ಬೆಂಗಳೂರು, ಮಾರ್ಚ್ 30: ಕಳೆದ ವಾರ ನಾಲ್ಕು ದಿನಗಳಿಂದ ಸತತವಾಗಿ ಏರುಗತಿಯಲ್ಲಿದ್ದ ಚಿನ್ನದ ಬೆಲೆ ಇಂದು ಸೋಮವಾರ ಕುಸಿತ ಕಂಡಿದೆ. 10 ಗ್ರಾಮ್ ಚಿನ್ನದ ಬೆಲೆಯಲ್ಲಿ 750 ರೂಪಾಯಿಗಳಷ್ಟು ಕಡಿಮೆಯಾಗಿದ್ದು, ಗ್ರಾಮ್‌ಗೆ 75 ರೂಪಾಯಿಗಳ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಭಾರತದಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ
ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದು 10 ಗ್ರಾಮ್‌ನ 22 ಕ್ಯಾರಟ್ ಚಿನ್ನದ ಬೆಲೆ 1,35,000 ರೂಪಾಯಿಗೆ ಇಳಿದಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,47,280 ರೂಪಾಯಿ ಇದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರೂಪಾಯಿಯಲ್ಲಿದೆ.
ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ:
ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ 13,500 ರೂಪಾಯಿಗೆ ಇಳಿದಿದ್ದು, 24 ಕ್ಯಾರಟ್ ಚಿನ್ನದ ಬೆಲೆ 14,728 ರೂಪಾಯಿ ಇದೆ. ಬೆಳ್ಳಿಯ ಬೆಲೆ 245 ರೂಪಾಯಿಯಲ್ಲಿ ಸ್ಥಿರವಾಗಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ):
-
ಬೆಂಗಳೂರು: 13,500 ರೂ.
-
ಮುಂಬೈ: 13,500 ರೂ.
-
ದೆಹಲಿ: 13,515 ರೂ.
-
ಕೋಲ್ಕತಾ: 13,500 ರೂ.
-
ಚೆನ್ನೈ: 13,600 ರೂ.
-
ಕೇರಳ: 13,500 ರೂ.
-
ಅಹ್ಮದಾಬಾದ್: 13,505 ರೂ.
-
ಜೈಪುರ್: 13,515 ರೂ.
-
ಲಕ್ನೋ: 13,515 ರೂ.
-
ಭುವನೇಶ್ವರ್: 13,500 ರೂ.
ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್ಗೆ):
-
ಬೆಂಗಳೂರು: 245 ರೂ.
-
ಮುಂಬೈ: 245 ರೂ.
-
ದೆಹಲಿ: 245 ರೂ.
-
ಕೋಲ್ಕತಾ: 245 ರೂ.
-
ಚೆನ್ನೈ: 250 ರೂ.
-
ಕೇರಳ: 250 ರೂ.
-
ಅಹ್ಮದಾಬಾದ್: 245 ರೂ.
-
ಜೈಪುರ್: 245 ರೂ.
-
ಲಕ್ನೋ: 245 ರೂ.
-
ಪುಣೆ: 245 ರೂ.
-
ಭುವನೇಶ್ವರ್: 250 ರೂ.
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್‌ಗೆ)
ವಿದೇಶಿ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸ ಕಂಡುಬಂದಿದೆ.
-
ದುಬೈ: 501.25 ಡಿರಾಮ್ (ಸುಮಾರು 12,814 ರೂ.)
-
ಅಮೆರಿಕ: 140.50 ಡಾಲರ್ (ಸುಮಾರು 13,184 ರೂ.)
-
ಸಿಂಗಾಪುರ: 181 ಸಿಂಗಾಪುರ್ ಡಾಲರ್ (ಸುಮಾರು 13,191 ರೂ.)
-
ಮಲೇಷ್ಯಾ: 555 ರಿಂಗಿಟ್ (ಸುಮಾರು 12,956 ರೂ.)
-
ಕತಾರ್: 499 ಕತಾರಿ ರಿಯಾಲ್ (ಸುಮಾರು 12,843 ರೂ.)
-
ಸೌದಿ ಅರೇಬಿಯಾ: 510 ಸೌದಿ ರಿಯಾಲ್ (ಸುಮಾರು 12,754 ರೂ.)
-
ಓಮನ್: 53.15 ಒಮಾನಿ ರಿಯಾಲ್ (ಸುಮಾರು 12,955 ರೂ.)
-
ಕುವೇತ್: 41.23 ಕುವೇತಿ ದಿನಾರ್ (ಸುಮಾರು 12,608 ರೂ.)
ಗ್ರಾಮ್ ಆಧಾರಿತ ಇಂದಿನ ದರಪಟ್ಟಿ
-
24 ಕ್ಯಾರಟ್ (1 ಗ್ರಾಂ): 14,728 ರೂ.
-
22 ಕ್ಯಾರಟ್ (1 ಗ್ರಾಂ): 13,500 ರೂ.
-
18 ಕ್ಯಾರಟ್ (1 ಗ್ರಾಂ): 11,046 ರೂ.
-
ಬೆಳ್ಳಿ (1 ಗ್ರಾಂ): 245 ರೂ.
ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ವ್ಯತ್ಯಯವಾಗದೆ ಸ್ಥಿರತೆ ಕಂಡುಬಂದಿದೆ. ಬೆಳ್ಳಿ ಬೆಲೆಯೂ ಯಥಾಸ್ಥಿತಿಯಲ್ಲಿದೆ. ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿಯ ಬೆಲೆ 100 ಗ್ರಾಮ್‌ಗೆ 25,000 ರೂಪಾಯಿ ಇದೆ. ಹೂಡಿಕೆದಾರರು ಮತ್ತು ಆಭರಣ ಖರೀದಿದಾರರು ಈ ಬೆಲೆ ಇಳಿಕೆಯನ್ನು ಸ್ವಾಗತಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರುಪೇರುಗಳನ್ನು ಅನುಸರಿಸಿ ಚಿನ್ನದ ಬೆಲೆಯಲ್ಲಿ ಏರಿಳಿಕೆ ಮುಂದುವರಿಯುವ ಸಾಧ್ಯತೆಯಿದೆ.
