LPG ಸಿಲಿಂಡರ್ ಬುಕ್ಕಿಂಗ್‌ನಲ್ಲಿ ಹೊಸ ನಿಯಮ ಜಾರಿ: ಮೇ 1 ರಿಂದ ಬದಲಾಗಲಿವೆ ಈ 3 ಪ್ರಮುಖ ನಿಯಮಗಳು!

BeFunky collage (74)

ನೀವು ಅಡುಗೆ ಅನಿಲ (LPG) ಬಳಸುವ ಗ್ರಾಹಕರಾಗಿದ್ದರೆ ಈ ಸುದ್ದಿ ನಿಮಗಾಗಿ. ಮೇ 1 ರಿಂದ ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್ ಮತ್ತು ವಿತರಣಾ ವ್ಯವಸ್ಥೆಯಲ್ಲಿ ತೈಲ ಕಂಪನಿಗಳು ಮಹತ್ವದ ಬದಲಾವಣೆಗಳನ್ನು ತರುತ್ತಿವೆ. ಅಕ್ರಮ ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಯುವ ನಿಟ್ಟಿನಲ್ಲಿ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಈ ಕಠಿಣ ಕ್ರಮಗಳನ್ನು ಕೈಗೊಂಡಿವೆ.

ಮೇ 1 ರಿಂದ ಜಾರಿಗೆ ಬರಲಿರುವ 3 ಪ್ರಮುಖ ನಿಯಮಗಳು ಇಲ್ಲಿವೆ:

1. ಬುಕ್ಕಿಂಗ್ ಅವಧಿಯ ಅಂತರ ವಿಸ್ತರಣೆ:

ಇನ್ನು ಮುಂದೆ ನೀವು ಬೇಕೆಂದಾಗ ಸಿಲಿಂಡರ್ ಬುಕ್ ಮಾಡುವಂತಿಲ್ಲ. ನಗರ ಪ್ರದೇಶಗಳಲ್ಲಿ ಎರಡು ಬುಕ್ಕಿಂಗ್‌ಗಳ ನಡುವಿನ ಕನಿಷ್ಠ ಅಂತರವನ್ನು 21 ರಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶದ ಗ್ರಾಹಕರು ಒಂದು ಸಿಲಿಂಡರ್ ಪಡೆದ 45 ದಿನಗಳ ನಂತರವಷ್ಟೇ ಮುಂದಿನ ಬುಕ್ಕಿಂಗ್ ಮಾಡಲು ಅವಕಾಶವಿರುತ್ತದೆ.

2. ಒಟಿಪಿ (OTP) ಇಲ್ಲದೆ ಸಿಲಿಂಡರ್ ಸಿಗಲ್ಲ:

ಮೇ 1 ರಿಂದ ‘ಡೆಲಿವರಿ ಅಥೆಂಟಿಕೇಶನ್ ಕೋಡ್’ (DAC) ಕಡ್ಡಾಯವಾಗಲಿದೆ. ಸಿಲಿಂಡರ್ ವಿತರಣೆ ಮಾಡುವಾಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ಡೆಲಿವರಿ ಬಾಯ್‌ಗೆ ನೀಡಬೇಕು. ಈ ಕೋಡ್ ನೀಡದಿದ್ದರೆ ಸಿಲಿಂಡರ್ ವಿತರಣೆಯಾಗುವುದಿಲ್ಲ. ಇದು ಗ್ಯಾಸ್ ಸೋರಿಕೆಯನ್ನು ತಡೆಗಟ್ಟಲು ಸಹಕಾರಿಯಾಗಲಿದೆ.

3. ಇ – ಕೆವೈಸಿ ಕಡ್ಡಾಯ :

ಉಜ್ವಲ ಯೋಜನೆಯ ಫಲಾನುಭವಿಗಳು ತಕ್ಷಣವೇ ಆಧಾರ್ ಆಧಾರಿತ ಬಯೋಮೆಟ್ರಿಕ್ ಇ-ಕೆವೈಸಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಬ್ಸಿಡಿ ಕಡಿತವಾಗುವ ಸಾಧ್ಯತೆಯಿದೆ.

4. ಸಿಲಿಂಡ‌ರ್ ಬೆಲೆ ಏರಿಕೆ ಭೀತಿ:

ಜೊತೆಗೆ ಜಾಗತಿಕ ಸಂಘರ್ಷದ ಹಿನ್ನೆಲೆಯಲ್ಲಿ ಮೇ 1 ರಂದು ಸಿಲಿಂಡರ್ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಗ್ರಾಹಕರಿಗೆ ಸಲಹೆ: ನಿಮ್ಮ ಗ್ಯಾಸ್ ಏಜೆನ್ಸಿಯಲ್ಲಿ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ತಪ್ಪಿದಲ್ಲಿ ಬುಕ್ಕಿಂಗ್ ಸಮಯದಲ್ಲಿ ತೊಂದರೆಯಾಗಬಹುದು.

Exit mobile version