ಆಲಿಮ್ ಹಕೀಮ್ ಬರೀ ಹೇರ್‌ಕಟ್ ಮಾಡಿ, ಲಕ್ಷ ಲಕ್ಷ ದುಡ್ಡು ಪೀಕೋದು ಅಷ್ಟೇ ಅಲ್ಲ, ಡೈರೆಕ್ಟರ್‌ಗಳಿಗೆ ಅರ್ಧ ಟೆನ್ಷನ್ ಕಮ್ಮಿ ಮಾಡ್ತಿದ್ರು. ಸ್ಟಾರ್‌ಗಳ ನ್ಯೂ ಮೂವಿಗಳ ಲುಕ್ಸ್ ಡಿಸೈಡ್ ಮಾಡೋದ್ರಲ್ಲಿ ಇವರ ಪಾತ್ರ ಕೂಡ ಮಹತ್ವದ್ದು. ಬಾಹುಬಲಿ, ಕೆಜಿಎಫ್, ಅನಿಮಲ್‌ನಿಂದ ಹಿಡಿದು ಯಾವೆಲ್ಲಾ ಸೂಪರ್ ಹಿಟ್ ಮೂವಿಗಳಿಗೆ ಇವ್ರ ಕೈಚಳಕವಿದೆ ಅನ್ನೋದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..
- ಶಾರೂಖ್ ಖಾನ್ ‘ಕಿಂಗ್’ ಚಿತ್ರದ ಸ್ಟೈಲಿಶ್ ಲುಕ್ ಇವ್ರದ್ದೇ
- ಅನಿಮಲ್-ಧುರಂಧರ್ ಸ್ಟಾರ್ಸ್ ಹಿಂದಿನ ಮಾಸ್ಟರ್‌ಮೈಂಡ್
ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರೋ ಶಾರೂಖ್ ಖಾನ್, ಸದ್ಯ ತಮ್ಮದೇ ಹೋಮ್ ಬ್ಯಾನರ್‌ನಡಿ ಕಿಂಗ್ ಸಿನಿಮಾ ಮಾಡ್ತಿದ್ದಾರೆ. ಅದು ಇದೇ ಡಿಸೆಂಬರ್ 24ಕ್ಕೆ ಕ್ರಿಸ್‌ಮಸ್ ವಿಶೇಷ ತೆರೆಗಪ್ಪಳಿಸಲಿದೆ. ಆದ್ರೆ ಸದ್ಯ ರಿಲೀಸ್ ಆಗಿರೋ ಟೀಸರ್‌ಗಳಲ್ಲಿ ಶಾರೂಖ್ ಲುಕ್ಸ್ ಮಾತ್ರ ಸಖತ್ ಕಿಕ್ ಕೊಟ್ಟಿವೆ. ಅದ್ರಲ್ಲೂ ಕಿಂಗ್ ಖಾನ್ ಹೇರ್ ಸ್ಟೈಲ್ ಮಸ್ತ್ ಮ್ಯಾಜಿಕ್ ಮಾಡ್ತಿದೆ. ಆ ಲುಕ್ ಹೊರಗೆ ರಿವೀಲ್ ಆಗಬಾರದು ಅನ್ನೋ ಕಾರಣಕ್ಕೆ ಶಾರೂಖ್ ಜೈಲರ್-2 ಸಿನಿಮಾದಿಂದ ಹೊರಬಂದಿದ್ರು. ಆದ್ರೆ ಈ ಕಿಂಗ್ ಲುಕ್ ಹಿಂದಿನ ಮಾಸ್ಟರ್ ಆಲಿಮ್ ಹಕೀಮ್ ಅನ್ನೋದು ವಿಶೇಷ.
