ಸೆಪ್ಟೆಂಬರ್ 22ರಿಂದ GST ಕಡಿತ: ಹಲವು ವಸ್ತುಗಳು ಅಗ್ಗ..ಇಲ್ಲಿದೆ ನೋಡಿ ಕಂಪ್ಲೀಟ್ ಲಿಸ್ಟ್

Untitled design 2025 09 04t080101.633

ನವದೆಹಲಿ: ಮಧ್ಯಮ ವರ್ಗ ಮತ್ತು ಸಾಮಾನ್ಯ ಗ್ರಾಹಕರಿಗೆ ದೊಡ್ಡ ಸಂತೋಷದ ಸುದ್ದಿ ತಂದಿದೆ ಕೇಂದ್ರ ಸರ್ಕಾರ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಸುಧಾರಣೆ ತಂದು, ಹಲವಾರು ಅಗತ್ಯ ವಸ್ತುಗಳ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಹೊಸ ತೆರಿಗೆ ದರಗಳು ಸೆಪ್ಟೆಂಬರ್ 22, 2024 ರಿಂದ ಜಾರಿಗೆ ಬರಲಿವೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಎಲ್ಲಾ ರಾಜ್ಯಗಳ ವಿತ್ತ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಿದ್ದ ಈ ಸಭೆಯು ದೇಶದ ಆರ್ಥಿಕತೆಯನ್ನು ಬಲಪಡಿಸುವ ಹಲವು ಕ್ರಮಗಳನ್ನು ಚರ್ಚಿಸಿತ್ತು. ಈಗ ಇರುವ ಶೇ.5, 12, 18 ಮತ್ತು 28ರ ತೆರಿಗೆ ಸ್ಲ್ಯಾಬ್‌ಗಳನ್ನು ರದ್ದುಗೊಳಿಸಿ, ಕೇವಲ ಶೇ.5 ಮತ್ತು ಶೇ.18ರ ಎರಡು ಸ್ಲ್ಯಾಬ್‌ಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ಇದರಿಂದಾಗಿ ಸಾಮಾನ್ಯ ಜನರ ದೈನಂದಿನ ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯ ಕಡಿತವಾಗಲಿದ್ದು, ಮಧ್ಯಮ ವರ್ಗದ ಕುಟುಂಬಗಳು ಹೆಚ್ಚು ಉಳಿತಾಯ ಮಾಡಲು ಸಾಧ್ಯವಾಗಲಿದೆ. ಅಲ್ಲದೆ, ವೈಯಕ್ತಿಕ ಜೀವ ವಿಮೆ ಮತ್ತು ಆರೋಗ್ಯ ವಿಮೆಯ ಪ್ರೀಮಿಯಂಗಳ ಮೇಲಿನ ತೆರಿಗೆಯನ್ನು ಶೇ.18ರಿಂದ ಸಂಪೂರ್ಣ ಶೂನ್ಯಕ್ಕೆ ಇಳಿಸಲಾಗಿದೆ.

ಈ ಬದಲಾವಣೆಯ ಹಿನ್ನೆಲೆಯಲ್ಲಿ ಅಮೆರಿಕದಂತಹ ದೇಶಗಳು ಭಾರತೀಯ ಉತ್ಪನ್ನಗಳ ಮೇಲೆ ಹೇರಿರುವ ದುಬಾರಿ ತೆರಿಗೆಗಳು ರಫ್ತು ವಲಯಕ್ಕೆ ಸಂಕಷ್ಟ ಉಂಟುಮಾಡಿವೆ. ಇದನ್ನು ಸರಿದೂಗಿಸಲು ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಎಸ್‌ಟಿ ಕಡಿತವನ್ನು ಕೈಗೊಳ್ಳಲಾಗಿದೆ. ಮಧ್ಯಮ, ಸಣ್ಣ ಮತ್ತು ಕಿರು ಉದ್ಯಮಗಳು (ಎಂಎಸ್‌ಎಂಇ) ಹಾಗೂ ಸ್ಟಾರ್ಟಪ್‌ಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿ, ಹಾಲಿ 30 ದಿನಗಳ ಗಡುವನ್ನು ಕೇವಲ 3 ದಿನಗಳಿಗೆ ಇಳಿಸುವ ನೀತಿಗೂ ಮಂಡಳಿ ಅನುಮೋದನೆ ನೀಡಿದೆ.

ಇನ್ನು ಮುಂದೆ ಜಿಎಸ್‌ಟಿ ಸ್ಲ್ಯಾಬ್‌ ಶೇ. 5 ಮತ್ತು ಶೇ. 18 ಮಾತ್ರ ಇರಲಿದೆ. ಪಾನ್ ಮಸಾಲಾ, ಸಿಗರೇಟ್, ಕೂಲ್‌ ಡ್ರಿಂಕ್ಸ್‌, ಕಾರ್ಬೊನೇಟೆಡ್ ಪಾನೀಯಗಳು, ಐಷಾರಾಮಿ ಕಾರು, ದೊಡ್ಡ ಎಸ್‌ಯುವಿಗಳಿಗೆ ಶೇ. 40ರಷ್ಟು ಜಿಎಸ್‌ಟಿ ಇರಲಿದೆ.

ಹೊಸ ತೆರಿಗೆ ಸ್ಲ್ಯಾಬ್‌ಗಳ ವಿವರ
ಜಿಎಸ್‌ಟಿಯಿಂದ ವಿನಾಯಿತಿ ಪಡೆದ ಉತ್ಪನ್ನಗಳು
ಜಿಎಸ್‌ಟಿ ದರ: ಶೇ. 5ರ ಉತ್ಪನ್ನಗಳು
ಜಿಎಸ್‌ಟಿ ದರ: ಶೇ. 18ರ ಉತ್ಪನ್ನಗಳು

ಜಿಎಸ್‌ಟಿ ದರ: ಶೇ. 40ರ ಉತ್ಪನ್ನಗಳು

ಪಾನ್ ಮಸಾಲ, ಸಿಗರೇಟ್, ಗುಟ್ಕಾ, ಜಗಿಯುವ ತಂಬಾಕು, ಬೀಡಿಗಳು ಕೂಲ್‌ ಡ್ರಿಂಕ್ಸ್‌, ಕೆಫೀನ್‌ಯುಕ್ತ ಪಾನೀಯಗಳು, ಆಲ್ಕೊಹಾಲಿಕ್‌ ಇಲ್ಲದ ಪಾನೀಯಗಳು 350 ಸಿಸಿ ಮೀರಿದ ಬೈಕ್‌, ವಿಹಾರ ನೌಕೆಗಳು

 

Exit mobile version