ಭಾರತೀಯ ಸಂಸ್ಕೃತಿಯಲ್ಲಿ ಚಿನ್ನ ಮತ್ತು ಬೆಳ್ಳಿ ಕೇವಲ ಆಭರಣಗಳಲ್ಲ, ಅವು ಆರ್ಥಿಕ ಭದ್ರತೆಯ ಸಂಕೇತವೂ ಹೌದು. ಮದುವೆ, ಹಬ್ಬ ಹರಿದಿನಗಳಿರಲಿ ಭಾರತೀಯರು ಈ ಅಮೂಲ್ಯ ಲೋಹಗಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಇಂದು, ಅಂದರೆ ಜನವರಿ 12, 2026 ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ.
ಚಿನ್ನದ ದರ ಏರಿಕೆಯ ಹಿಂದಿನ ಕಾರಣಗಳು
ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಇಂದು ದೇಶೀಯ ಮಾರುಕಟ್ಟೆಯಲ್ಲೂ ಬಂಗಾರದ ದರ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಹೆಚ್ಚಳ, ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಮತ್ತು ದೇಶೀಯವಾಗಿ ಹೆಚ್ಚುತ್ತಿರುವ ಆಭರಣಗಳ ಬೇಡಿಕೆ ಈ ಬೆಲೆ ಏರಿಕೆಗೆ ಪೂರಕವಾಗಿವೆ. ಮುಖ್ಯವಾಗಿ ಸಾಲು ಸಾಲು ಹಬ್ಬಗಳು ಮತ್ತು ಮದುವೆಯ ಸೀಸನ್ ಆರಂಭವಾಗುತ್ತಿರುವುದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಗಣನೀಯವಾಗಿ ಹೆಚ್ಚಾಗುತ್ತಿದೆ.
ಇಂದಿನ ಚಿನ್ನದ ಬೆಲೆಗಳ ವಿವರ
ಇಂದಿನ ವರದಿಯಂತೆ ಭಾರತದಲ್ಲಿ ಚಿನ್ನದ ದರಗಳು ಈ ಕೆಳಗಿನಂತಿವೆ:
-
24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ): ಇಂದು ಪ್ರತಿ 1 ಗ್ರಾಂ ಚಿನ್ನದ ಬೆಲೆ 13,621 ರೂ. ಆಗಿದೆ. ಇದನ್ನು ಹೂಡಿಕೆಯ ಉದ್ದೇಶಕ್ಕಾಗಿ ಹೆಚ್ಚಾಗಿ ಬಳಸಲಾಗುತ್ತದೆ.
-
22 ಕ್ಯಾರೆಟ್ ಚಿನ್ನ (ಆಭರಣದ ಚಿನ್ನ): ಆಭರಣ ತಯಾರಿಕೆಯಲ್ಲಿ ಬಳಕೆಯಾಗುವ 91.67% ಶುದ್ಧತೆಯ ಈ ಚಿನ್ನದ ಬೆಲೆ ಇಂದು ಪ್ರತಿ 1 ಗ್ರಾಂಗೆ 12,486 ರೂ. ತಲುಪಿದೆ.
ಪ್ರಮುಖ ನಗರಗಳಲ್ಲಿ ಇಂದಿನ ದರ
ಭಾರತದ ವಿವಿಧ ನಗರಗಳಲ್ಲಿ ಸ್ಥಳೀಯ ತೆರಿಗೆ ಮತ್ತು ಮಾರುಕಟ್ಟೆ ಬೇಡಿಕೆಯ ಆಧಾರದ ಮೇಲೆ ಬೆಲೆಗಳಲ್ಲಿ ವ್ಯತ್ಯಾಸವಿರುತ್ತದೆ.
-
ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 24K ಚಿನ್ನಕ್ಕೆ 13,636 ರೂ. ಹಾಗೂ 22K ಚಿನ್ನಕ್ಕೆ 12,501 ರೂ. ಇದೆ.
