ಬಾಲಿವುಡ್‌‌ನಲ್ಲಿ ಹರ್ಷ ಹಂಗಾಮ.. ಬಾಘಿ ಸಾಂಗ್ಸ್ ಸೂಪರ್

ಬನಶಂಕರಿ to ಬಾಲಿವುಡ್..ಎ. ಹರ್ಷ ಸಕ್ಸಸ್‌‌‌ಫುಲ್ ಜರ್ನಿ..!

Web (30)

ಸಿನಿಮಾ ಎಂಬ ಕ್ರಿಯೇಟಿವ್ ಫೀಲ್ಡ್​​ನಲ್ಲಿ ಪ್ರತಿಭೆ ಜೊತೆಗೆ ಪರಿಶ್ರಮ ಇದ್ರೆ ಯಶಸ್ಸು ಸಿಗೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಈ ಮಾತು ಸಾಕಷ್ಟು ಕಲಾವಿದರು, ನಿರ್ದೇಶಕರ ಜೀವನದಲ್ಲಿ ನಿಜವಾಗಿದೆ‌. ಇದೇ ಸಾಲಿನಲ್ಲಿ ನಿರ್ದೇಶಕ ಎ. ಹರ್ಷ ಕೂಡ ಸಾಗ್ತಿದ್ದಾರೆ. ಇಂದು ಎ ಹರ್ಷ ಅವರ ಹುಟ್ಟುಹಬ್ಬ. ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಇವರು, ಬಾಘಿ-4ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಸಾಂಗ್ಸ್, ಬಿಟೌನ್ ಮಾತ್ರವಲ್ಲದೆ ಕನ್ನಡಿಗರ ಮನಸ್ಸು ಕೂಡ ಗೆದ್ದಿವೆ.

ಡ್ಯಾನ್ಸ್ ಮಾಸ್ಟರ್ ಆಗಿದ್ದ  ಹರ್ಷ ಈಗ ಸ್ಟಾರ್ ಡೈರೆಕ್ಟರ್. ಗೆಳೆಯ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ. ಆ ಚಿತ್ರದ ಬಳಿಕ ಕೆಲ ಸಿನಿಮಾಗಳು ಮೂಡಿ ಬಂದಿದ್ದು, ಹರ್ಷ ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಳ್ಳುತ್ತಾರೆ. ಚಂದನವನದ ಸೂಪರ್ ಸ್ಟಾರ್ಸ್ ದರ್ಶನ್, ಪುನೀತ್ ರಾಜ್‍ಕುಮಾರ್, ಶಿವರಾಜ್​​ಕುಮಾರ್ ಹಾಗೂ ತೆಲುಗಿನಲ್ಲಿ ಗೋಪಿ ಚಂದ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿ ಸೈ ಎನ್ನಿಸಿಕೊಳ್ತಾರೆ.

ಈ ಚಿತ್ರ ಆದ್ಮೇಲೆ ಎ ಹರ್ಷ ಅದ್ಯಾವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬಂದ ಬೆನ್ನಲ್ಲೇ, ಬಾಲಿವುಡ್ ಗೆ ಹರ್ಷ ಹಾರ್ತಾರೆ ಅನ್ನೋ ಸುದ್ದಿ ಎಲ್ರಿಗೂ ಶಾಕ್ ಆಗಿತ್ತು ಹಾಗಾದ್ರೆ ಹರ್ಷ ಇನ್ಮುಂದೆ ಕನ್ನಡ ಸಿನಿಮಾಗಳನ್ನ ಮಾಡಲ್ವಾ ಎಂಬ ಪ್ರಶ್ನೆಯೂ ಮೂಡಿತ್ತು. ಆದ್ರೆ ಹರ್ಷ ಮಾತ್ರ ಸೈಲೆಂಟ್ ಆಗಿ ತಮ್ಮ ಕೆಲಸದ ಮೇಲೆ ಫೋಕಸ್ ಮಾಡ್ತಿದ್ದಾರೆ. ಬಾಲಿವುಡ್ ಆ್ಯಕ್ಷನ್ ಸ್ಟಾರ್​ ಟೈಗರ್ ಶ್ರಾಫ್ ಅಭಿನಯಿಸುತ್ತಿರೋ ಭಾಗಿ 4ಗೆ ಆ್ಯಕ್ಷನ್ ಕಟ್ ಹೇಳ್ತಿರೋದೇ ನಿರ್ದೇಶಕ ಹರ್ಷ,  ಸದ್ಯ ತಮ್ಮ ಬನಶಂಕರಿ ನಿವಾಸದಿಂದ ಹಿಡಿದು ಬಾಲಿವುಡ್​ವರೆಗೂ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.

