ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ 61ನೇ ವಯಸ್ಸಿನಲ್ಲಿ 3ನೇ ಮದ್ವೆ ಆಗ್ತಿರೋ ಸುದ್ದಿ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಶೂಟಿಂಗ್ ಸೆಟ್‌ನಲ್ಲಿ ಬಟ್ಟೆ ಬದಲಿಸಿದ ಹಾಗೆ ಪತ್ನಿಯರನ್ನ ಬದಲಿಸ್ತಿರೋ ಆಮೀರ್ ಖಾನ್ ವಿರುದ್ಧ ಹಲವು ಟೀಕೆ, ಟಿಪ್ಪಣಿಗಳು ಕೂಡ ಕೇಳಿಬರ್ತಿವೆ. ಅವುಗಳ ನಡುವೆಯೂ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡೋಕೆ ಮುಹೂರ್ತ ಫಿಕ್ಸ್ ಆಗಿದೆ. ಅದೂ ನಮ್ಮ ಬೆಂಗಳೂರು ಹುಡುಗಿ ಜೊತೆ ಅನ್ನೋದು ಇಂಟರೆಸ್ಟಿಂಗ್.
- ಬೆಂಗಳೂರು ಹುಡ್ಗಿ ಜೊತೆ ಆಮೀರ್ ಖಾನ್ 3ನೇ ಮದುವೆ
- ಜೂ-5ಕ್ಕೆ ಗೌರಿ ಜೊತೆ ಕಲ್ಯಾಣ.. ಕನ್ಫರ್ಮ್ ಮಾಡಿದ ಖಾನ್
- 47ರ ವಿಚ್ಚೇದಿತ ಮಹಿಳೆ ಕೈ ಹಿಡಿಯುತ್ತಿರೋ 61ರ ಆಮೀರ್
- ಎರಡನೇ ಬಾರಿ ಬೆಂಗಳೂರಿನ ಅಳಿಮಯ್ಯ ಆಗ್ತಿದ್ದಾರೆ ಸ್ಟಾರ್
ಆಮೀರ್ ಖಾನ್.. ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್. ಸಿನಿಮಾಗಳ ಸಂಖ್ಯೆಗಿಂತ ಅವುಗಳ ಕ್ವಾಲಿಟಿಗೆ ಜಾಸ್ತಿ ಒತ್ತು ಕೊಡೋ ಈತನ ಒಂದೊಂದು ಸಿನಿಮಾ ಕೂಡ ಒಂದೊಂದು ದಂತಕಥೆ. ನಟನೆ, ನಿರ್ದೇಶನ, ನಿರ್ಮಾಣ, ಬರವಣಿಗೆ ಹೀಗೆ ಚಿತ್ರರಂಗದ ಎಲ್ಲಾ ವಿಭಾಗಗಳಲ್ಲಿ ಪಳಗಿರೋ ಇವರು, ಅದೆಷ್ಟೋ ಮಂದಿಗೆ ರೋಲ್ ಮಾಡೆಲ್. ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರೋ ಆಮೀರ್ ಖಾನ್, ನಮ್ಮ ಬೆಂಗಳೂರು ಅಳಿಯ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.