ರಣ್‌ಬೀರ್ ಕಪೂರ್ ನಟನೆಯ ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್ ಕಪೂರ್‌ಗೆ ಒಂದಲ್ಲ ಎರಡಲ್ಲ ಬರೋಬ್ಬರಿ 3 ಲುಕ್ಸ್ ಇವೆ. ಮೊದಲಿಗೆ ರೋಜಾ ಸಾಂಗ್ ಮ್ಯೂಸಿಕ್‌ನಲ್ಲಿನ ಎಂಟ್ರಿ ಸೀನ್‌ಗೆ ಸ್ಟೈಲಿಶ್ ಲುಕ್. ನಂತ್ರ ಇಡೀ ಸಿನಿಮಾಗೆ ಒಂದು ಲುಕ್. ಕೊನೆಯಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ಶಾರ್ಟ್ ಹೇರ್‌ನಲ್ಲಿ ಒಂದು ಲುಕ್. ಆದ್ರೆ ಅವೆಲ್ಲಾ ಲುಕ್ಸ್‌ಗೆ ಕಾರಣಕರ್ತ ಇದೇ ಆಲಿಮ್ ಹಕೀಮ್. ಇವುಗಳ ಜೊತೆಗೆ ವಿಲನ್ ಬಾಬಿ ಡಿಯೋಲ್ ಹೇರ್ ಸ್ಟೈಲಿಸ್ಟ್ ಕೂಡ ಆಲಿಮ್.
ಇತ್ತೇಚೆಗೆ ನೋಡುಗರನ್ನ ಮಂತ್ರಮುಗ್ಧಗೊಳಿಸಿದ ಚಿತ್ರ ಧುರಂಧರ್. ಇದರಲ್ಲಿ ರಣ್ವೀರ್ ಸಿಂಗ್ ಹೇರ್ ಸ್ಟೈಲಿಸ್ಟ್ ಒನ್ದ್ ಅಗೈನ್ ಆಲಿಮ್ ಹಕೀಮ್. ಹೌದು.. ಈ ಹಿಂದೆಯೂ ರಣ್ವೀರ್ ಸಿಂಗ್‌ಗೆ ಸಾಕಷ್ಟು ನ್ಯೂ ಲುಕ್ಸ್ ನೀಡಿದ್ದ ಆಲಿಮ್, ಈ ಬಾರಿ ಲಾಂಗ್ ಹೇರ್ ಜೊತೆ ಲಾಂಗ್ ಗಡ್ಡ ಕೂಡ ಡಿಸೈನ್ ಮಾಡಿದ್ದಾರೆ.
- ವಿಕ್ಕಿ ಕೌಶಲ್ ಉರಿ, ಶ್ಯಾಮ್ ಬಹದ್ದೂರ್, ಛಾವಾಗೆ ಕೆಲಸ
- ಶಾಹಿದ್ ಕಪೂರ್, ಅಭಿಷೇಕ್ ಬಚ್ಚನ್, ಕರಣ್ಗೂ ಕೈಚಳಕ
ಬಾಲಿವುಡ್‌ನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ವಕ್ಕಿ ಕೌಶಲ್ ಸೂಪರ್ ಹಿಟ್ಸ್ ಉರಿ, ಶ್ಯಾಮ್ ಬಹದ್ದೂರ್ ಹಾಗೂ ಛಾವಾ ಸಿನಿಮಾಗಳ ನ್ಯೂ ಹೇರ್ ಸ್ಟೈಲ್ ಲುಕ್ಸ್‌ಗೆ ಕಾರಣ ಇದೇ ಆಲಿಮ್ ಹಕೀಮ್. ಒಮ್ಮೆ ಶಾರ್ಟ್ ಹೇರ್, ಮತ್ತೊಮ್ಮೆ ಲಾಂಗ್ ಹೇರ್, ಮಗದೊಮ್ಮೆ ಮೀಡಿಯಂ ಗುಂಗುರು ಕೂದಲು.. ಹೀಗೆ ಪಾತ್ರ ಡಿಮ್ಯಾಂಡ್ ಮಾಡಿದಂತೆ ತಮ್ಮ ಕ್ರಿಯೇಟಿವಿಟಿ ಮೆರೆದಿದ್ದಾರೆ ಆಲಿಮ್.
