‘45’ ಪೋಸ್ಟ್‌‌ಪೋನ್.. ಕೆನಡಾ VFX ಟೀಂ ಹೇಳಿದ್ದೇನು..?

ಶಿವಣ್ಣ-ಉಪ್ಪಿ ಫ್ಯಾನ್ಸ್‌ಗೆ ಬೇಸರ.. ಸದ್ಯಕ್ಕಿಲ್ಲ ಟ್ರಯೋ ಶೋ

Untitled design (72)

ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಆಗಸ್ಟ್ 14ಕ್ಕೆ ಕೂಲಿ ಹಾಗೂ ವಾರ್-2 ಜೊತೆ ನಮ್ಮ ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌‌ಪೆಕ್ಟೆಡ್ ಮೂವಿ 45 ಕೂಡ ತೆರೆಗಪ್ಪಳಿಸಬೇಕಿತ್ತು. ಆದ್ರೀಗ ಸಿನಿಮಾದ ರಿಲೀಸ್ ಡೇಟ್ ಪೋಸ್ಟ್‌‌ಪೋನ್ ಆಗಿದೆ. ಇದು ಶಿವಣ್ಣ-ಉಪ್ಪಿ-ರಾಜ್ ಶೆಟ್ಟಿ ಫ್ಯಾನ್ಸ್‌ಗೆ ಕೊಂಚ ಬೇಸರ ತಂದರೂ, ಅಸಲಿ ಮ್ಯಾಟರ್ ಬೇರೆ ಇದೆ. ತಡವಾಗ್ತಿರೋದ್ರ ಹಿಂದಿನ ಅಸಲಿಯತ್ತು ನಿಮ್ಮ ಮುಂದೆ.

ಬಹು ನಿರೀಕ್ಷಿತ 45 ಚಿತ್ರಕ್ಕೆ ಸಿಜಿ ವರ್ಕ್‌ ಇನ್ನೂ ನಡೆಯುತ್ತಿದೆ. ಹಾಗಾಗಿಯೇ ಚಿತ್ರದ ಬಿಡುಗಡೆ ವಿಳಂಬವಾಗಿದೆ. ಹೆಸರಾಂತ ವಿಎಫ್‌ಎಕ್ಸ್ ತಂತ್ರಜ್ಞ ಯಶ್ ಗೌಡ ಈ ಬಗ್ಗೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಹೌದು.. ಕೆನಡಾದ ಪ್ರತಿಷ್ಠಿತ MARZ ಸಂಸ್ಥೆ ಈ 45 ಸಿನಿಮಾಗೆ ವಿಎಫ್‌ಎಕ್ಸ್‌ ಕಾರ್ಯ ನಿರ್ವಹಿಸುತ್ತಿದ್ದು, ಕೆನಡಾ ಕಂಪನಿಯಿಂದ ತಯಾರಾಗ್ತಿರೋ ಮೊದಲ ಕನ್ನಡ ಸಿನಿಮಾ ಅನ್ನೋ ಗರಿಮೆಗೆ ಇದು ಪಾತ್ರವಾಗ್ತಿದೆ.

ಸ್ಯಾಂಡಲ್‌ವುಡ್‌ನ ಲಿವಿಂಗ್ ಲೆಜೆಂಡ್ ಡಾ. ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಲೀಡ್‌‌ನಲ್ಲಿ ಅಭಿನಯಿಸಿರೋ 45 ಚಿತ್ರಕ್ಕೆ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ರಮೇಶ್ ರೆಡ್ಡಿ ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್‌‌ನಡಿ ನಿರ್ಮಿಸುತ್ತಿರೋ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ 45, ಆರಂಭದಿಂದಲೂ ಸಾಕಷ್ಟು ಸದ್ದು ಮಾಡ್ತಿದೆ.

