ಬರೋಬ್ಬರಿ 13 ವರ್ಷಗಳ ಹಿಂದೆ ಬರೆದಿದ್ದ ಕಥೆಗೆ ಇದೀಗ ಸಿನಿಮಾ ರೂಪ ಕೊಟ್ಟಿದ್ದಾರೆ ಅರ್ಜುನ್ ಸರ್ಜಾ. ಬಹುಭಾಷಾ ಸಿನಿಮಾ ಮಾಡಿರೋ ಆ್ಯಕ್ಷನ್ ಕಿಂಗ್, ಇದು ಸೀತಾ ಪಯಣ ಹೌದು. ಆದ್ರೆ ಭಾವನೆಗಳ ಜೊತೆಗಿನ ಸುಂದರ ಪಯಣ ಎಂದಿದ್ದಾರೆ.
ನಟ, ನಿರ್ದೇಶಕ ಹಾಗೂ ನಿರ್ಮಾಪಕ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದ, ಉಪೇಂದ್ರ ಕುಟುಂಬದ ಕುಡಿ ನಿರಂಜನ್ ಹಾಗೂ ಐಶ್ವರ್ಯ ಅರ್ಜುನ್ ಲೀಡ್‌ನಲ್ಲಿ ನಟಿಸಿರೋ ಚಿತ್ರ ಸೀತಾ ಪಯಣ. ಇದು ಇದೇ ಫೆಬ್ರವರಿ 14ಕ್ಕೆ ವರ್ಲ್ಡ್‌ವೈಡ್ ರಿಲೀಸ್ ಆಗ್ತಿದ್ದು, ಟೀಸರ್ ಹಾಗೂ ಸಾಂಗ್ಸ್‌ನಿಂದ ಸಾಕಷ್ಟು ಸದ್ದು ಮಾಡ್ತಿದೆ. ಬಹುಭಾಷೆಯಲ್ಲಿ ತೆರೆಗೆ ಬರ್ತಿರೋ ಈ ಚಿತ್ರದ ಬಗ್ಗೆ ಅರ್ಜುನ್ ಸರ್ಜಾ ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿ ನಡೆಸಿದ್ದು ವಿಶೇಷ.
ಸೀತಾ ಪಯಣ ಭಾವನೆಗಳ ಜೊತೆಗಿನ ಸುಂದರ ಪಯಣ
ನಿರಂಜನ್-ಐಶ್ವರ್ಯಾಗೆ ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್
ಇಲ್ಲಿಯವರೆಗೆ ಸುಮಾರು 15 ಚಿತ್ರಗಳನ್ನ ನಿರ್ದೇಶಿಸಿರೋ ಅರ್ಜುನ್ ಸರ್ಜಾ, ಕನ್ನಡದಲ್ಲಿ ಪ್ರೇಮ ಬರಹ ಬಳಿಕ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆದ್ರೆ ಇದರಲ್ಲಿ ಆ್ಯಕ್ಷನ್‌ನಿಂದ ಭಾವನೆಗಳ ತೇರಿದೆ. ಸೀತಾ ಪಯಣ ಭಾವನೆಗಳ ಜೊತೆಗಿನ ಒಂದು ಸುಂದರ ಪಯಣ ಅಂತ13 ವರ್ಷಗಳ ಹಿಂದೆಯೇ ಬರೆದಿಟ್ಟುಕೊಂಡಿದ್ದ ಫೀಲ್ ಗುಡ್ ಕಥೆಗೆ ಸಿನಿಮಾ ರೂಪ ಕೊಟ್ಟ ಕುರಿತು ಅರ್ಜುನ್ ಸರ್ಜಾ ಹಂಚಿಕೊಂಡರು.
ನಿರಂಜನ್-ಐಶುಗೆ ಪ್ರಕಾಶ್ ರೈ, ಸತ್ಯರಾಜ್, ಕೋವೈ ಸರಳ ಅಂತಹ ಅನುಭವಿ ಕಲಾವಿದರ ಸಾಥ್ ಸಿಕ್ಕಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನೂಪ್ ರುಬೆನ್ಸ್ ಸಂಗೀತ ಸಂಯೋಜನೆ, ಬಾಲಮುರುಗನ್ ಛಾಯಾಗ್ರಹಣ ಹಾಗೂ ಆಯೂಬ್ ಸಂಕಲನ ಚಿತ್ರಕ್ಕಿದೆ. ಇದು ಬರೀ ವ್ಯಕ್ತಿಯ ಪಯಣವಲ್ಲ. ಮನಸ್ಸಿನ ಪಯಣ, ನಾವು ತಿಳಿದುಕೊಳ್ಳಬೇಕಿರುವ ಮೌಲ್ಯಗಳ ಪಯಣವೂ ಹೌದು.
ಅಕ್ಕ ಐಶು ಚಿತ್ರಕ್ಕೆ ತಂಗಿ ಅಂಜನಾ ಕಾಸ್ಟ್ಯೂಮ್ ಡಿಸೈನರ್..!
13 ವರ್ಷದ ಹಿಂದಿನ ಕಥೆಗೆ ಆ್ಯಕ್ಷನ್ ಕಿಂಗ್ ಸಿನಿಮಾ ರೂಪ
ಇಂಟರೆಸ್ಟಿಂಗ್ ಅಂದ್ರೆ ಈ ಸಿನಿಮಾದ ಮೂಲಕ ಅರ್ಜುನ್ ಸರ್ಜಾ ಅವರ ಕಿರಿಯ ಮಗಳು ಅಂಜನಾ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ನಟಿಯಾಗಿ ಅಲ್ಲ. ಕಾಸ್ಟ್ಯೂಮ್ ಡಿಸೈನರ್ ಆಗಿ ಅನ್ನೋದು ವಿಶೇಷ. ಹೌದು.. ಅಂಜನಾನೇ ಈ ಸೀತಾ ಪಯಣದ ವಸ್ತ್ರ ವಿನ್ಯಾಸಕಿ. ಈ ಮೂಲಕ ಇಡೀ ಸರ್ಜಾ ಕುಟುಂಬ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರೋದು ವಿಶೇಷ. ಅಂಜನಾ ಅರ್ಜುನ್ ಹಾಗೂ ಸೂರಜ್ ಸರ್ಜಾ ಕೂಡ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