ಬಿಗ್‌ಬಿ ಅಮಿತಾಬ್ ಬಚ್ಚನ್ ಮಗ ಅಭಿಷೇಕ್ ಬಚ್ಚನ್, ಖ್ಯಾತ ನಿರ್ಮಾಪಕ ಕರಣ್ ಜೋಹಾರ್, ಶಾಹಿದ್ ಕಪೂರ್ ಅಂತಹ ಸ್ಟಾರ್ಸ್‌ಗೂ ಆಲಿಮ್ ಹಕೀಮ್ ಫೇವರಿಟ್. ಯಾಕಂದ್ರೆ ಅವರ ಲುಕ್ಸ್‌ನ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳು ಮೆಚ್ಚುವಂತೆ ಮಾಡಿದ ಗರಿಮೆ ಆಲಿಮ್‌ರದ್ದು. ಸೋ.. ಇವರೆಲ್ಲರೂ ಸಹ ಆಲಿಮ್ ಹಕೀಮ್ ಪರ್ಮನೆಂಟ್ ಕಸ್ಟಮರ್ಸ್.
- ಕಣ್ಣು ಕುಕ್ಕುವ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್
- ರಜನೀಕಾಂತ್ ಫೇವರಿಟ್ ಹೇರ್ ಸ್ಟೈಲಿಸ್ಟ್ ಹಕೀಮ್
ಹೃತಿಕ್ ರೋಷನ್ ಅಂದ ಹಾಗೂ ಅವ್ರ ನೀಲಿ ಕಣ್ಣುಗಳಿಗೆ ಬೆರಗಾಗದವರೇ ಇಲ್ಲ. ಅಲ್ಲದೆ ಆ ಹ್ಯಾಂಡ್ಸಮ್ ಹಂಕ್ ಹೇರ್ ಸ್ಟೈಲ್‌ನಿಂದಲೂ ನೋಡುಗರನ್ನ ಹುಬ್ಬೇರಿಸುವಂತೆ ಮಾಡ್ತಾರೆ. ಅವ್ರ ಬಹುತೇಕ ಪರ್ಸನಲ್ ಹಾಗೂ ಸಿನಿಮಾ ಲುಕ್‌ಗಳ ಹಿಂದೆ ಆಲೀಮ್ ಹಕೀಮ್ ಕೈಚಳಕ ಇದ್ದೇ ಇದೆ.
ಇನ್ನೂ ನಮ್ಮ ಸೌತ್‌ನ ಸೂಪರ್ ಸ್ಟಾರ್ ರಜನೀಕಾಂತ್‌ಗೆ ಹೇರ್ ಕಮ್ಮಿ ಇರಬಹುದು. ಆದ್ರೆ ಅವರಿಗೂ ಹಕೀಮ್ ಹಾರ್ಟ್ ಫೇವರಿಟ್. ರಜನೀಕಾಂತ್ ಸಿನಿಮಾಗಳಲ್ಲಿ ಅವ್ರ ವಿಗ್‌ಗಳ ಹೇರ್ ಸ್ಟೈಲ್‌ನ ಡಿಸೈನ್ ಮಾಡೋದು ಇದೇ ಹಕೀಮ್. ಅದಕ್ಕೆ ಜೈಲರ್, ಕೂಲಿ ಸೇರಿದಂತೆ ಸಾಕಷ್ಟು ಚಿತ್ರಗಳು ಸಾಕ್ಷಿ ಆಗಿವೆ.
