ಸ್ಯಾಂಡಲ್ವುಡ್ನಲ್ಲಿ ಮತ್ತೆ ಮಲ್ಟಿಸ್ಟಾರರ್ ಸಿನಿಮಾಗಳ ಜಮಾನ ಶುರುವಾಗ್ತಿದೆ. ಅರ್ಜುನ್ ಜನ್ಯ ಚೊಚ್ಚಲ ಪ್ರಯೋಗಕ್ಕೆ ಶಿವಣ್ಣ-ಉಪ್ಪಿ ಓಂಕಾರ ಆಡಿದ್ದು, ಟೀಸರ್ ಪ್ಯಾನ್ ಇಂಡಿಯಾ ಸಂಚಲನ ಮೂಡಿಸಿದೆ. ಇಷ್ಟಕ್ಕೂ ಮುಂಬೈ ಫ್ಲೈಟ್ ಏರಿದ್ಯಾಕೆ ಟೀಂ 45 ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ ಕಾಯ್ತಿದೆ. ಜಸ್ಟ್ ಹ್ಯಾವ್ ಎ ಲುಕ್.
45..ಕರುನಾಡ ಚಕ್ರವರ್ತಿ ಡಾ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಸೋಲ್ ಸ್ಟಾರ್ ರಾಜ್ ಬಿ ಶೆಟ್ಟಿ ಕಾಂಬೋನಲ್ಲಿ ತಯಾರಾಗ್ತಿರೋ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ಮೂವಿ. ನೂರಾರು ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿರೋ ಅರ್ಜುನ್ ಜನ್ಯ, ಮತ್ತೊಂದು ಮಹತ್ವದ ಹೆಜ್ಜೆ ಇಡೋ ನಿಟ್ಟಿನಲ್ಲಿ ಡೈರೆಕ್ಟರ್ ಆಗಿ ಬಡ್ತಿ ಪಡೆಯುತ್ತಿದ್ದಾರೆ.
ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳ್ತಿರೋ ಈ 45 ಸಿನಿಮಾಗೆ ಮೋಸ್ಟ್ ಪ್ಯಾಷನೇಟ್ ಹಾಗೂ ಸಕ್ಸಸ್ಫುಲ್ ಪ್ರೊಡ್ಯೂಸರ್ ರಮೇಶ್ ರೆಡ್ಡಿ ಬಂಡವಾಳ ಹೂಡಿ, ರಿಚ್ ಆಗಿ ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ, ಡೈಲಾಗ್ಸ್ ಎಲ್ಲವೂ ಪಾತ್ರಗಳಿಗೆ ಪೂರಕವಾಗಿದ್ದು, ಹೊಸತೇನೋ ಎಕ್ಸ್ಪೆರಿಮೆಂಟ್ ಮಾಡಿದ್ದಾರೆ ಅಂತ ಇಡೀ ಸಿನಿದುನಿಯಾ ಮೆಚ್ಚಿಕೊಂಡಿದೆ.
ಇಲ್ಲಿಯವರೆಗೂ ಕಾಣಿಸಿಕೊಂಡಿರದ ರೋಲ್ಗಳಲ್ಲಿ ಉಪ್ಪಿ- ಶಿವಣ್ಣ ಕಾಣಸಿಗಲಿದ್ದು, ನೋಡುಗರಿಗೆ ಮಸ್ತ್ ಮನರಂಜನೆ ಕೊಡೋ ಧಾವಂತದಲ್ಲಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಟೀಸರ್ ಎಲ್ಲರಿಗೂ ಇಷ್ಟವಾಗಿದ್ದು, ಪರಭಾಷಿಗರು ಕೂಡ ಇದರ ಬಗ್ಗೆ ಮಾತನಾಡುವಂತಾಗಿದೆ. ಹಾಗಾಗಿ ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಆಗ್ತಿದ್ರೂ, ಈಗಲಿಂದಲೇ ಭರ್ಜರಿ ಪ್ರಮೋಷನ್ಸ್ ಮಾಡೋಕೆ ಮುಂದಾಗಿದೆ ಚಿತ್ರತಂಡ.
ಮಂಗಳವಾರ ಹಾಗೂ ಬುಧವಾರ.. ಅಂದ್ರೆ ಇದೇ ಏಪ್ರಿಲ್ 15 ಹಾಗೂ 16ರಂದು ಎರಡು ದಿನಗಳ ಕಾಲ 45 ಸಿನಿಮಾ ಟೀಂ, ದೇಶದ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಪ್ರಮೋಷನ್ಸ್ ಮಾಡೋಕೆ ಸಜ್ಜಾಗಿದೆ. ಅದ್ರಂತೆ ಇಂದು ಮುಂಜಾನೆ ಪ್ರೈವೆಟ್ ಜೆಟ್ನಲ್ಲಿ ಶಿವರಾಜ್ಕುಮಾರ್ ದಂಪತಿ, ಉಪೇಂದ್ರ, ನಿರ್ದೇಶಕ ಅರ್ಜುನ್ ಜನ್ಯ, ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ಸಂಜಯ್ ಗೌಡ ಟೀಂ ಮುಂಬೈಗೆ ಹಾರಿದೆ. ಇಂದು ಬೆಳಗ್ಗೆ ಮುಂಬೈನಲ್ಲಿ ಸುದ್ದಿಗೋಷ್ಠಿ ಮುಗಿಸಿ, ಸಂಜೆ ಹೈದ್ರಾಬಾದ್ಗೆ ವಾಪಸ್ ಆಗಿ, ಅಲ್ಲಿಯೂ ಸುದ್ದಿಗೋಷ್ಠಿ ನಡೆಸಿದೆ.
ನಾಳೆ ಕೂಡ ತಮಿಳುನಾಡಿನ ಚೆನ್ನೈ, ಕೇರಳದ ಕೊಚ್ಚಿಯಲ್ಲಿ ಬೆಳಗ್ಗೆ ಹಾಗೂ ಸಂಜೆ ಸುದ್ದಿಗೋಷ್ಠಿ ಮಾಡಿ ಬೆಂಗಳೂರಿಗೆ ವಾಪಸ್ ಆಗಲಿದೆ ಚಿತ್ರತಂಡ. 45 ಚಿತ್ರದ ಮೇಕಿಂಗ್, ಅಲ್ಲಿನ ಡಿಸ್ಟ್ರಿಬ್ಯೂಟರ್ಸ್ ಹುಬ್ಬೇರಿಸುವಂತೆ ಮಾಡಿದ್ದು, ಬ್ಯುಸಿನೆಸ್ ದೊಡ್ಡ ಮಟ್ಟಕ್ಕೆ ಮಾಡುವ ಮುನ್ಸೂಚನೆ ಸಿಕ್ಕಿದೆ. ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಎಲ್ಲರೂ ಸಹ ಪರಭಾಷೆಗಳಲ್ಲಿ ಛಾಪು ಮೂಡಿಸಿರೋ ಕಲಾವಿದರೇ. ಹಾಗಾಗಿ ಅದು ಈ ಸಿನಿಮಾದ ಸಕ್ಸಸ್ಗೆ ಪ್ಲಸ್ ಅಗಲಿದೆ.