ಬೆಂಗಳೂರು, ಮಾರ್ಚ್ 30: ಪ್ರತಿನಿತ್ಯ ರಸ್ತೆಗಿಳಿಯುವ ಕೋಟ್ಯಂತರ ವಾಹನಗಳ ಜೀವನಾಡಿಯಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಮುಂದುವರೆದಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರಗಳಲ್ಲಿ ಸಣ್ಣ ಪ್ರಮಾಣದ ಏರಿಳಿಕೆ ಕಂಡುಬಂದಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಇರಾನ್-ಇಸ್ರೇಲ್ ಯುದ್ಧದಿಂದಾಗಿ ಅನಿಶ್ಚಿತತೆ ಮುಂದುವರಿದಿದೆ.
ಬೆಂಗಳೂರಿನಲ್ಲಿ ಇಂದಿನ ಇಂಧನ ದರ
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ದರ ರೂ. 102.96 ಆಗಿದ್ದು, ಡೀಸೆಲ್ ದರ ರೂ. 90.99 ರೂಪಾಯಿಯಲ್ಲಿದೆ. ನಿನ್ನೆಗಿಂತ ಪೆಟ್ರೋಲ್ ದರದಲ್ಲಿ 4 ಪೈಸೆ ಏರಿಕೆಯಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಪೆಟ್ರೋಲ್ ರೂ. 102.99, ಡೀಸೆಲ್ ರೂ. 91.06 ಇದೆ.
ಮಹಾನಗರಗಳ ಇಂಧನ ಬೆಲೆ
ದೇಶದ ಪ್ರಮುಖ ಮಹಾನಗರಗಳಾದ ದೆಹಲಿ, ಮುಂಬೈ, ಚೆನ್ನೈ ಮತ್ತು ಕೊಲ್ಕತ್ತಾಗಳಲ್ಲಿ ಇಂದಿನ ಇಂಧನ ದರ ಈ ಕೆಳಗಿನಂತಿದೆ.
-
ದೆಹಲಿ: ಪೆಟ್ರೋಲ್ ರೂ. 94.77, ಡೀಸೆಲ್ ರೂ. 87.67
-
ಮುಂಬೈ: ಪೆಟ್ರೋಲ್ ರೂ. 103.54, ಡೀಸೆಲ್ ರೂ. 90.03
-
ಚೆನ್ನೈ: ಪೆಟ್ರೋಲ್ ರೂ. 100.80, ಡೀಸೆಲ್ ರೂ. 92.39
-
ಕೊಲ್ಕತ್ತಾ: ಪೆಟ್ರೋಲ್ ರೂ. 105.45, ಡೀಸೆಲ್ ರೂ. 92.02
ಕರ್ನಾಟಕದ ಜಿಲ್ಲಾವಾರು ಪೆಟ್ರೋಲ್ ದರ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರದಲ್ಲಿ ಏರಿಳಿಕೆಯಾಗಿದೆ. ಶಿವಮೊಗ್ಗದಲ್ಲಿ 52 ಪೈಸೆ ಏರಿಕೆಯಾಗಿ ರೂ. 104.22 ದಾಖಲಾಗಿದ್ದರೆ, ತುಮಕೂರಿನಲ್ಲಿ 53 ಪೈಸೆ ಇಳಿಕೆಯಾಗಿ ರೂ. 103.45 ಆಗಿದೆ. ಪ್ರಮುಖ ಜಿಲ್ಲೆಗಳ ಪೆಟ್ರೋಲ್ ದರ ವಿವರ ಹೀಗಿದೆ.
-
ಶಿವಮೊಗ್ಗ: ರೂ. 104.22 (52 ಪೈಸೆ ಏರಿಕೆ)
-
ಯಾದಗಿರಿ: ರೂ. 104.09 (51 ಪೈಸೆ ಏರಿಕೆ)
-
ಚಿಕ್ಕಮಗಳೂರು: ರೂ. 104.21 (01 ಪೈಸೆ ಇಳಿಕೆ)
-
ತುಮಕೂರು: ರೂ. 103.45 (53 ಪೈಸೆ ಇಳಿಕೆ)
-
ಚಿಕ್ಕಬಳ್ಳಾಪುರ: ರೂ. 102.92 (48 ಪೈಸೆ ಇಳಿಕೆ)
-
ಮೈಸೂರು: ರೂ. 102.70 (14 ಪೈಸೆ ಇಳಿಕೆ)
-
ಬೆಳಗಾವಿ: ರೂ. 103.46 (03 ಪೈಸೆ ಏರಿಕೆ)
-
ಹುಬ್ಬಳ್ಳಿ-ಧಾರವಾಡ: ರೂ. 102.73 (ಸ್ಥಿರ)
-
ಮಂಗಳೂರು (ದಕ್ಷಿಣ ಕನ್ನಡ): ರೂ. 102.09 (ಸ್ಥಿರ)
ಕರ್ನಾಟಕದ ಜಿಲ್ಲಾವಾರು ಡೀಸೆಲ್ ದರ
ಡೀಸೆಲ್ ದರದಲ್ಲೂ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದ ಏರಿಳಿಕೆ ಕಂಡುಬಂದಿದೆ. ಶಿವಮೊಗ್ಗದಲ್ಲಿ ಡೀಸೆಲ್ ರೂ. 92.30 ರೂಪಾಯಿಯಲ್ಲಿದ್ದು, ಬೆಂಗಳೂರಿನಲ್ಲಿ ರೂ. 90.99 ಇದೆ. ಪ್ರಮುಖ ಜಿಲ್ಲೆಗಳ ಡೀಸೆಲ್ ದರ.
-
ಶಿವಮೊಗ್ಗ: ರೂ. 92.30
-
ಚಿತ್ರದುರ್ಗ: ರೂ. 92.26
-
ದಾವಣಗೆರೆ: ರೂ. 92.25
-
ಕೊಪ್ಪಳ: ರೂ. 92.23
-
ಬಳ್ಳಾರಿ: ರೂ. 92.22
-
ಮಂಗಳೂರು: ರೂ. 90.18
-
ಉಡುಪಿ: ರೂ. 90.48
-
ಮೈಸೂರು: ರೂ. 90.79
ಇಂಧನ ಬೆಲೆಯಲ್ಲಿ ಏರಿಳಿಕೆ ಏಕೆ?
ಭಾರತದಲ್ಲಿ 2017 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿನಿತ್ಯ ಪರಿಷ್ಕರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ, ವಿನಿಮಯ ದರ ಮತ್ತು ತೆರಿಗೆ ರಚನೆಯನ್ನು ಆಧರಿಸಿ ಇಂಧನ ದರ ನಿರ್ಧಾರವಾಗುತ್ತದೆ. ಇರಾನ್-ಇಸ್ರೇಲ್ ಯುದ್ಧದಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯ ಆತಂಕ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ.