- ಚಿಯಾನ್ ವಿಕ್ರಮ್, ಸೇತುಪತಿ, ಅಟ್ಲೀಗೂ ಕಮಾಲ್
- ಬಾಹುಬಲಿ ಪ್ರಭಾಸ್, ಲೈಗರ್ ದೇವರಕೊಂಡ ಮಸ್ತ್
ತಮಿಳಿನ ಎಕ್ಸ್‌ಪೆರಿಮೆಂಟಲ್ ಸ್ಟಾರ್ ಚಿಯಾನ್ ವಿಕ್ರಮ್‌ರ ಒಂದಷ್ಟು ಚಿತ್ರಗಳಿಗೆ ಆಲಿಮ್ ಹಕೀಮ್ ಲುಕ್ಸ್ ಡಿಸೈನ್ ಮಾಡಿದ್ರು. ಆ ಲುಕ್ಸ್‌ಗೆ ಬೆಳ್ಳಿತೆರೆ ಮೇಲೆ ಸಾಕಷ್ಟು ಉತ್ತಮ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇನ್ನೂ ವಿಜಯ್ ಸೇತುಪತಿ, ಸೆನ್ಸೇಷನಲ್ ಡೈರೆಕ್ಟರ್ ಅಟ್ಲೀಗೂ ಆಲಿಮ್ ಕೆಲಸ ಮಾಡ್ತಾರೆ ಅಂದ್ರೆ ನೀವು ನಂಬಲೇಬೇಕು.
ರಾಜಮೌಳಿ, ಅವರ ಬಾಹುಬಲಿ ಸಿನಿಮಾದ ಪ್ರಭಾಸ್ ಲುಕ್ಸ್ ಹಿಂದಿನ ಮಾಸ್ಟರ್‌ಮೈಂಡ್ ಇದೇ ಆಲಿಮ್ ಹಕೀಮ್. ಪ್ರಭಾಸ್ ಹೇರ್ ಸ್ಟೈಲ್ ಒಂಥರಾ ಟ್ರೆಂಡ್ ಆಗೋಕೆ ಇವರೇ ಕಾರಣ. ಅಲ್ಲದೆ ಲೈಗರ್ ಸಿನಿಮಾದ ವಿಜಯ್ ದೇವರಕೊಂಡ ಗುಂಗುರು ಕೂದಲು ಹಿಂದಿನ ಕೇಶ ಗುರು ಹಕೀಮ್.
- ಅಲ್ಲು ಅರ್ಜುನ್ ಪುಷ್ಪ, ರಾಕಾನಲ್ಲಿ ಹಕೀಮ್ ರಾಕ್ಸ್
- ಮಹೇಶ್ ಬಾಬು, Jr NTR, ರಾಮ್ಚರಣ್ಗೆ ಫಿಕ್ಸ್
ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗುಂಗುರು ಕೂದಲು, ರಾ & ರಗಡ್ ಲುಕ್ ಹಿಂದೆ ಆಲಿಮ್ ಹಕೀಮ್ & ಟೀಂ ಕೆಲಸವಿದೆ. ಅಲ್ಲದೆ, ಸದ್ಯ ಅಟ್ಲೀ-ಅಲ್ಲು ಅರ್ಜುನ್‌ರ ರಾಕಾ ಸಿನಿಮಾಗೂ ಹಕೀಮ್ ಹೇರ್ ಡಿಸೈನ್ ಮಾಡಿದ್ದಾರೆ.
ಪ್ರಿನ್ಸ್ ಮಹೇಶ್ ಬಾಬು ಸದ್ಯ ವಾರಣಾಸಿ ಸಿನಿಮಾಗೆ ಬಣ್ಣ ಹಚ್ಚಿದ್ದು, ಈ ಚಿತ್ರದ ಲುಕ್ ಸೇರಿದಂತೆ ಇದಕ್ಕೂ ಮೊದಲಿನಿಂದ ಆಲಿಮ್ ಹಕೀಮ್ ಅವ್ರ ಲುಕ್ ಮಾಸ್ಟರ್ ಆಗಿದ್ದಾರೆ. ಅಲ್ಲದೆ, ಜೂನಿಯರ್ ಎನ್‌ಟಿಆರ್ ನಟನೆಯ ಡ್ರ್ಯಾಗನ್ ಸಿನಿಮಾಗೆ ಖುದ್ದು ನಮ್ಮ ಪ್ರಶಾಂತ್ ನೀಲ್ ಅವರೇ ಹಕೀಮ್ ಬಳಿ ಹೇರ್ ಸ್ಟೈಲ್ ಮಾಡಿಸಿದ್ದಾರೆ.