ಕೆಲವು ತಿಂಗಳ ಹಿಂದೆ ವಿಶೇಷ ಟೀಸರ್ ಮೂಲಕ ಚಿತ್ರತಂಡ ಆಗಸ್ಟ್ 15ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಅನ್ನೋ ವಿಷಯವನ್ನು ಹಂಚಿಕೊಂಡಿತ್ತು. ಕನ್ನಡದ ಮೂರು ಜನ ಹೆಸರಾಂತ ನಾಯಕನಟರ ಅಭಿಮಾನಿಗಳು ಈ ಸುದ್ದಿ ಕೇಳಿ ಸಂತಸಗೊಂಡು, ರಿಲೀಸ್‌ಗಾಗಿ ಕಾತರದಿಂದ ಕಾಯ್ತಿದ್ರು. ಅಂದಹಾಗೆ ಕೆನಡಾದ ಪ್ರತಿಷ್ಠಿತ MARZ ಸಂಸ್ಥೆ ಈ ಚಿತ್ರಕ್ಕೆ vfx ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಸ್ಥೆ vfx ಮಾಡ್ತಿರೋ ಮೊದಲ ಕನ್ನಡ ಚಿತ್ರವಿದು.

ಹಾಲಿವುಡ್‌‌‌ನ ನುರಿತ ತಂತ್ರಜ್ಞರಿಂದ ಸಿಜಿ ವರ್ಕ್ ನಡೆಯುತ್ತಿದ್ದು, ಇಂಡಿಯಾದಲ್ಲೇ ಅತೀ ಹೆಚ್ಚು ಸಿಜಿ(VFX)  ಅಳವಡಿಸಲಾಗ್ತಿರೋ ಮೊದಲ ಚಿತ್ರ ಕೂಡ ಇದಾಗಲಿದೆ. ಹಾಗಾಗಿಯೇ ಈ ವಿಎಫ್‌ಎಕ್ಸ್ ಕಾರ್ಯ ಇನ್ನೂ ಪೂರ್ಣವಾಗಿರದ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು 45 ಚಿತ್ರ ಬಿಡುಗಡೆಯಾಲಿಲ್ಲ.‌ ಈ ಕುರಿತು ವಿಎಫ್‌‌ಎಕ್ಸ್ ಸಂಸ್ಥೆಯ ಮುಖ್ಯಸ್ಥ ಹಾಗೂ ತಂತ್ರಜ್ಞ ಯಶ್ ಗೌಡ ಎಕ್ಸ್‌‌ಕ್ಲೂಸಿವ್ ಆಗಿ ಸಿನಿಮಾದ ಟೆಕ್ನಿಕಲ್ ವಿಷಯಗಳನ್ನ ವಿವರಿಸಿದ್ದಾರೆ.

ಇದೇ ವರ್ಷ ಸೆಪ್ಟೆಂಬರ್ 16ರ ಒಳಗೆ ವಿ.ಎಫ್.ಎಕ್ಸ್ ಕಾರ್ಯ ಮುಕ್ತಾಯವಾಗಲಿದ್ದು, ಆ ನಂತರ ಇನ್ನೊಂದು ತಿಂಗಳ ಕಾಲ ಕೆಲವು ಕೆಲಸಗಳಿರಲಿವೆಯಂತೆ. ಸೋ.. ಅಕ್ಟೋಬರ್ 16ರ ಒಳಗೆ ಚಿತ್ರ ತೆರೆಗೆ ಬರಲು ಸಿದ್ದವಾಗ್ತಿದೆ ಎನ್ನಲಾಗಿದೆ.  ಕೊಂಚ ಲೇಟ್ ಆದ್ರೂ ಅತ್ಯುತ್ತಮ ತಂತ್ರಜ್ಞಾನದಿಂದ ಲೇಟೆಸ್ಟ್ ಆಗಿ ಪ್ರೇಕ್ಷಕರ ಮುಂದೆ ಬರೋ ಸೂಚನೆ ನೀಡಿದೆ. ಅಧಿಕೃತ ರಿಲೀಸ್ ಡೇಟ್‌ನ ಪ್ರೊಡ್ಯೂಸರ್ ರಮೇಶ್ ರೆಡ್ಡಿ ಸದ್ಯದಲ್ಲೇ ಅನೌನ್ಸ್ ಮಾಡಲಿದ್ದಾರಂತೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

Exit mobile version