ಹೇಮಂತ್ ಎಂ ರಾವ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ 1970ರ ದಶಕದ ಚಿತ್ರಗಳಲ್ಲಿ ಬಳಸುತ್ತಿದ್ದ ವಸ್ತ್ರ ವಿನ್ಯಾಸದಿಂದ ಹಿಡಿದು ಆ ಕಾಲದ ಲೆನ್ಸ್ಗಳನ್ನೂ ಬಳಸಿ ಚಿತ್ರವನ್ನು ಚಿತ್ರೀಕರಿಸುತ್ತಿದೆ.
1970–1980ರ ದಶಕದಲ್ಲಿ ಡಾ.ರಾಜ್ಕುಮಾರ್ ಅವರ ಅನೇಕ ಚಿತ್ರಗಳಲ್ಲಿ ಪರಿಚಯಿಸಲಾದ ‘ವಿಂಟೇಜ್ ಲೊಮೋಸ್’ ಕ್ಯಾಮೆರಾವನ್ನು ಬಳಸಿ ಚಿತ್ರವನ್ನು ಚಿತ್ರೀಕರಿಸಿರುವ ತಂಡ ಈಗಾಗಲೇ ಎರಡು ಹಂತಗಳ ಶೂಟಿಂಗ್ನ್ನು ಪೂರ್ಣಗೊಳಿಸಿದೆ. ತಂಡವು ಲೆನ್ಸ್ ಆಯ್ಕೆಗಾಗಿ ಚೆನ್ನೈ, ಮುಂಬೈ ಅಲ್ಲದೆ, ಬೆಂಗಳೂರಿನಲ್ಲೂ ಹುಡುಕಾಟ ನೆಡೆಸಿದೆ.
