ಶೇರು ಮಾರುಕಟ್ಟೆಯಲ್ಲಿ ದಾಖಲೆಯ ಚೇತರಿಕೆ: ಸೆನ್ಸೆಕ್ಸ್ 1000 ಅಂಕ ಜಿಗಿತ!

ಜಿಎಸ್‌ಟಿ ಸುಧಾರಣೆ, ಟ್ರಂಪ್-ಪುಟಿನ್ ಮಾತುಕತೆ!

Untitled design 2025 08 18t140206.528

ಮುಂಬೈ: ಭಾರತೀಯ ಶೇರು ಮಾರುಕಟ್ಟೆಯು ಇಂದು ಭಾರೀ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಅಂಕಗಳ ಏರಿಕೆ ದಾಖಲಿಸಿದೆ. ಕಳೆದ ಕೆಲವು ದಿನಗಳಿಂದ ಕುಸಿತ ಮತ್ತು ಅನಿಶ್ಚಿತತೆಯಿಂದ ಕಂಗಾಲಾಗಿದ್ದ ಹೂಡಿಕೆದಾರರಿಗೆ ಈ ಏರಿಕೆ ಸಂತಸ ತಂದಿದೆ.

ಏರಿಕೆಗೆ ಪ್ರಮುಖ ಕಾರಣಗಳು:

ಆಟೋಮೊಬೈಲ್ ಮತ್ತು ಗ್ರಾಹಕ ಸೇವಾ ವಲಯದ ಷೇರುಗಳು ಗರಿಷ್ಠ ಏರಿಕೆ ಕಂಡಿವೆ. 16 ಪ್ರಮುಖ ವಲಯಗಳಲ್ಲಿ 15 ವಲಯಗಳ ಷೇರುಗಳು ಏರಿಕೆ ದಾಖಲಿಸಿವೆ. ಜಿಎಸ್‌ಟಿ ದರ ಕಡಿತದಿಂದ ಆಟೋಮೊಬೈಲ್ ಕ್ಷೇತ್ರದ ಕಂಪನಿಗಳಾದ ಮಾರುತಿ ಸುಜುಕಿ, ಹೀರೋ ಮೋಟೋಕಾರ್ಪ್ ಮತ್ತು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಳೆದ 10 ತಿಂಗಳಲ್ಲಿ ದಾಖಲೆ ಸುಧಾರಣೆ ತೋರಿವೆ.

ಏಷ್ಯನ್ ಮಾರುಕಟ್ಟೆಗಳ ಧನಾತ್ಮಕ ಸಂಕೇತಗಳು, ಕಂಪನಿಗಳ ಲಾಭಾಂಶ ಘೋಷಣೆ ಮತ್ತು ತಾಂತ್ರಿಕ ಕಾರಣಗಳು ಮಾರುಕಟ್ಟೆ ಏರಿಕೆಗೆ ಬೆಂಬಲ ನೀಡಿವೆ. ಕ್ವಿಕ್ ಕಾಮರ್ಸ್ ವೇದಿಕೆಯಾದ ಸ್ವಿಗ್ಗಿಯ ಷೇರುಗಳು 14% ಏರಿಕೆ ಕಂಡಿದ್ದು, ವೋಡಾಫೋನ್ ಐಡಿಯಾ ಕಂಪನಿಯ ಷೇರುಗಳು ನಷ್ಟದ ಹೊರತಾಗಿಯೂ 2% ಏರಿಕೆ ದಾಖಲಿಸಿವೆ.

Exit mobile version