ಯೆಸ್.. ಆಮೀರ್ 2002ರಲ್ಲಿ ತಮ್ಮ ಮೊದಲ ಪತ್ನಿ ರೀನಾ ದತ್ತಾಗೆ ವಿಚ್ಚೇದನ ನೀಡಿದ ಬಳಿಕ 2005ರಲ್ಲಿ ಕಿರಣ್ ರಾವ್ ಎಂಬುವವರ ಕೈ ಹಿಡಿದರು. ಅವರ ಈ ಎರಡನೇ ಮದುವೆಗೆ ಇಡೀ ಬಾಲಿವುಡ್ ದಂಗಾಗಿತ್ತು. ಆದ್ರೆ 2021ರಲ್ಲಿ ಎರಡನೇ ಪತ್ನಿ, ನಮ್ಮ ಮಲ್ಲೇಶ್ವರಂನ ಕಿರಣ್ ರಾವ್‌ಗೂ ಡಿವೋರ್ಸ್ ನೀಡಿದ್ರು ಆಮೀರ್ ಖಾನ್. ಅರೇ.. ಸಿನಿಮಾಗಳಲ್ಲಿ ಹೀರೋಯಿನ್ಸ್ ನ ಬದಲಿಸಿದಂತೆ ಪತ್ನಿಯರನ್ನ ಬದಲಿಸ್ತಾರಲ್ರಪ್ಪಾ ಈ ಆಮೀರ್ ಅಂತ ಹುಬ್ಬೇರಿಸೋರಿಗೆ ಮತ್ತೊಮ್ಮೆ ಶಾಕಿಂಗ್ ನ್ಯೂಸ್ ಕೊಟ್ಟಿದ್ರು ಆಮೀರ್. ತಮ್ಮ 60ನೇ ಬರ್ತ್ ಡೇ ವಿಶೇಷ ಹೊಸ ರಿಲೇಷನ್‌ಶಿಪ್ ಕುರಿತು ಅಫಿಶಿಯಲಿ ಅನೌನ್ಸ್ ಮಾಡಿದ್ರು ಖಾನ್. ಹೌದು.. ದುರಂತ ಅಂದ್ರೆ ಆಮೀರ್ ಮೂರನೇ ಪಾರ್ಟ್ನರ್ ಗೌರಿ ಸ್ಟ್ರಾಟ್ ಕೂಡ ನಮ್ಮ ಬೆಂಗಳೂರಿನವರೇ.
ಗೌರಿ ಸ್ಟ್ರಾಟ್ ಬಗ್ಗೆ ಆಮೇಲೆ ಹೇಳ್ತೀವಿ.. ಅದಕ್ಕೂ ಮುನ್ನ ಆಮೀರ್ ಎರಡನೇ ಪತ್ನಿ ಕಿರಣ್ ರಾವ್ ಬಗ್ಗೆ ಹೇಳಿ ಬಿಡ್ತೀವಿ ಕೇಳಿ. ಈ ಕಿರಣ್ ರಾವ್ ಅಪ್ಪಟ ಕನ್ನಡತಿ. ಇಲ್ಲೇ ನಮ್ಮ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹುಟ್ಟಿ ಬೆಳೆದ ಅಚ್ಚ ಕನ್ನಡತಿ. ಇಂದಿಗೂ ಅವರ ತಂದೆ-ತಾಯಂದಿರು ಇದೇ ಮಲ್ಲೇಶ್ವರಂನಲ್ಲಿ ವಾಸವಾಗಿದ್ದಾರೆ ಅಂದ್ರೆ ನೀವು ನಂಬಲೇಬೇಕು. ಇತ್ತೀಚೆಗೆ ಪೋಷಕರನ್ನ ನೋಡಲು ಬಂದಿದ್ದ ಕಿರಣ್ ರಾವ್, ಮಲ್ಲೇಶ್ವರಂನ ಫೇಮಸ್ ಫುಡ್ ಸ್ಪಾಟ್‌ಗಳಲ್ಲಿ ಮಸಾಲ ದೋಸೆ ಸವಿದಿದ್ದರು. ಇನ್ನು ನಿರ್ದೇಶಕಿ, ನಿರ್ಮಾಪಕಿಯಾಗಿ ಈಕೆಯ ಚಿತ್ರಗಳು ಆಸ್ಕರ್ ಅಂಗಳಕ್ಕೆಲ್ಲಾ ಕಾಲಿಡುತ್ತವೆ ಅಂದ್ರೆ, ಅದಕ್ಕೆಲ್ಲಾ ಕಾರಣ ಒನ್ ಅಂಡ್ ಓನ್ಲಿ ಆಮೀರ್.
