳಿಂದ ಪರಿಚಿತ. ಅವರೇ ವೇಗೇಶನಾ ಕಾರ್ತಿಕ್” ಎಂದು ಅಭಿನಯ ಎಲ್ಲರಿಗೂ ಪರಿಚಯ ಮಾಡಿಸಿದ್ರು.

Exit mobile version