LPG ಗ್ಯಾಸ್​ ಬಗ್ಗೆ ಕೇಂದ್ರದಿಂದ ಮತ್ತೊಂದು ಹೊಸ ರೂಲ್ಸ್: ಎಲ್‌ಪಿಜಿ ಬುಕಿಂಗ್ ಇನ್ಮುಂದೆ ಕಷ್ಟ, ಕಷ್ಟ!

LPG Crisis

ಭಾರತದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳಿಗೆ ಭಾರೀ ಬೇಡಿಕೆ ಉಂಟಾಗಿದ್ದು, ಪ್ಯಾನಿಕ್ ಬುಕಿಂಗ್‌ನಿಂದಾಗಿ ಬುಕಿಂಗ್ ಸಿಸ್ಟಮ್‌ಗಳು ಒತ್ತಡಕ್ಕೆ ಒಳಗಾಗಿವೆ. ಪಶ್ಚಿಮ ಏಷ್ಯಾದ ಯುದ್ಧ ಸಂಘರ್ಷ (ವಿಶೇಷವಾಗಿ ಹಾರ್ಮುಜ್ ಜಲಸಂಧಿ ಬಂದ್) ಹಿನ್ನೆಲೆಯಲ್ಲಿ ಆಮದು ಪೂರೈಕೆಯಲ್ಲಿ ತೊಂದರೆ ಉಂಟಾಗಿದ್ದರಿಂದ ದೇಶಾದ್ಯಂತ ಗ್ಯಾಸ್ ಸಿಲಿಂಡರ್‌ಗಳ ಕೊರತೆಯ ಭಯ ಹರಡಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ವಾಣಿಜ್ಯ ಸ್ಥಾಪನೆಗಳಿಗೆ ಸಿಲಿಂಡರ್ ಸಿಗದೇ ತೊಂದರೆಯಾಗುತ್ತಿದ್ದರೂ, ಮನೆಗಳಿಗೆ ಪೂರೈಕೆ ಸುರಕ್ಷಿತವಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.

ಆದರೆ ವಾಸ್ತವದಲ್ಲಿ ಜನರು ಭಯದಿಂದ ಮುಂಚಿತವಾಗಿ ಹೆಚ್ಚು ಬುಕ್ ಮಾಡುತ್ತಿದ್ದಾರೆ. ದೈನಂದಿನ ಬುಕಿಂಗ್ ಸಂಖ್ಯೆ ಸರಾಸರಿ 55-57 ಲಕ್ಷದಿಂದ 75-88 ಲಕ್ಷಕ್ಕೆ ಜಿಗಿದಿದೆ. ಇದರಿಂದ ಸರ್ವರ್‌ಗಳು ಕುಸಿಯುತ್ತಿವೆ ಮತ್ತು ಡೆಲಿವರಿ ವಿಳಂಬವಾಗುತ್ತಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಂಯುಕ್ತ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು “ಪ್ಯಾನಿಕ್ ಬುಕಿಂಗ್ ಮತ್ತು ದುರುಪಯೋಗದಿಂದಾಗಿ ಈ ಸಮಸ್ಯೆ ಉಂಟಾಗಿದೆ. ಗೃಹಬಳಕೆಗೆ ಸಾಕಷ್ಟು ಸ್ಟಾಕ್ ಇದೆ, ಆದರೆ ಅಗತ್ಯವಿಲ್ಲದೇ ಬುಕ್ ಮಾಡಬೇಡಿ” ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರದ ಮುಖ್ಯ ನಿರ್ಧಾರಗಳು ಮತ್ತು ಕ್ರಮಗಳು:

ಸರ್ಕಾರದ ಪ್ರಕಾರ, ಗೃಹಬಳಕೆಗೆ ಸಿಲಿಂಡರ್ ಡೆಲಿವರಿ ಸರಾಸರಿ 2.5 ದಿನಗಳಲ್ಲೇ ಆಗುತ್ತದೆ. ಆದ್ದರಿಂದ ಭಯಬಿಟ್ಟು ಅಗತ್ಯವಿದ್ದಾಗ ಮಾತ್ರ ಬುಕ್ ಮಾಡಿ. ಇಲ್ಲದಿದ್ದರೆ ನಿಜವಾಗಿ ಅಗತ್ಯವಿರುವವರಿಗೆ ತೊಂದರೆಯಾಗುತ್ತದೆ.

Exit mobile version