ಬೆಂಗಳೂರು: ಹೊಸ ಹಣಕಾಸು ವರ್ಷ (2026-27) ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಪ್ರತಿ ವರ್ಷದಂತೆ ಈ ಬಾರಿಯೂ ಏಪ್ರಿಲ್ 1ರಿಂದ ಹಲವು ಆರ್ಥಿಕ ಬದಲಾವಣೆಗಳು ಜಾರಿಗೆ ಬರಲಿವೆ. ವಿಶೇಷವಾಗಿ ಎಚ್‌ಡಿಎಫ್‌ಸಿ (HDFC), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು ಬಂಧನ್ ಬ್ಯಾಂಕ್‌ಗಳು ತಮ್ಮ ಎಟಿಎಂ (ATM) ವ್ಯವಹಾರದ ಮಿತಿ ಮತ್ತು ಶುಲ್ಕಗಳಲ್ಲಿ ಮಹತ್ವದ ಮಾರ್ಪಾಡುಗಳನ್ನು ಮಾಡಿವೆ. ನೀವು ಈ ಬ್ಯಾಂಕ್‌ಗಳ ಗ್ರಾಹಕರಾಗಿದ್ದರೆ, ಅನಗತ್ಯ ಶುಲ್ಕದಿಂದ ಪಾರಾಗಲು ಈ ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ಡಿಜಿಟಲ್ ಪಾವತಿ ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಹೊಸ ನೀತಿಯನ್ನು ಜಾರಿಗೆ ತಂದಿದೆ. ಇನ್ನು ಮುಂದೆ ನೀವು ಎಟಿಎಂ ಕಾರ್ಡ್ ಇಲ್ಲದೆ ಯುಪಿಐ (UPI) ಮೂಲಕ ಎಟಿಎಂನಿಂದ ಹಣ ಪಡೆದರೂ, ಅದನ್ನು ಸಾಮಾನ್ಯ ಎಟಿಎಂ ವ್ಯವಹಾರ ಎಂದೇ ಪರಿಗಣಿಸಲಾಗುತ್ತದೆ. ಬ್ಯಾಂಕ್ ನಿಯಮದಂತೆ ತಿಂಗಳಿಗೆ ನೀಡಲಾಗುವ 5 ಉಚಿತ ವ್ಯವಹಾರಗಳ ಮಿತಿಯಲ್ಲಿ ಈ ಯುಪಿಐ ವಿತ್‌ಡ್ರಾಯಲ್ ಕೂಡ ಸೇರಿರುತ್ತದೆ. ಅಂದರೆ, ನೀವು 5 ಬಾರಿ ಕಾರ್ಡ್ ಬಳಸಿ ಹಣ ಪಡೆದು, 6ನೇ ಬಾರಿ ಯುಪಿಐ ಮೂಲಕ ಹಣ ಪಡೆದರೆ, ಅದಕ್ಕೆ 23 ರೂ. ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ ಕಾರ್ಡ್ ರಹಿತ ವ್ಯವಹಾರ ಮಾಡುವ ಮುನ್ನ ನಿಮ್ಮ ಉಚಿತ ಮಿತಿಯನ್ನು ಗಮನದಲ್ಲಿಟ್ಟುಕೊಳ್ಳಿ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB):
ಪಿಎನ್‌ಬಿ ತನ್ನ ವಿವಿಧ ಡೆಬಿಟ್ ಕಾರ್ಡ್‌ಗಳ ದಿನದ ನಗದು ಹಿಂಪಡೆಯುವ ಮಿತಿಯನ್ನು ಗಣನೀಯವಾಗಿ ಕಡಿತಗೊಳಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.
-
ಪ್ಲಾಟಿನಂ ಮತ್ತು ಗೋಲ್ಡ್ ಕಾರ್ಡ್: ಈ ಹಿಂದೆ ದಿನಕ್ಕೆ 1 ಲಕ್ಷ ರೂ.ವರೆಗೆ ಹಣ ಪಡೆಯಲು ಅವಕಾಶವಿತ್ತು. ಈಗ ಅದನ್ನು ಕೇವಲ 50,000 ರೂ. ಗೆ ಇಳಿಸಲಾಗಿದೆ.
