ಈ ವಾರ ಬಿಡುಗಡೆಯಾಗಲಿದೆ ಹೊಸತಂಡದ ಹೊಸಪ್ರಯತ್ನ “1990s” ಚಿತ್ರ

ಈ ವಾರ ಹೊಸತಂಡದ ಹೊಸಪ್ರಯತ್ನ "1990s" ಚಿತ್ರ ಬಿಡುಗಡೆ

Untitled design 2025 02 24t200351.165

ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ – ರಾಣಿ ವರದ್ ನಾಯಕ, ನಾಯಕಿಯಾಗಿ ನಟಿಸಿರುವ “1990s” ಚಿತ್ರ ಈ ವಾರ(ಫೆಬ್ರವರಿ 28) ಬಿಡುಗಡೆಯಗುತ್ತಿದೆ.

ಈಗಾಗಲೇ ಮಹಾರಾಜ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳಿಗೆ ಮೆಚ್ಚುಗೆ ದೊರಕಿದೆ. 90ರ ಕಾಲಘಟ್ಟದ ಕಥೆಯ ಟೀಸರ್ ಹಾಗೂ ಟ್ರೇಲರ್ ಸಹ ಎಲ್ಲರಿಗೂ ಪ್ರಿಯವಾಗಿದೆ ಎನ್ನುತ್ತಾರೆ ನಿರ್ಮಾಪಕರಲ್ಲೊಬ್ಬರಾದ ಅರುಣ್.

ಹಾಲೇಶ್ ಛಾಯಾಗ್ರಹಣ, ಕೃಷ್ಣ ಸಂಕಲನ, ಅಶೋಕ್ ಸಾಹಸ ನಿರ್ದೇಶನ ಹಾಗೂ ಸಾದಿಕ್ ಸರ್ದಾರ್ ನೃತ್ಯ ನಿರ್ದೇಶನ “1990s” ಚಿತ್ರಕ್ಕಿದೆ.

Exit mobile version