ರಷ್ಯಾ ತೈಲ ಆಮದಿಗೆ ಅಮೆರಿಕದ 500% ಸುಂಕ ನಿವಾರಣೆಗೆ ಕ್ರಮ: ಎಸ್. ಜೈಶಂಕರ್‌

Untitled design (74)

ನ್ಯೂಯಾರ್ಕ್: ರಷ್ಯಾದಿಂದ ತೈಲ ಆಮದು ಮಾಡಿಕೊಂಡರೆ ಅಮೆರಿಕ ಶೇ.500ರಷ್ಟು ಸುಂಕ ವಿಧಿಸಲಿದೆ ಎಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಅಡ್ಡಿಗಳನ್ನು ಭಾರತ ನಿವಾರಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಮೇಲೆ ಶೇ.500 ಸುಂಕ ವಿಧಿಸುವ ಉದ್ದೇಶಿತ ಮಸೂದೆಗೆ ಸಂಬಂಧಿಸಿದಂತೆ ಭಾರತದ ರಾಯಭಾರಿಯು ಅಮೆರಿಕದ ಸಂಸದ ಲಿಂಡ್ಸೆ ಗ್ರಹಾಮ್ ಜೊತೆ ಸಂಪರ್ಕದಲ್ಲಿದ್ದಾರೆ. “ಈ ದಿಕ್ಕಿನಲ್ಲಿ ಯಾವುದೇ ಬೆಳವಣಿಗೆಗಳು ನಮ್ಮ ಇಂಧನ ಮತ್ತು ಭದ್ರತೆಯ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರಿದರೆ, ನಾವು ಮಾತುಕತೆಗಳ ಮೂಲಕ ಅವುಗಳನ್ನು ಪರಿಹರಿಸುತ್ತೇವೆ,” ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸ್ಪಷ್ಟಪಡಿಸಿದರು.

ಭಾರತದ ಇಂಧನ ಭದ್ರತೆ ಮತ್ತು ಕಳವಳಗಳ ಬಗ್ಗೆ ಅಮೆರಿಕದ ಸಂಸದರ ಗಮನಕ್ಕೆ ತರಲಾಗಿದೆ. “ಒಂದು ವೇಳೆ ಶೇ.500 ಸುಂಕ ಜಾರಿಗೆ ಬಂದರೆ, ಆಗ ಉಂಟಾಗುವ ಅಡ್ಡಿಗಳನ್ನು ನಾವು ಯಶಸ್ವಿಯಾಗಿ ಎದುರಿಸುತ್ತೇವೆ,” ಎಂದು ಜೈಶಂಕರ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಮಸೂದೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸುಂಕವು ಜಾರಿಗೆ ಬಂದರೆ, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಆದರೆ, ಭಾರತವು ಈ ಸವಾಲನ್ನು ರಾಜತಾಂತ್ರಿಕವಾಗಿ ಎದುರಿಸಲು ಸಿದ್ಧವಾಗಿದೆ ಎಂದು ಜೈಶಂಕರ್ ಭರವಸೆ ನೀಡಿದ್ದಾರೆ.

Exit mobile version