ಬೆಂಗಳೂರು: “ಜಾಲಿಡೇಸ್” ಚಿತ್ರದ ಖ್ಯಾತಿಯ ನಾಯಕ ನಿರಂಜನ್ ಶೆಟ್ಟಿ ಅಭಿನಯದ, ರಾಜ ರವಿಕುಮಾರ್ ನಿರ್ದೇಶನದ, ಮತ್ತು ಸಂಗೀತ ನಿರ್ದೇಶಕ ವಿ. ಮನೋಹರ್ ಅವರ 150ನೇ ಚಿತ್ರವಾದ “31 DAYS” ಸೆಪ್ಟೆಂಬರ್ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಈ ಚಿತ್ರದ ಯಶಸ್ಸಿನ ಕುರಿತು ಆಯೋಜಿಸಲಾಗಿದ್ದ ಸಕ್ಸಸ್ ಮೀಟ್‌ನಲ್ಲಿ ಚಿತ್ರತಂಡದ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ನಿರಂಜನ್ ಶೆಟ್ಟಿ ಮಾತನಾಡಿ, “ನಮ್ಮ ’31 DAYS’ ಚಿತ್ರವು ನನ್ನ 8ನೇ ಚಿತ್ರವಾಗಿದ್ದು, ಪ್ರೇಕ್ಷಕರಿಂದ ಅಪಾರ ಸ್ಪಂದನೆ ಪಡೆದಿದೆ. ಇತ್ತೀಚೆಗೆ ಒಬ್ಬ ಪ್ರೇಕ್ಷಕರು ನನ್ನನ್ನು ಭೇಟಿಯಾಗಿ, ಕೇವಲ ಎರಡು ಪಾತ್ರಗಳೊಂದಿಗೆ ಎರಡು ಗಂಟೆಗಳ ಕಾಲ ರೋಚಕವಾಗಿರುವ ಚಿತ್ರ ನಿರ್ಮಿಸುವುದು ಸವಾಲಿನ ಸಂಗತಿಯಾಗಿದ್ದು, ಇದರಲ್ಲಿ ನಾವು ಗೆದ್ದಿದ್ದೇವೆ ಎಂದರು.
1884ರಲ್ಲಿ ಅಮೋಲ್ ಪಾಲೇಕರ್ ಅಭಿನಯದ ‘ವಸಂತ ಮಾಸ’ ಚಿತ್ರದಿಂದ ಸ್ಪೂರ್ತಿಯನ್ನು ಪಡೆದಿದ್ದೇವೆ. ಪ್ರೇಕ್ಷಕರ ಮತ್ತು ಪತ್ರಕರ್ತರ ಬೆಂಬಲವೇ ಈ ಚಿತ್ರದ ಯಶಸ್ಸಿಗೆ ಕಾರಣ. ಚಿತ್ರದ ವಿತರಕರಾದ ಪ್ರಶಾಂತ್ ಮತ್ತು ಬಾಬಣ್ಣ ಅವರ ಸಹಕಾರದಿಂದ ಈ ವಾರ ಚಿತ್ರಮಂದಿರಗಳ ಸಂಖ್ಯೆಯೂ ಏರಿಕೆಯಾಗಿದೆ,” ಎಂದರು.