ರಾಮ್ ಚರಣ್ ತೇಜಾ ಅಂತೂ ಸಾಕಷ್ಟು ವರ್ಷಗಳಿಂದಲೇ ಆಲಿಮ್ ಹಕೀಮ್‌ಗೆ ಖಾಯಂ ಕಸ್ಟಮರ್. ಧ್ರುವ, ತೂಫಾನ್ ಸೇರಿದಂತೆ ಈಗ ತೆರೆಗೆ ಬರ್ತಿರೋ ಪೆದ್ದಿ ಸಿನಿಮಾ ತನಕ ಇವರೇ ಹೇರ್ ಡಿಸೈನ್ ಮಾಡ್ತಿದ್ದಾರೆ. ಅಲ್ಲದೆ, ಇತ್ತೀಚೆಗೆ ಖುದ್ದು ರಾಮ್ ಚರಣ್ ಹೈದ್ರಾಬಾದ್‌ನಲ್ಲಿ ಲಾಂಚ್ ಆದ ಹಕೀಮ್ ಹೇರ್ ಲಾಂಚ್‌ನ ಅಯ್ಯಪ್ಪನ ಮಾಲೆಯಲ್ಲೇ ಹೋಗಿ ಉದ್ಘಾಟನೆ ಮಾಡಿ ಬಂದರು.
- ಯಶ್ ಕೆಜಿಎಫ್, ಆ್ಯಡ್ ಫಿಲ್ಮ್ಗಳಲ್ಲಿ ಹಕೀಮ್ ಛಾಪು
- ಕೊಹ್ಲಿ, ಧೋನಿ ಸ್ಟೈಲಿಶ್ ಲುಕ್ಸ್‌ಗೆ ದುನಿಯಾ ಬೋಲ್ಡ್
ನಮ್ಮ ರಾಕಿಂಗ್ ಸ್ಟಾರ್ ಯಶ್‌ರ ಕೆಜಿಎಫ್ ಸಿನಿಮಾಗೆ ಆಲಿಮ್ ಹಕೀಮ್ ಕೆಲಸ ಮಾಡಿದ್ದಾರೆ. ಅರೇ ಯಶ್ ಅದ್ಹೇಗೆ ಇಷ್ಟು ನೀಟ್ ಆಗಿ ಹೇರ್ ಮೇಂಟೇನ್ ಮಾಡ್ತಾರೆ ಗುರು ಅಂತ ಎಲ್ರೂ ಮಾತಾಡಿಕೊಳ್ಳೋ ವೇಳೆ ಅದ್ರ ಹಿಂದೆ ನಾನಿದ್ದೀನಿ ಅನ್ನೋ ಸೂಚನೆ ನೀಡಿದ್ರು ಆಲಿಮ್. ಅಲ್ಲದೆ ಯಶ್ ಅವ್ರ ರಾಮ್‌ರಾಜ್ ಆ್ಯಡ್ ಸೇರಿದಂತೆ ಸಾಕಷ್ಟು ಆ್ಯಡ್ ಫಿಲ್ಮ್‌ಗಳ ಲುಕ್ಸ್‌ಗೆ ಇವರೇ ಸಾರಥಿ.
ಕ್ರಿಕೆಟ್ ಲೋಕದ ಸೆನ್ಸೇಷನಲ್ ಸ್ಟಾರ್ಸ್ ಆಗಿರೋ ಕಿಂಗ್ ಕೊಹ್ಲಿ ಹಾಗೂ ಧೋನಿ ಸ್ಟೈಲಿಶ್ ಲುಕ್ಸ್‌ಗೆ ಆಲೀಮ್ ಮುನ್ನುಡಿ ಬರೆದಿದ್ರು. ಪ್ರತೀ ಬಾರಿ ಐಪಿಎಲ್ ಸೀಸನ್‌ಗಳು ಬಂದಾಗ ವರ್ಷಕ್ಕೊಂದು ನ್ಯೂ ಲುಕ್ ನೀಡ್ತಿದ್ರು ಆಲಿಮ್ ಹಕೀಮ್. ಓ ಮೈ ಗಾಡ್ ಯಾವ ಬಾಲಿವುಡ್ ಸ್ಟಾರ್‌ಗೂ ಇವರು ಕಮ್ಮಿ ಇಲ್ಲ ಅಂತ ಎಲ್ರೂ ಬಾಯ್ಮೇಲೆ ಬೆರಳಿಡುವಂತೆ ಮಿಂಚ್ತಿದ್ರು ಕೊಹ್ಲಿ-ಧೋನಿ.
ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್, ಹಾರ್ದಿಕ್ ಪಾಂಡೆ, ಚಹಲ್, ತಿಲಕ್ ವರ್ಮಾ, ರಿಂಕು ಸಿಂಗ್, ಶ್ರೇಯಸ್ ಐಯ್ಯರ್ ಸೇರಿದಂತೆ ಇಂಡಿಯನ್ ಕ್ರಿಕೆಟ್ ಟೀಂನ ಸಾಕಷ್ಟು ಪ್ಲೇಯರ್ಸ್ ನಯಾ ಲುಕ್ಸ್‌ಗೆ ಇದೇ ಆಲಿಮ್ ಹಕೀಮ್ ನಾಂದಿ ಹಾಡ್ತಿದ್ದಾರೆ.
ನಮ್ಮ ಕನ್ನಡಿಗ ಕೆ ಎಲ್ ರಾಹುಲ್, ಅವರ ಮಾವ ಸುನೀಲ್ ಶೆಟ್ಟಿ, ಇತ್ತೀಚೆಗೆ ತೆರೆಕಂಡ ಯೂತ್ ಸೆನ್ಸೇಷನಲ್ ಹಿಟ್ ಸೈಯ್ಯಾರ ಸಿನಿಮಾದ ನಾಯಕನಟನ ಹೇರ್ ಸ್ಟೈಲ್ ಕೂಡ ಇವ್ರ ಕಲಾಕುಂಚದಲ್ಲೇ ಅರಳಿದೆ. ದೇಶದ ಶ್ರೀಮಂತ ವ್ಯಕ್ತಿಗಳು ಅನಿಸಿಕೊಂಡಿರೋ ಅನಿಲ್ ಅಂಬಾನಿ ಹಾಗೂ ಅನಂತ್ ಅಂಬಾನಿ ಸಹ ಆಲಿಮ್ ಹಕೀಮ್ ಬಳಿಯೇ ಹೇರ್ ಕಟ್ ಮಾಡಿಸ್ತಾರೆ.
ಸೋ ನೋಡಿದ್ರಲ್ಲಾ ಆಲಿಮ್ ಹಕೀಮ್ ಎಂಥಾ ಜಾದೂಗಾರ ಅಂತ. ಈತ ಕತ್ತರಿ ಹಿಡಿದು ಕೈ ಇಟ್ರೆ ಮುಗೀತು. ಅಲ್ಲೊಂದು ಹೊಸ ಮ್ಯಾಜಿಕ್ ಆಗುತ್ತೆ. ಅದಕ್ಕೊಂದು ಲಾಜಿಕ್ ಕೂಡ ಇರತ್ತೆ. ಪೋರ್ಟ್‌ಫೋಲಿಯೋಗಳನ್ನ ಮಾಡಿಸೋಕೆ, ಫೇಮಸ್ ಮ್ಯಾಗಜಿನ್ ಫೋಟೋಶೂಟ್‌ಗಳಿಗೆ, ಸಿನಿಮಾಗಳಿಗೆ, ಮದ್ವೆ ಸೇರಿದಂತೆ ಎಲ್ಲಕ್ಕೂ ಇವ್ರ ಸರ್ವೀಸ್ ಇದೆ. ಒಟ್ಟಾರೆ ಈತ ಸೆಲೆಬ್ರಿಟಿಗಳ ಪಾಲಿಗೆ ಸೆಲೆಬ್ರಿಟಿ. ವರ್ಷದ 365 ದಿನವೂ ಬ್ಯುಸಿ ಇರೋ ಟೆಕ್ನಿಷಿಯನ್ ಕೂಡ ಹೌದು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