ಹೌದು.. ಕಿರಣ್ ರಾವ್ ಅಕ್ಷರಶಃ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಗರಡಿಯಲ್ಲಿ ಪಳಗಿದ ಪ್ರತಿಭೆ. ಲಗಾನ್ ಸಿನಿಮಾದ ಸೆಟ್‌ನಲ್ಲಿ ಆಮೀರ್‌ಗೆ ಪರಿಚಯಗೊಂಡ ಕಿರಣ್ ರಾವ್, ಆಮೀರ್ ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿದ್ರು. ನಂತ್ರ ಅವರ ಮಧ್ಯೆ ಸ್ನೇಹ, ಪ್ರೇಮಾಂಕುರಿಸಿ ಅದಕ್ಕೆ ಒಬ್ಬ ಮಗ ಕೂಡ ಸಾಕ್ಷಿ ಆದನು. ಕಿರಣ್ ರಾವ್ ಜೊತೆ ಸಹ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟ ಆಮೀರ್, ಪರಸ್ಪರ ವಿಚ್ಚೇದನ ಪಡೆದರು. ಈಗಲೂ ಕನ್ನಡತಿ ಕಿರಣ್ ರಾವ್‌ಗೆ ಆಮೀರ್ ಮೇಲೆ ಕೋಪ ಇಲ್ಲ.
ಈಗ ಗೌರಿ ವಿಷಯಕ್ಕೆ ಬರೋಣ. ಒನ್ಸ್ ಅಗೈನ್ ಆಮೀರ್ ಹೊಚ್ಚ ಹೊಸ ಗರ್ಲ್ ಫ್ರೆಂಡ್‌ನ ಹುಡುಕಿಕೊಂಡಿದ್ರು. ಈ ಗೌರಿ ಕೂಡ ನಮ್ಮ ಬೆಂಗಳೂರಿನವರೇ. ಲಂಡನ್‌ನಲ್ಲಿ ವ್ಯಾಸಂಗ ಮುಗಿಸಿರೋ ಗೌರಿ, ಆಮೀರ್ ಜೊತೆ 25 ವರ್ಷಗಳಿಂದ ಟಚ್‌ನಲ್ಲಿ ಇದ್ರಂತೆ. ಆದ್ರೆ ಕೊಂಚ ಗ್ಯಾಪ್ ಬಳಿಕ ಮತ್ತೆ ಇವರ ಮಧ್ಯೆ ಒಂದು ಸುಂದರ ಸಂಬಂಧ ಏರ್ಪಟ್ಟಿದೆ. ಕಳೆದ 30 ತಿಂಗಳಿಂದ ಆಮೀರ್ ಖಾನ್ ಈ ಗೌರಿ ಜೊತೆ ಲೈಫ್ ಲೀಡ್ ಮಾಡ್ತಿದ್ದಾರಂತೆ.
ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಸಲೂನ್‌ಗಳನ್ನ ಹೊಂದಿರೋ ಗೌರಿ, ಉದ್ಯಮಿಯೂ ಹೌದು. ಸದ್ಯ ಆಮೀರ್ ಖಾನ್ ಪ್ರೊಡಕ್ಷನ್‌ನಲ್ಲಿ ಗೌರಿ ಕೆಲಸ ಕೂಡ ಮಾಡ್ತಿದ್ದಾರಂತೆ. ಅಂದಹಾಗೆ ಗೌರಿ ಏನೂ ಸಣ್ಣ ಹುಡ್ಗಿ ಅಲ್ಲ. ಆಕೆಗೂ ಮದ್ವೆ ಆಗಿ ಏಳುಳು ವರ್ಷದ ಮಗನಿದ್ದಾನಂತೆ. ಗೌರಿಯನ್ನ ತನ್ನ ಫ್ಯಾಮಿಲಿಗೆ ಪರಿಚಯಿಸಿರೋ ಆಮೀರ್, ಶಾರೂಖ್ ಖಾನ್, ಸಲ್ಮಾನ್ ಖಾನ್‌ಗೂ ಪರಿಚಯಿಸಿದ್ದಾರಂತೆ. ಲಗಾನ್ ಚಿತ್ರದಲ್ಲಿ ಆಮೀರ್ ಪಾತ್ರದ ಹೆಸರು ಭುವನ್. ಅದರ ನಾಯಕಿಯ ಹೆಸರು ಗೌರಿ. ಮಾಧ್ಯಮದವರ ಬಳಿ ಸ್ವತಃ ಆಮೀರ್ ಖಾನ್ ಅವ್ರೇ ‘ಭುವನ್ ಕೊನೆಗೂ ಗೌರಿಯನ್ನು ಪಡೆದನು’ ಅಂತ ಹೇಳಿಕೊಂಡಿದ್ದಾರೆ.