-
ಸಿಗ್ನೆಚರ್ ಡೆಬಿಟ್ ಕಾರ್ಡ್: ಈ ಕಾರ್ಡ್‌ಗಳ ಮಿತಿಯನ್ನು 1.5 ಲಕ್ಷ ರೂ.ನಿಂದ 75,000 ರೂ. ಗೆ ಇಳಿಕೆ ಮಾಡಲಾಗಿದೆ. ದೊಡ್ಡ ಮೊತ್ತದ ಹಣದ ಅವಶ್ಯಕತೆ ಇರುವವರು ಈಗ ಬ್ಯಾಂಕ್ ಶಾಖೆಗೆ ಭೇಟಿ ನೀಡುವುದು ಅನಿವಾರ್ಯವಾಗಬಹುದು.
ಬಂಧನ್ ಬ್ಯಾಂಕ್
ಬಂಧನ್ ಬ್ಯಾಂಕ್ ತನ್ನ ಗ್ರಾಹಕರಿಗೆ ಮೆಟ್ರೋ ಮತ್ತು ಮೆಟ್ರೋ ಅಲ್ಲದ ನಗರಗಳಿಗೆ ಪ್ರತ್ಯೇಕ ನಿಯಮಗಳನ್ನು ರೂಪಿಸಿದೆ.
-
ಸ್ವಂತ ಬ್ಯಾಂಕ್ ಎಟಿಎಂ: ಎಲ್ಲಾ ನಗರಗಳಲ್ಲಿ 5 ಬಾರಿ ಉಚಿತ ವ್ಯವಹಾರಕ್ಕೆ ಅವಕಾಶವಿದೆ.
-
ಇತರ ಬ್ಯಾಂಕ್ ಎಟಿಎಂ (ಮೆಟ್ರೋ): ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿದಂತೆ 6 ಪ್ರಮುಖ ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕ್ ಎಟಿಎಂ ಬಳಸಿದರೆ ಕೇವಲ 3 ಬಾರಿ ಮಾತ್ರ ಉಚಿತ ಅವಕಾಶವಿರುತ್ತದೆ.
-
ಮೆಟ್ರೋ ಅಲ್ಲದ ನಗರಗಳು: ಇಲ್ಲಿ ಇತರ ಬ್ಯಾಂಕ್ ಎಟಿಎಂಗಳಿಗೆ 5 ಬಾರಿ ಉಚಿತ ಅವಕಾಶ ಮುಂದುವರಿಯಲಿದೆ.
-
ಹಣಕಾಸು ಅಲ್ಲದ ವ್ಯವಹಾರ: ಬ್ಯಾಲೆನ್ಸ್ ಚೆಕ್ ಅಥವಾ ಮಿನಿ ಸ್ಟೇಟ್ಮೆಂಟ್ ಪಡೆಯಲು ಯಾವುದೇ ಮಿತಿ ಅಥವಾ ಶುಲ್ಕ ಇರುವುದಿಲ್ಲ.
ಗ್ರಾಹಕರು ಏನು ಮಾಡಬೇಕು ?
ಬ್ಯಾಂಕುಗಳ ಈ ಹೊಸ ನಿಯಮಗಳು ಏಪ್ರಿಲ್ 1ರಿಂದಲೇ ಅನ್ವಯವಾಗುವುದರಿಂದ, ಗ್ರಾಹಕರು ತಮ್ಮ ತಿಂಗಳ ಎಟಿಎಂ ವ್ಯವಹಾರಗಳನ್ನು ಯೋಜಿತವಾಗಿ ಮಾಡುವುದು ಉತ್ತಮ. ಸಾಧ್ಯವಾದಷ್ಟು ಡಿಜಿಟಲ್ ಪಾವತಿಗಳನ್ನು (GPay/PhonePe) ಬಳಸಿ ಎಟಿಎಂ ಮೇಲಿನ ಅವಲಂಬನೆ