-
ಮಂಬೈ ಮತ್ತು ಕೋಲ್ಕತ್ತಾ: ಈ ಎರಡೂ ನಗರಗಳಲ್ಲಿ 24K ಚಿನ್ನಕ್ಕೆ 13,621 ರೂ. ಹಾಗೂ 22K ಚಿನ್ನಕ್ಕೆ 12,486 ರೂ. ದರವಿದೆ.
-
ಚೆನ್ನೈ: ದಕ್ಷಿಣ ಭಾರತದ ಪ್ರಮುಖ ಮಾರುಕಟ್ಟೆಯಾದ ಚೆನ್ನೈನಲ್ಲಿ ದರ ಗರಿಷ್ಠ ಮಟ್ಟದಲ್ಲಿದ್ದು, 24K ಗೆ 13,725 ರೂ. ಹಾಗೂ 22K ಗೆ 12,581 ರೂ. ದಾಖಲಾಗಿದೆ.
ಬೆಳ್ಳಿ ಬೆಲೆ
ಚಿನ್ನದ ಬೆಲೆ ಏರಿಕೆಯ ಬೆನ್ನಲ್ಲೇ ಬೆಳ್ಳಿಯ ದರವೂ ಗಗನಕ್ಕೇರಿದೆ. ಕೈಗಾರಿಕಾ ಬೇಡಿಕೆ ಮತ್ತು ಜಾಗತಿಕ ಹೂಡಿಕೆಯ ಪ್ರಭಾವ ಬೆಳ್ಳಿಯ ಮೇಲೆ ನೇರವಾಗಿದ್ದು, ಇಂದು ಭಾರತದಲ್ಲಿ ಒಂದು ಕಿಜಿ ಬೆಳ್ಳಿಯ ಬೆಲೆ ಸರಿಸುಮಾರು 2,42,100 ರೂ. ತಲುಪಿದೆ. ಬೆಳ್ಳಿ 925 (ಸಿಲ್ವರ್ ಸ್ಟರ್ಲಿಂಗ್) ದರ ಪ್ರತಿ ಕಿಜಿಗೆ 2,42,000 ರೂ.ಗಳಲ್ಲಿದೆ.
ನಗರವಾರು ಬೆಳ್ಳಿ ದರ (ಪ್ರತಿ 10 ಗ್ರಾಂಗೆ):
-
ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ: ಇಲ್ಲಿ 999 ಶುದ್ಧತೆಯ ಬೆಳ್ಳಿಗೆ 2,421 ರೂ. ದರವಿದೆ.
-
ಚೆನ್ನೈ: ಇಲ್ಲಿ ಬೆಳ್ಳಿಯ ದರವು ಇತರ ನಗರಗಳಿಗಿಂತ ಹೆಚ್ಚಿದ್ದು, 10 ಗ್ರಾಂಗೆ 2,601 ರೂ. ವಹಿವಾಟು ನಡೆಸುತ್ತಿದೆ.
ಗ್ರಾಹಕರಿಗೆ ಸಲಹೆ
ಬೆಳ್ಳಿಯು ಚಿನ್ನಕ್ಕಿಂತ ಕಡಿಮೆ ದುಬಾರಿಯಾಗಿದ್ದರೂ, ಆಭರಣ ಹೂಡಿಕೆಯಲ್ಲಿ ಇಂದು ಪ್ರಮುಖ ಪಾತ್ರ ವಹಿಸುತ್ತಿದೆ. ಹೂಡಿಕೆದಾರರು ಅಲ್ಪಾವಧಿಯ ಏರಿಳಿತಗಳಿಗೆ ಹೆದರದೆ ದೀರ್ಘಕಾಲದ ಲಾಭಕ್ಕಾಗಿ ಚಿನ್ನವನ್ನು ಆಯ್ದುಕೊಳ್ಳುವುದು ಸೂಕ್ತ. ಆಭರಣ ಖರೀದಿಸುವ ಮುನ್ನ ಶುದ್ಧತೆಯ ಹಾಲ್‌ಮಾರ್ಕ್ (Hallmark) ಪರಿಶೀಲಿಸಿ.