ಕಳೆದ 30 ತಿಂಗಳಿಂದ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಆಮೀರ್ ಹಾಗೂ ಗೌರಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಗಾಢ ಪ್ರೀಯಿಯಲ್ಲಿದ್ದಾರೆ. ಇದೀಗ ಇದೇ ಜೂನ್ 5ರಂದು ಅಂದ್ರೆ ಇದೇ ಶುಕ್ರವಾರ ಆಮೀರ್ ತಮ್ಮ ಮುಂಬೈನ ನಿವಾಸದಲ್ಲಿ ಸುಂದರ ಹಾಗೂ ಸರಳ ವಿವಾಹದ ಮೂಲಕ ಅತ್ಯಾಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಗೌರಿ ಕೈ ಹಿಡಿದು, ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆಯಲಿದ್ದಾರಂತೆ. ಸದ್ಯ ನಾಹು ಅಮೆರಿಕದಲ್ಲಿದ್ದೇನೆ. ನನ್ನ ಮದ್ವೆ ಬಗ್ಗೆ ನೀವು ಕೇಳಿದ ಆ ಸುದ್ದಿ ನಿಜಾನೇ. ನಾನು ಗೌರಿ ಜೂನ್ 5ರಂದು ಹೊಸ ಬಾಳಿಗೆ ಕಾಲಿಡ್ತಿದ್ದೀವಿ ಅಂತ ಮೌನ ಕೂಡ ಮುರಿದಿದ್ದಾರೆ ಆಮೀರ್.
ಪದ್ಮ ಶ್ರೀ, ಪದ್ಮ ಭೂಷಣ ಪುರಸ್ಕೃತ ಆಮೀರ್ ಖಾನ್.. ಸಿನಿಮಾಗಳಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಆದಂತೆ ತಮ್ಮ ವೈಯಕ್ತಿಕ ಲೈಫ್‌ನಲ್ಲೂ ಮಿಸ್ಟರ್ ಪರ್ಫೆಕ್ಟ್ ಆಗಿದ್ದಿದ್ರೆ ಚೆನ್ನಾಗಿರ್ತಿತ್ತು. ಸಾಲು ಸಾಲು ಮದುವೆಗಳು, ಸಂಬಂಧಗಳಿಂದ ಸಮಾಜಕ್ಕೆ ಏನು ಸಾರೋಕೆ ಹೊರಟವ್ರೆ ಅನ್ನೋದನ್ನ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಅದರಲ್ಲೂ ಬೆಂಗಳೂರು ಹುಡ್ಗಿಯರ ಹಿಂದೆ ಬೀಳ್ತಿರೋದ್ಯಾಕೆ ಅನ್ನೋದು ಕೂಡ ಬಿಲಿಯನ್ ಡಾಲರ್ ಪ್ರಶ್ನೆ. ಒಮ್ಮೆ ಬೆಂಗಳೂರು ಅಳಿಮಯ್ಯನಾಗಿದ್ದ ಆಮೀರ್.. ಇದೀಗ ಮತ್ತೆ ಬೆಂಗಳೂರಿನ ಅಳಿಯ ಆಗ್ತಿರೋದು ವಿಚಿತ್ರ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
