ಮಾರ್ಚ್ 13, 2026ರ ಶುಕ್ರವಾರದ ಹೊತ್ತಿಗೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಬದಲಾವಣೆ ಕಾಣಿಸಿಕೊಂಡಿಲ್ಲ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಕಂಡುಬಂದಿದೆ. ಇದರ ಪರಿಣಾಮವಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್ ಗಡಿಯನ್ನು ದಾಟಿದೆ.
ಆದರೂ ದೇಶೀಯ ತೈಲ ಮಾರುಕಟ್ಟೆ ಕಂಪನಿಗಳು (OMCs) ಚಿಲ್ಲರೆ ಇಂಧನ ದರಗಳಲ್ಲಿ ಯಾವುದೇ ತಕ್ಷಣದ ಬದಲಾವಣೆ ಮಾಡಿಲ್ಲ. ಇದರಿಂದ ವಾಹನ ಚಾಲಕರು ಹಾಗೂ ಸಾರಿಗೆ ವಲಯಕ್ಕೆ ತಾತ್ಕಾಲಿಕವಾಗಿ ಸ್ವಲ್ಪ ಮಟ್ಟಿನ ನೆಮ್ಮದಿ ದೊರಕಿದೆ.
ಇಂದಿನ ಇಂಧನ ಬೆಲೆ ಎಷ್ಟು?
ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್‌ಗೆ 94.77 ರೂಪಾಯಿ ಇದ್ದರೆ, ಡೀಸೆಲ್ ಬೆಲೆ 87.67 ರೂಪಾಯಿಯಲ್ಲಿ ಸ್ಥಿರವಾಗಿದೆ. ಮುಂಬೈನಲ್ಲಿ ಪೆಟ್ರೋಲ್ 104.81 ರೂಪಾಯಿ, ಡೀಸೆಲ್ 91.34 ರೂಪಾಯಿಯಲ್ಲಿದೆ. ಚೆನ್ನೈನಲ್ಲಿ ಪೆಟ್ರೋಲ್ 101.78 ರೂಪಾಯಿ, ಡೀಸೆಲ್ 93.38 ರೂಪಾಯಿ ಇದ್ದರೆ, ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 106.46 ರೂಪಾಯಿ ಮತ್ತು ಡೀಸೆಲ್ 95.40 ರೂಪಾಯಿಯಲ್ಲಿದೆ.
| ನಗರ | ಪೆಟ್ರೋಲ್ (₹/ಲೀ) | ಡೀಸೆಲ್ (₹/ಲೀ) |
|---|---|---|
| ದೆಹಲಿ | 94.77 | 87.67 |
| ಮುಂಬೈ | 104.81 | 91.34 |
| ಚೆನ್ನೈ | 101.78 | 93.38 |
| ಕೋಲ್ಕತ್ತಾ | 106.46 | 95.40 |
| ಬೆಂಗಳೂರು | 103.33 | 91.39 |
ರಾಜ್ಯವಾರು ಪೆಟ್ರೋಲ್-ಡೀಸೆಲ್ ದರಗಳು
ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 103.33 ರೂಪಾಯಿ ಇದ್ದರೆ, ಡೀಸೆಲ್ 91.39 ರೂಪಾಯಿಯಲ್ಲಿದೆ. ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶದಲ್ಲಿ ಪೆಟ್ರೋಲ್ 109.31 ರೂ., ತೆಲಂಗಾಣದಲ್ಲಿ 108.01 ರೂ., ತಮಿಳುನಾಡಿನಲ್ಲಿ 101.78 ರೂ., ಕೇರಳದಲ್ಲಿ 106.46 ರೂ. ಇದೆ.
-
ಮಹಾರಾಷ್ಟ್ರ: ಪೆಟ್ರೋಲ್ 104.81 ರೂ., ಡೀಸೆಲ್ 91.34 ರೂ.
-
ಉತ್ತರ ಪ್ರದೇಶ: ಪೆಟ್ರೋಲ್ 95.13 ರೂ., ಡೀಸೆಲ್ 88.27 ರೂ.
-
ಗುಜರಾತ್: ಪೆಟ್ರೋಲ್ 95.00 ರೂ., ಡೀಸೆಲ್ 90.69 ರೂ.
-
ರಾಜಸ್ಥಾನ: ಪೆಟ್ರೋಲ್ 105.51 ರೂ., ಡೀಸೆಲ್ 90.96 ರೂ.
-
ಮಧ್ಯಪ್ರದೇಶ: ಪೆಟ್ರೋಲ್ 107.44 ರೂ., ಡೀಸೆಲ್ 92.79 ರೂ.
-
ಬಿಹಾರ: ಪೆಟ್ರೋಲ್ 106.26 ರೂ., ಡೀಸೆಲ್ 92.46 ರೂ.
-
ಪಂಜಾಬ್: ಪೆಟ್ರೋಲ್ 97.97 ರೂ., ಡೀಸೆಲ್ 87.78 ರೂ.
-
ಹರಿಯಾಣ: ಪೆಟ್ರೋಲ್ 95.78 ರೂ., ಡೀಸೆಲ್ 88.22 ರೂ.
ಬೆಲೆ ಏರಿಕೆಯಾಗದೇ ಇರಲು ಕಾರಣವೇನು?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿರಲು ಪ್ರಮುಖ ಕಾರಣ ಚುನಾವಣಾ ಹಿನ್ನೆಲೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ. ಜೊತೆಗೆ, ತೈಲ ಮಾರುಕಟ್ಟೆ ಕಂಪನಿಗಳು ಸದ್ಯಕ್ಕೆ ಬೆಲೆ ಏರಿಕೆಯ ಒತ್ತಡವನ್ನು ಹೀರಿಕೊಳ್ಳುತ್ತಿವೆ ಎಂದು ಮೂಲಗಳು ತಿಳಿಸಿವೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ಕಾರ್ಯಾಚರಣೆಗೆ ಮುಂದಾದ ಬೆನ್ನಲ್ಲೇ, ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸರಬರಾಜಿಗೆ ಅಡಚಣೆ ಉಂಟಾಗುವ ಭೀತಿ ಹೆಚ್ಚಿದೆ. ಈ ಕಾರಣದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 100 ಡಾಲರ್ ಗಡಿ ದಾಟಿದೆ. ಆದರೆ, ಭಾರತ ಸರ್ಕಾರವು ಬೆಲೆ ಏರಿಕೆ ನಿಯಂತ್ರಿಸಲು ಕ್ರಮ ಕೈಗೊಂಡಿರುವುದಾಗಿ ವರದಿಯಾಗಿದೆ.