ಇತೀಚೆಗಷ್ಟೇ ಬಾಘಿ 4 ಚಿತ್ರದ ಟೀಸರ್‌ ರಿಲೀಸ್‌ ಆಗಿದ್ದು, ಹರ್ಷ ನಿರ್ದೇಶನಕ್ಕೆ ಬಾಲಿವುಡ್‌ ಮಂದಿ ದಂಗಾಗಿದ್ದಾರೆ. ಹೌದು, 1:49 ನಿಮಿಷದ ಟೀಸರ್‌ ಸಂಪೂರ್ಣ ರಕ್ತಸಿಕ್ತವಾಗಿ ಕೂಡಿದ್ದು,  ಆರಂಭದಿಂದ ಅಂತ್ಯದವರೆಗೂ  ಬರಿ ಹೊಡಿ..ಕೊಚ್ಚು..ರಕ್ತ ಇದೇ ತುಂಬಿ ತುಳುಕಿದೆ ಜೊತೆಗೆ ಮಾಸ್‌ ಎಲಿವೆಂಟ್ ರಾರಾಜಿಸಿದೆ. ಬ್ಲಡ್ ಶೆಡ್ ಅತಿರೇಕಕ್ಕೆ  ಅನಿಮಲ್ ಹಾಗು ಮಾರ್ಕೊ ಸಿನಿಮಾ ಹಾಗೆ ಇರಬೋದೇನೋ ಎಂದು ಸಿನಿಪ್ರಿಯರು ಪ್ರಿಡಿಕ್ಟ್ ಮಾಡಿದ್ದಾರೆ.

ಬಾಘಿ-4 ಸಾಂಗ್ಸ್‌‌ಗೆ ಬಾಲಿವುಡ್ ಮಂದಿ ಫುಲ್ ಫಿದಾ, ಪಂಜಾಬಿ ನಟಿ ಜೊತೆ ಟೈಗರ್ ಶ್ರಾಫ್ ಸೆಕ್ಸಿ ಸ್ಟೆಪ್ಸ್ ಗುರು

ಸಿನಿಮಾ ಅಂದ್ರೆ ನೆಗೆಟಿವ್..ಪಾಸಿಟಿವ್ ಇದ್ದೇ ಇರುತ್ತೆ. ಸದ್ಯ ಭಾಗಿ 4 ಚಿತ್ರದ ಸಾಂಗ್ ವೊಂದು ಬಿಡುಗಡೆ ಆಗಿದ್ದು ಪಂಜಾಬಿ ನಟಿ ಸೋನಮ್ ಬಾಜ್ವಾ ಜೊತೆ  ಟೈಗರ್ ಶ್ರಾಫ್ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.ಎಸ್, ಟೈಗರ್ ಶ್ರಾಫ್ ಸಿಕ್ಸ್ ಪ್ಯಾಕ್..ಬೇರ್ ಬಾಡಿ ನೋಡೋಕೆ ಹುಡ್ಗಿರು ಕಾಯ್ತಿರ್ತಾರೆ ಅಷ್ಟು ಹಾಟ್ ಲುಕ್ ಮೇಂಟೈನ್ ಮಾಡಿದ್ದಾರೆ ಶ್ರಾಫ್. ಇನ್ನು  bahli sohni ಇಡೀ ಹಾಡಲ್ಲಿ ಟೈಗರ್ ಶ್ರಾಫ್ ತಮ್ಮ ಸಿಕ್ಸ್ ಪ್ಯಾಕ್ ತೋರಿಸಿ ಹುಕ್ ಸ್ಟೆಪ್ ಹಾಕಿದ್ದಾರೆ.  ಎರಡೇ ದಿನಕ್ಕೆ ಈ ಹಾಡು 9ಮಿಲಿಯನ್ ಗೂ ಅಧಿಕ ವಿವ್ಸ್ ಪಡೆದುಕೊಂಡಿದೆ

ಬಾಲಿವುಡ್​ನ ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಟೈಗರ್ ಶ್ರಾಫ್ ಅವರ ಬಾಘಿ ಚಿತ್ರದ ಎಲ್ಲಾ ಭಾಗಗಳು ಜನರಿಗೆ ಇಷ್ಟವಾಗಿವೆ. ಮೊದಲ ಭಾಗದಿಂದ ಕಳೆದ ಒಟ್ಟು 3 ಭಾಗಗಳೂ ಸಹ ಬಾಕ್ಸ್‌ಆಫಿಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಈ ಚಿತ್ರದ ಮೂಲಕವೇ ಟೈಗರ್ ಬಾಲಿವುಡ್‌ನಲ್ಲಿ ಆಕ್ಷನ್ ಹೀರೋ ಆಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದರು. ಆದರೆ ಕಳೆದ ಕೆಲ ಸಿನಿಮಾಗಳಲ್ಲಿ ಟೈಗರ್‌ ಸದ್ದು ಕಡಿಮೆ ಆಗಿದ್ದು, ಹೀಗಾಗಿ ಟೈಗರ್‌ ಶಾರ್ಫ್‌ ಸಹ ಈ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಹೊಂದಿದ್ದಾರೆ. ಅಲ್ಲದೆ ಕನ್ನಡ ನಿರ್ದೇಶಕ ಎ ಹರ್ಷಗೆ ಬಾಲಿವುಡ್ ನಲ್ಲಿ ಈ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಎನಿವೇ ಸೆಪ್ಟೆಂಬರ್ 5ಕ್ಕೆ ಬಿಡುಗಡೆ ಆಗ್ತಿರೋ ಭಾಗಿ 4 ಗೆ ಆಲ್ ದಿ ಬೆಸ್ಟ್ ಹಾಗೆ ಹರ್ಷ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

Exit mobile version