ಆಭರಣ ಪ್ರಿಯರಿಗೆ ಬಂಪರ್ ಆಫರ್: ಚಿನ್ನದ ಬೆಲೆ ಮತ್ತಷ್ಟು ಇಳಿಕೆ!

BeFunky collage (21)

ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಕಳೆದ ನಾಲ್ಕೈದು ದಿನಗಳಿಂದ ಹಳದಿ ಲೋಹದ ಬೆಲೆಯಲ್ಲಿ ಕಂಡುಬರುತ್ತಿರುವ ಇಳಿಕೆ ಇಂದೂ ಕೂಡ ಮುಂದುವರಿದಿದೆ. ಇಂದು ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 55 ರೂಪಾಯಿಗಳಷ್ಟು ಕುಸಿತ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆಯೂ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತುಸು ಕುಗಿದೆ.

ಭಾರತದಲ್ಲಿ ಇಂದಿನ ಚಿನ್ನದ ದರಗಳು:

ದೇಶಾದ್ಯಂತ ಇಂದಿನ ಚಿನ್ನದ ಬೆಲೆಯನ್ನು ಗಮನಿಸಿದರೆ, 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,40,200 ರುಪಾಯಿ ಇದೆ. ಅದೇ ರೀತಿ, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 1,52,950 ರುಪಾಯಿ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 11,471 ರುಪಾಯಿಗಳಷ್ಟಿದೆ.

ಬೆಂಗಳೂರು ಹಾಗೂ ವಿವಿಧ ನಗರಗಳ ದರ ಪಟ್ಟಿ:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ ಗ್ರಾಂ 22 ಕ್ಯಾರಟ್ ಚಿನ್ನಕ್ಕೆ 14,020 ರೂ. ನಿಗದಿಯಾಗಿದೆ. ದೆಹಲಿಯಲ್ಲಿ 14,035 ರೂ., ಚೆನ್ನೈನಲ್ಲಿ 14,100 ರೂ. ಹಾಗೂ ಮುಂಬೈ ಮತ್ತು ಕೋಲ್ಕತ್ತಾದಲ್ಲಿ 14,020 ರೂ.ಗಳ ದರವಿದೆ.

ಬೆಳ್ಳಿ ಬೆಲೆ ಯಥಾಸ್ಥಿತಿ:

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಇಂದು ಸ್ಥಿರವಾಗಿದ್ದು, ಪ್ರತಿ ಗ್ರಾಂಗೆ 260 ರೂ. ನಲ್ಲಿದೆ. ಅಂದರೆ 100 ಗ್ರಾಂ ಬೆಳ್ಳಿ ಬೆಲೆ 26,000 ರೂಪಾಯಿಗಳಾಗಿದೆ. ಆದರೆ ಚೆನ್ನೈ, ಕೇರಳ ಮತ್ತು ಭುವನೇಶ್ವರದಂತಹ ನಗರಗಳಲ್ಲಿ ಬೆಳ್ಳಿ ದರ ಪ್ರತಿ ಗ್ರಾಂಗೆ 5 ರೂ. ಕುಸಿತ ಕಂಡು 265 ರೂ. ದಾಖಲಿಸಿದೆ.

ವಿದೇಶಗಳಲ್ಲಿ ಚಿನ್ನದ ದರ ಹೇಗಿದೆ?

ಭಾರತಕ್ಕೆ ಹೋಲಿಸಿದರೆ ವಿದೇಶಗಳಲ್ಲಿ ಚಿನ್ನದ ದರ ಇನ್ನೂ ಕಡಿಮೆ ಇದೆ. ದುಬೈನಲ್ಲಿ ಪ್ರತಿ ಗ್ರಾಂಗೆ ಅಂದಾಜು 13,616 ರೂ. ಇದ್ದರೆ, ಕುವೇತ್‌ನಲ್ಲಿ ಅತಿ ಕಡಿಮೆ ಅಂದರೆ 13,406 ರೂ. ಗಳ ದರವಿದೆ. ಅಮೆರಿಕದಲ್ಲಿ ಪ್ರತಿ ಗ್ರಾಂಗೆ 13,907 ರೂ. ಹಾಗೂ ಸಿಂಗಾಪುರದಲ್ಲಿ 13,934 ರೂ. ಇದೆ.

Exit mobile version